Asianet Suvarna News

ಹರ್ಷವರ್ಧನ್‌, ಜಾವ್ಡೇಕರ್‌, ರವಿಶಂಕರ್‌ ಪ್ರಸಾದ್‌ ಅಚ್ಚರಿಯ ರಾಜೀನಾಮೆ!

* ಕೇಂದ್ರ ಸಂಪುಟ ಪುನಾರಚನೆಗೂ ಮುನ್ನ ಒಟ್ಟು 12 ಸಚಿವರು ರಾಜೀನಾಮೆ

* ಹರ್ಷವರ್ಧನ್‌, ಜಾವ್ಡೇಕರ್‌, ರವಿಶಂಕರ್‌ ಪ್ರಸಾದ್‌ ಅಚ್ಚರಿಯ ರಾಜೀನಾಮೆ

* ರಾಜೀನಾಮೆ ಕೊಟ್ಟಸಚಿವರ ಖಾತೆ ಯಾರಿಗೆ?

Union Cabinet expansion Ravi Shankar Prasad Prakash Javdekar Harsh Vardhan and Others Resign pod
Author
Bangalore, First Published Jul 8, 2021, 7:59 AM IST
  • Facebook
  • Twitter
  • Whatsapp

ನವದೆಹಲಿ(ಜು.08): ಕೇಂದ್ರ ಸಂಪುಟ ಪುನಾರಚನೆಗೂ ಮುನ್ನ ಒಟ್ಟು 12 ಸಚಿವರು ರಾಜೀನಾಮೆ ನೀಡಿದ್ದಾರೆ. ಅಚ್ಚರಿಯೆಂಬಂತೆ ಪ್ರಮುಖ ಸಚಿವರಾಗಿದ್ದ ಆರೋಗ್ಯ ಸಚಿವ ಹರ್ಷವರ್ಧನ್‌, ಕಾನೂನು ಸಚಿವ ರವಿಶಂಕರ್‌ ಪ್ರಸಾದ್‌, ಪರಿಸರ ಖಾತೆ ಸಚಿವ ಪ್ರಕಾಶ್‌ ಜಾವಡೇಕರ್‌, ಕಾರ್ಮಿಕ ಖಾತೆ ಸಚಿವ ಸಂತೋಷ್‌ ಗಂಗ್ವಾರ್‌, ಶಿಕ್ಷಣ ಖಾತೆ ಸಚಿವ ರಮೇಶ್‌ ಪೋಖ್ರಿಯಾಲ್‌, ಸಣ್ಣ ಕೈಗಾರಿಕಾ ಖಾತೆ ಸಚಿವ ಪ್ರತಾಪ್‌ ಚಂದ್ರ ಸಾರಂಗಿಯನ್ನು ಪ್ರಧಾನಿ ನರೇಂದ್ರ ಮೋದಿ ಕೈಬಿಟ್ಟಿದ್ದಾರೆ.

"

ಈ ಪೈಕಿ ಕೆಲ ಸಚಿವರನ್ನು ವೈಫಲ್ಯದ ಕಾರಣಕ್ಕಾಗಿ ಕೈಬಿಟ್ಟಿದ್ದರೆ, ಇನ್ನು ಕೆಲವರನ್ನು ಆರೋಗ್ಯ ಸಮಸ್ಯೆ ಕಾರಣದಿಂದ ಕೈಬಿಟ್ಟಿದ್ದಾರೆ ಎನ್ನಲಾಗುತ್ತಿದೆ. ಈ ಎಲ್ಲಾ ಸಚಿವರ ರಾಜೀನಾಮೆಯನ್ನು ರಾಷ್ಟ್ರಪತಿ ರಾಮನಾಥ್‌ ಕೋವಿಂದ್‌ ಅಂಗೀಕರಿಸಿದ್ದಾರೆ.

ರಾಜೀನಾಮೆ ಕೊಟ್ಟಸಚಿವರ ಖಾತೆ ಯಾರಿಗೆ?

ಹಳೆಯ ಸಚಿವರು ಹೊಸ ಸಚಿವರು
ರವಿಶಂಕರ್‌ ಪ್ರಸಾದ್‌ (ಕಾನೂನು ಮಾಹಿತಿ ಮತ್ತು ತಂತ್ರಜ್ಞಾನ) ಕಿರಣ್‌ ರಿಜಿಜು ಕಾನೂನು ಮತ್ತು ನ್ಯಾಯ, ಅಶ್ವಿನಿ ವೈಷ್ಣವ್‌- ಮಾಹಿತಿ ತಂತ್ರಜ್ಞಾನ
ಪ್ರಕಾಶ್‌ ಜಾವ್ಡೇಕರ್‌ (ಪರಿಸರ) ಭೂಪೇಂದ್ರ ಯಾದವ್‌
ಸದಾನಂದ ಗೌಡ (ರಾಸಾಯನಿಕ, ರಸಗೊಬ್ಬರ) ಮನ್‌ಸುಖ್‌ ಮಾಂಡವೀಯ
ಹರ್ಷವರ್ಧನ್‌ (ಆರೋಗ್ಯ) ಮನ್‌ಸುಖ್‌ ಮಾಂಡವೀಯ
ಥಾವರ ಚಂದ್‌ ಗೆಹಲೋತ್‌ (ಸಾಮಾಜಿಕ ನ್ಯಾಯ) ವಿರೇಂದ್ರ ಕುಮಾರ್‌
ರಮೇಶ್‌ ಪೋಖ್ರಿಯಾಲ್‌ ನಿಶಾಂಕ್‌ (ಶಿಕ್ಷಣ) ಧಮೇಂದ್ರ ಪ್ರಧಾನ್‌
ಸಂತೋಷ್‌ ಗಂಗ್ವಾರ್‌ (ಕಾರ್ಮಿಕ) ಭೂಪೇಂದ್ರ ಯಾದವ್‌

ರಾಜ್ಯ ಖಾತೆ

ಬಾಬುಲ್‌ ಸುಪ್ರಿಯೋ, (ಪರಿಸರ, ಅರಣ್ಯ) ಅಶ್ವಿನ್‌ಕುಮಾರ್‌ ಚೌಬೆ
ಧೋತ್ರೆ ಸಂಜಯ್‌ ಶಾಮ್‌ ರಾವ್‌ (ಶಿಕ್ಷಣ) ಅನ್ನಪೂರ್ಣ ದೇವಿ
ರತನ್‌ ಲಾಲ್‌ ಕಟಾರಿಯಾ (ಜಲ ಶಕ್ತಿ) ಪ್ರಹ್ಲಾದ್‌ಸಿಂಗ್‌ ಪಟೇಲ್‌
ಪ್ರತಾಪ್‌ ಚಂದ್ರ ಸಾರಂಗಿ (ಸಣ್ಣ ಕೈಗಾರಿಕೆ) ಬಾನು ಪ್ರತಾಪ್‌ಸಿಂಗ್‌
ದೇಬಶ್ರೀ ಚೌಧರಿ (ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ) ಮಂಜುಪಾರ ಮಹೇಂದ್ರಭಾಯ್‌

 

Follow Us:
Download App:
  • android
  • ios