ವಾಷಿಂಗ್ಟನ್(ಏ.15)‌: ಒಂದು ವೇಳೆ ಪಾಕಿಸ್ತಾನ ಸೇನೆ ಗಡಿಯಲ್ಲಿ ಪ್ರತ್ಯಕ್ಷ ಅಥವಾ ಪರೋಕ್ಷವಾಗಿ ಭಾರತವನ್ನು ಪ್ರಚೋದಿಸುವ ಕೆಲಸ ಮಾಡಿದರೆ ಪ್ರಸಕ್ತ ಆಡಳಿತ ನಡೆಸುತ್ತಿರುವ ಮೋದಿ ಸರ್ಕಾರವು ಮಿಲಿಟರಿ ಶಕ್ತಿಯ ಮೂಲಕವೇ ಪ್ರತಿಕಾರ ತೀರಿಸಿಕೊಳ್ಳುವ ಸಾಧ್ಯತೆ, ಈ ಹಿಂದಿನ ಯಾವುದೇ ಸರ್ಕಾರದ ಅವಧಿಗಿಂತ ಹೆಚ್ಚಿದೆ ಎಂದು ವರದಿಯೊಂದು ಹೇಳಿದೆ.

ಪಾಕ್‌ನಲ್ಲಿ ಭುಗಿಲೆದ್ದ ಹಿಂಸಾಚಾರ, ಸಿಕ್ಕಾಕೊಂಡ ಭಾರತದ ಸಿಖ್ ಯಾತ್ರಾರ್ಥಿಗಳು!

ರಾಷ್ಟ್ರೀಯ ಭದ್ರತಾ ಗುಪ್ತಚರ ನಿರ್ದೇಶನಾಲಯದ ಕಚೇರಿ ಅಮೆರಿಕ ಸಂಸತ್ತಿಗೆ ಸಲ್ಲಿಸಿರುವ ವರದಿಯಲ್ಲಿ, ಭಾರತ ಮತ್ತು ಪಾಕಿಸ್ತಾನದ ಮಧ್ಯೆ ಸಾಂಪ್ರದಾಯಿಕ ಯುದ್ಧ ಆಗುವ ಸಾಧ್ಯತೆ ತೀರಾ ಕಡಿಮೆ. ಆದರೆ, ಎರಡು ದೇಶಗಳ ನಡುವಿವೆ ಬಿಕ್ಕಟ್ಟು ತೀವ್ರ ಸ್ವರೂಪ ಪಡೆದುಕೊಳ್ಳುವ ಸಾಧ್ಯತೆಯನ್ನು ತಳ್ಳಿಹಾಕುವಂತಿಲ್ಲ.

ಒಂದು ವೇಳೆ ಗಡಿಯಲ್ಲಿ ಪಾಕಿಸ್ತಾನ ಸೇನೆ ಪ್ರಚೋದಿಸಿದರೆ ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಭಾರತೀಯ ಸೇನೆ ಹಿಂದಿಗಿಂತಲೂ ತೀಕ್ಷ$್ಣವಾಗಿ ಪ್ರತಿಕ್ರಿಯಿಸುವ ಎಲ್ಲಾ ಸಾಧ್ಯತೆಗಳು ಇವೆ ಎಂದು ತಿಳಿಸಲಾಗಿದೆ.

ಪಾಕ್ ಬ್ಯಾಟ್ಸ್‌ಮನ್ ಮಾತ್ರವಲ್ಲ, ಪತ್ರಕರ್ತನಿಗೂ ತಿರುಗೇಟು ನೀಡಿದ ವೆಂಕಟೇಶ್ ಪ್ರಸಾದ್!