ರಾಮ ಮಂದಿರ ಕಾರ್ಯಕ್ರಮದಿಂದ ಉಮಾ ಭಾರತಿ ದೂರ: ಕಾರಣವೂ ಬಹಿರಂಗ!

ಭವ್ಯ ರಾಮ ಮಂದಿರ ಭೂಮಿ ಪೂಜೆ ಕಾರ್ಯಕ್ರಮಕ್ಕೆ ಕ್ಷಣಗಣನೆ| ಖುದ್ದು ಪ್ರಧಾನಿ ಮೋದಿಯಿಂದಲೇ ಭೂಮಿ ಪೂಜೆ| ಭೂಮಿ ಪೂಜೆ ಕಾರ್ಯಕ್ರಮದಿಂದ ಬಿಜೆಪಿ ನಾಯಕಿ ಉಮಾ ಭಾರತಿ ದೂರ!

Uma Bharti to stay away from Ram Mandir Bhoomi Pujan event as Covid precaution

ಅಯೋಧ್ಯೆ(ಆ.03): ದೇಶದಲ್ಲಿ ಕೊರೋನಾ ವೈರಸ್ ಸಂಕ್ರಮಣ ದಿನೇ ದಿನೇ ಹೆಚ್ಚುತ್ತಿದೆ. ಇದನ್ನು ಗಮನದಲ್ಲಿಟ್ಟುಕೊಂಡು ಬಿಜೆಪಿ ನಾಯಕಿ ಉಮಾ ಭಾರತಿ ಅಯೋಧ್ಯೆ ಭೂಮಿ ಪೂಜೆಯಲ್ಲಿ ಭಾಗವಹಿಸುವುದಿಲ್ಲ ಎಂದಿದ್ದಾರೆ. ತಾನು ಸರಯೂ ನದಿ ತಟದಲ್ಲೇ ಇರುತ್ತೇನೆ ಹಾಗೂ ಕಾರ್ಯಕ್ರಮ ಮುಗಿದ ಬಳಿಕ ರಾಮಲಲ್ಲಾನ ದರ್ಶನ ಪಡೆಯುವುದಾಗಿ ಹೇಳಿದ್ದಾರೆ. ಗೃಹ ಸಚಿವ ಅಮಿತ್ ಶಾಗೆ ಕೊರೋನಾ ವೈರಸ್ ಸೋಂಕು ದೃಢಪಟ್ಟ ಬಳಿಕ ಅವರು ಈ ನಿರ್ಧಾರ ತೆಗೆದುಕೊಂಡಿದ್ದಾರೆ.

ರಾಮ ಮಂದಿರ ಭೂಮಿ ಪೂಜೆ ಆಮಂತ್ರಣ ಪತ್ರಿಕೆ ವೈರಲ್: ಮೋದಿ ಜೊತೆ ಮೂವರ ಹೆಸರು!

ಈ ಸಂಬಂಧ ಪ್ರತಿಕ್ರಿಯಿಸಿರುವ ಉಮಾ ಭಾರತಿ 'ನಾನು ಅಮಿತ್ ಶಾ ಹಾಗೂ ಇನ್ನು ಕೆಲ ನಾಯಕರು ಕೊರೋನಾ ಪಾಸಿಟಿವ್ ಆಗಿರುವುದು ತಿಳಿದು ಬಂತು. ಆವಾಗಿಂದಲೇ ನಾನು ಅಯೋಧ್ಯೆಯ ಮಂದಿರದ ಶಿಲಾನ್ಯಾಸ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವವರ ಅದರಲ್ಲೂ ವಿಶೇಷವಾಗಿ ಮೋದಿ ಕುರಿತು ಚಿಂತಿತಳಾಗಿದ್ದೇನೆ. ಸದ್ಯ ನಾನು ರಾಮ ಜನ್ಮಭೂಮಿ ನ್ಯಾಸ್ ಅಧಿಕಾರಿಗಳಿಗೆ ಶಿಲಾನ್ಯಾಸ ಕಾರ್ಯಕ್ರಮದ ಮುಹೂರ್ತದ ವೇಳೆ ಸರಯೂ ನದಿ ತಟದಲ್ಲಿ ಇರುವುದಾಗಿ ಹೇಳಿದ್ದೇನೆ' ಎಂದಿದ್ದಾರೆ.

ಭೂಮಿಪೂಜೆ ದೂರದರ್ಶನದಲ್ಲಿ ನೇರ ಪ್ರಸಾರ!

ಭೋಪಾಲ್‌ನಿಂದ ಇಂದು(ಸೋಮವಾರ) ತೆರಳುವ ಸಂಬಂಧ ಆತಂಕ ವ್ಯಕ್ತಪಡಿಸಿರುವ ಉಮಾ ಭಾರತಿ ಅಯೋಧ್ಯೆಯಲ್ಲಿ ಸೋಂಕಿತರನ್ನು ಭೇಟಿಯಾಗುವ ಸಾಧ್ಯತೆ ಇದೆ. ಹೀಗಿರುವಾಗ ಮೋದಿ ಸೇರಿ ಅನೇಕ ಮಂದಿ ಅಲ್ಲಿ ಉಪಸ್ಥಿತರಿರುತ್ತಾರೆ. ಹೀಗಾಗಿ ಆ ಸ್ಥಳದಿಂದ ನಾನು ಕೊಂಚ ದೂರದಲ್ಲಿರುತ್ತೇನೆ ಆಗೂ ಎಲ್ಲರೂ ಅಲ್ಲಿಂದ ತೆರಳಿದ ಬಳಿಕ ರಾಮಲಲ್ಲಾನ ದರ್ಶನ ಪಡೆಯುತ್ತೇನೆ ಎಂದಿದ್ದಾರೆ. ಈ ಸಂಬಂಧ ಪಿಎಂಒಗೂ ಸೂಚನೆ ಕೊಟ್ಟಿದ್ದೇನೆ ಎಂದಿದ್ದಾರೆ. 
 

Latest Videos
Follow Us:
Download App:
  • android
  • ios