ನವ​ದೆ​ಹ​ಲಿ (ಮಾ.05):  ಸೆಂಟ್ರಲ್‌ ವಿಸ್ತಾ ಯೋಜ​ನೆ​ಯಡಿ ನಿರ್ಮಾ​ಣ​ವಾ​ಗು​ತ್ತಿ​ರುವ ನೂತನ ಸಂಸ​ತ್ತಿನ ಕಟ್ಟ​ಡವು 3 ಸುರಂಗ ಮಾರ್ಗಗಳನ್ನು ಹೊಂದಿರಲಿದೆ. ಒಂದು ಸುರಂಗ ಮಾರ್ಗವು ಪ್ರಧಾನಿ ಮನೆಗೆ, ಮತ್ತೊಂದು ಉಪರಾಷ್ಟ್ರಪತಿ ನಿವಾಸಕ್ಕೆ, ಮತ್ತೊಂದು ಮಾರ್ಗವು ಸಂಸತ್‌ ಕಚೇರಿಗೆ ಸಂಪರ್ಕ ಕಲ್ಪಿಸಲಿದೆ.

ಅಧಿವೇಶನದ ವೇಳೆ ಮತ್ತು ಇತರೆ ಸಮಯಗಳಲ್ಲಿ ಅತಿಗಣ್ಯರ ಸಂಚಾರದ ವೇಳೆ ವಾಹನ ಸಂಚಾರದ ಮೇಲೆ ಕೆಲ ಕಾಲ ನಿರ್ಬಂಧ ಹೇರಲಾಗುತ್ತದೆ. ಇನ್ನು ಕೆಲವು ಸಮಯದಲ್ಲಿ ಸಂಚಾರ ದಟ್ಟಣೆಯಿಂದಾಗಿ ಜನಪ್ರತಿನಿಧಿಗಳು ಕೂಡಾ ಸಂಕಷ್ಟಎದುರಿಸಬೇಕಾಗಿ ಬರುತ್ತದೆ. ಈ ಸಮಸ್ಯೆಯನ್ನು ತಪ್ಪಿಸಲು ಮೂರು ಪ್ರತ್ಯೇಕ ಸುರಂಗ ಮಾರ್ಗ ನಿರ್ಮಿಸಲಾಗುವುದು. ಈ ಸುರಂಗ ಮಾರ್ಗ​ಗ​ಳಲ್ಲಿ ವಿವಿ​ಐ​ಪಿ​ಗಳ ಭದ್ರ​ತೆಗೆ ಅಗ​ತ್ಯ​ವಿ​ರುವ ಸುರ​ಕ್ಷತಾ ಕ್ರಮ​ಗ​ಳನ್ನು ಕೈಗೊಳ್ಳ​ಲಾ​ಗಿದ್ದು, ಈ ಯೋಜನೆ ಪೂರ್ತಿ​ಯಾದ ಬಳಿಕ ಪ್ರಧಾನಿ, ಉಪ ರಾಷ್ಟ್ರ​ಪತಿ ಸೇರಿ​ದಂತೆ ಇನ್ನಿ​ತ​ರ ವಿವಿ​ಐ​ಪಿ​ಗ​ಳ ಸಂಸ​ತ್ತಿನ ಆವ​ರಣ ಪ್ರವೇ​ಶ ಮತ್ತು ನಿರ್ಗ​ಮ​ನಕ್ಕೆ ಈಗಿ​ರುವ ಸುರ​ಕ್ಷತಾ ಸಂಕೀ​ರ್ಣ​ತೆ​ಗಳ ನಿಯ​ಮಾ​ವ​ಳಿ​ಗ​ಳು ಸರಳ​ವಾ​ಗ​ಲಿವೆ ಎಂದು ನಿರೀ​ಕ್ಷಿ​ಸ​ಲಾ​ಗಿದೆ.

2020ರಲ್ಲಿ ದೇಶದ ಟೀವಿಗಳಲ್ಲಿ ಪ್ರಧಾನಿ ಮೋದಿ ದರ್ಬಾರ್‌! .

ಸೆಂಟ್ರಲ್‌ ವಿಸ್ತಾ ಯೋಜ​ನೆ​ಯಡಿ ದಕ್ಷಿಣ ಭಾ​ಗ​ದಲ್ಲಿ ಪ್ರಧಾನಿ ಕಚೇರಿ ಹಾಗೂ ಪ್ರಧಾನಿ ನಿವಾ​ಸ, ಉತ್ತರ ಭಾಗ​ದಲ್ಲಿ ಉಪ ರಾಷ್ಟ್ರ​ಪತಿಗಳ ನಿವಾ​ಸ ಹಾಗೂ ಪ್ರಸ್ತುತ ಸಂಚಾರ ಮತ್ತು ಶಕ್ತಿ ಭವನ ಇರುವ ಕಡೆ​ ಸಂಸ​ದರ ಕಚೇ​ರಿ​ಗ​ಳನ್ನು ನಿರ್ಮಿ​ಸ​ಲಾ​ಗು​ತ್ತದೆ.

ಭಾರೀ ಭದ್ರತಾ ಕ್ರಮ​ಗ​ಳನ್ನು ಒಳ​ಗೊಂಡಿ​ರುವ ಸುರಂಗ ಮಾರ್ಗ​ದಲ್ಲಿ ವಿವಿ​ಐ​ಪಿ​ಗಳ ಪ್ರವೇ​ಶಕ್ಕೆ ಮಾತ್ರವೇ ಅವ​ಕಾ​ಶ​ವಿ​ರ​ಲಿದ್ದು, ಸಂಸ​ತ್ತಿನ ಪ್ರವೇ​ಶ​ಕ್ಕೆ ಪ್ರವಾ​ಸಿ​ಗರು ಮತ್ತು ಜನ ಸಾಮಾ​ನ್ಯ​ರಿಗೆ ಪ್ರತ್ಯೇಕ ದ್ವಾರ​ಗ​ಳಿ​ರ​ಲಿವೆ ಎಂದು ಆಂಗ್ಲ ಪತ್ರಿ​ಕೆ​ಯೊಂದು ವರ​ದಿ ಮಾಡಿದೆ.

ಸೆಂಟ್ರಲ್‌ ವಿಸ್ತಾ ಯೋಜ​ನೆ​ಯನ್ನು 2021ರ ನವೆಂಬ​ರ್‌​ನಲ್ಲಿ, ಸಂಸ​ತ್ತಿನ ಕಟ್ಟ​ಡ​ವನ್ನು 2022ರ ಮಾರ್ಚ್ ಮತ್ತು 2024ರ ಮಾರ್ಚ್ ವೇಳೆಗೆ ಸಾಮಾನ್ಯ ಕೇಂದ್ರ ಸಚಿ​ವಾ​ಲ​ಯ​ಗಳ ಕಚೇ​ರಿ​ಗ​ಳನ್ನು ಒಂದೆಡೇ ಇರುವ ಕಟ್ಟ​ಡ​ವನ್ನು ಪೂರ್ಣ​ಗೊ​ಳಿ​ಸು​ವುದು ಕೇಂದ್ರ ಸರ್ಕಾ​ರದ ಗುರಿ​ಯಾ​ಗಿದೆ.