ಬೆಂಗಳೂರು(ಏ.11);  ಭಾರತದ ಮಾಜಿ ವೇಗಿ, ಕನ್ನಡಿಗ ವೆಂಕಟೇಶ್ ಪ್ರಸಾದ್ ಕೆಣಕಿದರೆ ಯಾವ ರೀತಿ ತಿರುಗೇಟು ನೀಡುತ್ತಾರೆ ಅನ್ನೋದನ್ನು ಮೈದಾನದಲ್ಲೇ ಸಾಬೀತು ಪಡಿಸಿದ ಕ್ರಿಕೆಟಿಗ. ಇದಕ್ಕೆ 1996ರ ಭಾರತ ಹಾಗೂ ಪಾಕಿಸ್ತಾನ ನಡುವಿನ ವಿಶ್ವಕಪ್ ಪಂದ್ಯವೇ ಸಾಕ್ಷಿ. ಇದೀಗ ಇದೇ ಸಾಧನೆ ಕೆಣಕಿದ ಪಾಕಿಸ್ತಾನ ಪತ್ರಕರ್ತನಿಗೆ ವೆಂಕಟೇಶ್ ಪ್ರಸಾದ್ ಕಡಕ್ ತಿರುಗೇಟು ನೀಡಿದ್ದಾರೆ.

ನೆನಪಿದ್ಯಾ ಇವರಿಬ್ಬರ ಜಂಗಿ ಕುಸ್ತಿ: ನೋಡಿ ಹೆಂಗೈತೆ ಇವ್ರ ದೋಸ್ತಿ!.

ಕಳೆದ ಕೆಲ ದಿನಗಳಿಂದ ಮಾಜಿ ನಾಯಕ ರಾಹುಲ್ ದ್ರಾವಿಡ್ ಅವರ ಇಂದಿರಾ ನಗರ ಗೂಂಡ ಜಾಹೀರಾತು ಭಾರಿ ಸದ್ದು ಮಾಡುತ್ತಿದೆ. ಈ ಕುರಿತ ಮೆಮೆ ವೈರಲ್ ಆಗಿದೆ. ಈ ಕರಿತು ವೆಂಕಟೇಶ್ ಪ್ರಸಾದ್, 1996ರ ಇಂಡೋ-ಪಾಕ್ ನಡುವಿನ ಪಂದ್ಯದ ಫೋಟೋ ಹಂಚಿಕೊಂಡು ಇಂದಿರಾ ನಗರ ಗೂಂಡಾ ಎಂದು ಮೆಮೆ ಮಾಡಿದ್ದರು. ಇದಕ್ಕೆ ಪಾಕಿಸ್ತಾನ ಪತ್ರಕರ್ತ ನಜೀಬ್ ಉಲ್ ಹಸ್ನೈನ್ ಕೆಣಕುವ ಪ್ರಯತ್ನ ಮಾಡಿದ್ದರು.

 

ವೆಂಕಟೇಶ್ ಪ್ರಸಾದ್ ಕ್ರಿಕೆಟ್ ಜೀವನದಲ್ಲಿ ಇದೊಂದೆ ಸಾಧನೆ ಎಂದು ಟ್ವೀಟ್ ಮಾಡಿದ್ದರು. ಈ ಟ್ವೀಟ್‌ಗೆ ಭಾರತ ಹಾಗೂ ವಿಶ್ವದ ಕ್ರಿಕೆಟ್ ಅಭಿಮಾನಿಗಳಿಂದ ಬಾರಿ ಟೀಕೆ ವ್ಯಕ್ತವಾಗಿತ್ತು. ಇದರ ಬೆನ್ನಲ್ಲೇ ವೆಂಕಟೇಶ್ ಪ್ರಸಾದ್ ತಕ್ಕ ತಿರುಗೇಟು ನೀಡಿದ್ದಾರೆ.

ನಜೀಬ್ ಸಹೋದರ, ಇದೊಂದೆ ಅಲ್ಲ, ನಂತರದ  1999ರಲ್ಲಿ ಇಂಗ್ಲೆಂಡ್‌ನಲ್ಲಿ ನಡೆದ ವಿಶ್ವಕಪ್ ಟೂರ್ನಿಯಲ್ಲಿ ಪಾಕಿಸ್ತಾನ ವಿರುದ್ಧ 27 ರನ್ ನೀಡಿ 5 ವಿಕೆಟ್ ಕಬಳಿಸಿದ್ದೆ. ಹೀಗಾಗಿ ಪಾಕಿಸ್ತಾನಕ್ಕೆ 228 ರನ್ ಚೇಸ್ ಮಾಡಲು ಸಾಧ್ಯವಾಗದೆ ಸೋಲೊಪ್ಪಿಕೊಂಡಿತು. ಶುಭವಾಗಲಿ ಎಂದು ಪ್ರಸಾದ್ ತಿರುಗೇಟು ನೀಡಿದ್ದಾರೆ.

1996ರ ಇಂಡೋ-ಪಾಕ್ ಪಂದ್ಯ:
1996ರಲ್ಲಿ ವಿಶ್ವಕಪ್ ಟೂರ್ನಿಯಲ್ಲಿ ಭಾರತ ಹಾಗೂ ಪಾಕಿಸ್ತಾನ ಬೆಂಗಳೂರಿ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಮುಖಾಮುಖಿಯಾಗಿತ್ತು. ಬ್ಯಾಟಿಂಗ್ ಮಾಡುತ್ತಿದ್ದ ಅಮಿರ್ ಸೊಹೈಲ್ ಎರಡು ಬೌಂಡರಿ ಸಿಡಿಸಿ ನಿನ್ನ ಪ್ರತಿ ಎಸೆತದಲ್ಲೂ ಇದೇ ಕಡೆ ಬೌಂಡರಿ ಭಾರಿಸುತ್ತೇನೆ ಎಂದು ವೆಂಕಟೇಶ್ ಪ್ರಸಾದ್ ಕೆಣಕಿದ್ದರು. 

ಮರು ಎಸೆತದಲ್ಲೇ ವೆಂಕಟೇಶ್ ಪ್ರಸಾದ್, ಅಮಿರ್ ಸೊಹೈಲ್ ಕ್ಲೀನ್ ಬೋಲ್ಡ್ ಮಾಡಿ, ಈ ಕಡೆಯಿಂದ ಪೆವಿಲಿಯನ್ ಹೋಗು ಎಂದು ಕೈ ತೋರಿಸಿ ತಿರುಗೇಟು ನೀಡಿದ್ದರು. ಕ್ರಿಕೆಟ್‌ನಲ್ಲಿ ತಕ್ಕ ತಿರುಗೇಟು ನೀಡಿದ ಪ್ರಸಾದ್, ಇದೀಗ ಪಾಕಿಸ್ತಾನ ಪತ್ರಕರ್ತನಿಗೂ ತಿರುಗೇಟು ನೀಡಿದ್ದಾರೆ.