ಬೆಂಗಳೂರು(ಏ.18):  ಕೊರೋನಾ ವೈರಸ್ ನಿಯಂತ್ರಣಕ್ಕೆ ಕೇಂದ್ರ ಹಾಗೂ ಆಯಾ ರಾಜ್ಯ ಸರ್ಕಾರಗಳು ಕಟ್ಟು ನಿಟ್ಟಿನ ನಿರ್ಬಂಧ, ನಿಯಮಗಳನ್ನು ಜಾರಿ ಮಾಡಿದೆ. ಮಾಸ್ಕ್ ಕಡ್ಡಾಯ ಮಾಡಲಾಗಿದೆ. ಕೊರೋನಾ ಅಪಾಯದಿಂದ ತಪ್ಪಿಸಿಕೊಳ್ಳಲು ಮಾಸ್ಕ್ ಪ್ರಮುಖ ಅಸ್ತ್ರ ಅನ್ನೋದು ಮರೆಯಬಾರದು. ಹೀಗೆ ಮಾಸ್ಕ್ ಮಹತ್ವದ ತಿಳಿದಿರುವ ನಿರ್ಗತಿಕನೊಬ್ಬ, ತನ್ನ ಬಳಿ ಇರುವ ಒಂದೇ ಒಂದು ಮಾಸ್ಕ್‌ನ್ನು ತನ್ನ ಮುದ್ದಿನ ನಾಯಿಗೆ ಹಾಕಿದ್ದಾನೆ.

ಕರ್ನಾಟಕದಲ್ಲಿ ಕೊರೋನಾ ಹೆಚ್ಚಳ: ಮತ್ತಷ್ಟು ಟಫ್ ರೂಲ್ಸ್ ಜಾರಿ!

ಈ ಘಟನೆ ಎಲ್ಲಿ ನಡೆದಿದೆ ಅನ್ನೋ ಸ್ಪಷ್ಟ ಮಾಹಿತಿ ಲಭ್ಯವಾಗಿಲ್ಲ. ಆದರೆ ಉತ್ತರ ಭಾರತದಲ್ಲಿ ನಡೆದಿದೆ ಅನ್ನೋದು ಖಚಿತ.  ನಾಯಿಗೆ ಮಾಸ್ಕ್ ಹಾಕಿ, ತಾನು ಮಾಸ್ಕ್ ಇಲ್ಲದೆ ನಗರದಲ್ಲಿ ತಿರುಗಾಡುತ್ತಿರುವ ದೃಶ್ಯ ಸಾಮಾನ್ಯವಾಗಿತ್ತು. ಹೀಗಾಗಿ ಓರ್ವ ಈ ಕುರಿತು ನಿರ್ಗತಿಕನನ್ನು ಪ್ರಶ್ನಿಸಿದ್ದಾನೆ. ಮಾಸ್ಕ್ ಹಾಕಿಕೊಳ್ಳದೇ ನಾಯಿಗೆ ಮಾತ್ರ ಯಾಕೆ ಮಾಸ್ಕ್ ಹಾಕಿರುವೆ ಎಂದು ಪ್ರಶ್ನಿಸಿದ್ದಾನೆ. ಇದಕ್ಕೆ ನಾನು ಸಾಯಬಹುದು ಆದರೆ ನನ್ನ ಮುದ್ದಿನ ನಾಯಿಯನ್ನು ಸಾಯಲು ಬಿಡುವುದಿಲ್ಲ ಎಂದು ಉತ್ತರಿಸಿದ್ದಾನೆ.

 

ದೇಶದಲ್ಲಿ ಏ.25ರ ವೇಳೆಗೆ ಸೋಂಕು ತಾರಕಕ್ಕೆ!

ಕಣ್ಣು ಬಿಟ್ಟ ಮರಿಯಿಂದ ಈ ನಾಯಿಯನ್ನು ಸಾಕಿದ್ದೇನೆ, ಸಲಹಿದ್ದೇನೆ. ಇದು ನನ್ನ ಮಗು ಎಂದು ನಿರ್ಗತಿಕ ಉತ್ತರಿಸಿದ್ದಾನೆ. ಈತನ ಮಾತಿಗೆ ವಿಡಿಯೋ ಮಾಡಿದ ವ್ಯಕ್ತಿ ಶಹಬ್ಬಾಷ್ ಹೇಳಿದ್ದಾನೆ. ಬಳಿಕ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ನಿರ್ಗತಿಕನಿಗೆ ಇನ್ನೊಂದು ಮಾಸ್ಕ್ ಖರೀದಿಸುವ ಶಕ್ತಿ ಇಲ್ಲಿದರಬಹುದು. ಆದರೆ ಆತನಿಗೆ ಮಾಸ್ಕ್ ಮಹತ್ವ ಏನೂ ಅನ್ನೋದು ತಿಳಿದಿದೆ ಎಂದು ಹಲವರು ಪ್ರತಿಕ್ರಿಯೆ ನೀಡಿದ್ದಾರೆ.