ಭೂಮಿಪೂಜೆ ದೂರದರ್ಶನದಲ್ಲಿ ನೇರ ಪ್ರಸಾರ!

ಭೂಮಿಪೂಜೆ ದೂರದರ್ಶನದಲ್ಲಿ ನೇರ ಪ್ರಸಾರ| ನಾಳೆ ಸಂಜೆ ದೀಪಗಳಲ್ಲಿ ಶೃಂಗಾರಗೊಂಡ ಅಯೋಧ್ಯೆಯ ನೇರಪ್ರಸಾರ| ನಾಡಿದ್ದು ಬೆಳಗ್ಗೆ 6 ಗಂಟೆಯಿಂದಲೇ ರಾಮನ ಕುರಿತಾದ ಕಾರ‍್ಯಕ್ರಮಗಳು| ರಾಮಮಂದಿರ ಬಗ್ಗೆ ವಿಶ್ವದ ಕಾತುರತೆ, ಭಕ್ತರ ಹರ್ಷೋದ್ಘಾರಗಳ ಪ್ರಸಾರ| ಮಧ್ಯಾಹ್ನ 12 ಗಂಟೆಯಿಂದ ರಾಮಮಂದಿರದ ಶಂಕುಸ್ಥಾಪನೆ ನೇರ ಪ್ರಸಾರ

Ram temple bhoomi pujan will be aired live by Doordarshan

ನವದೆಹಲಿ(ಆ.03): ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣದ ಶಿಲಾನ್ಯಾಸ ಕಾರ್ಯಕ್ರಮವನ್ನು ಸರ್ಕಾರಿ ಸ್ವಾಮ್ಯದ ಡಿಡಿ ನ್ಯಾಷನಲ್‌ ಮತ್ತು ಡಿಡಿ ನ್ಯೂಸ್‌ಲೈವ್‌ ವಾಹಿನಿಗಳಲ್ಲಿ ಪ್ರಸಾರ ಮಾಡಲಾಗುತ್ತದೆ ಎಂದು ಪ್ರಸಾರ ಭಾರತಿ ತಿಳಿಸಿದೆ. ಬುಧವಾರ ಪ್ರಧಾನಿ ನರೇಂದ್ರ ಮೋದಿ ಅವರು 40 ಕೇಜಿಯ ಬೆಳ್ಳಿ ಇಟ್ಟಿಗೆಯನ್ನಿಟ್ಟು ದೇಗುಲದ ಭೂಮಿ ಪೂಜೆ ನೆರವೇರಿಸಲಿದ್ದಾರೆ.

ರಾಮ ಮಂದಿರಕ್ಕೆ ಹುತಾತ್ಮ ಯೋಧರ ಮನೆಯ ಮಣ್ಣು!

ಮಂದಿರದ ಭೂಮಿ ಪೂಜೆಯ ಪೂರ್ವ ದಿನವಾದ ಮಂಗಳವಾರ ಅಂದರೆ ನಾಳೆ ರಾತ್ರಿ 7 ಗಂಟೆಯಿಂದ 8 ಗಂಟೆವರೆಗೆ ದೀಪದಿಂದ ಅಲಂಕೃತಗೊಂಡಿರುವ ಅಯೋಧ್ಯೆಯ ಕುರಿತಾದ ವಿಶೇಷ ನೇರ ಪ್ರಸಾರ ಕಾರ್ಯಕ್ರಮ ಪ್ರಸಾರವಾಗಲಿದೆ. ಆ.5ರಂದು ಬೆಳಗ್ಗೆ 6 ಗಂಟೆಯಿಂದಲೇ ಈ ವಾಹಿನಿಗಳಲ್ಲಿ ದೇವಸ್ಥಾನದ ಶಂಕು ಸ್ಥಾಪನೆಗೆ ಸಂಬಂಧಿಸಿದ ಕಾರ್ಯಕ್ರಮಗಳು ಪ್ರಸಾರವಾಗಲಿವೆ.

ಉಗ್ರ ದಾಳಿ ಮುನ್ನೆಚ್ಚರಿಕೆ: ಅಯೋಧ್ಯೇಲಿ ಭಾರೀ ಕಟ್ಟೆಚ್ಚರ!

ಇದರನ್ವಯ ರಾಮಮಮಂದಿರ ಬಗ್ಗೆ ವಿಶ್ವಾದ್ಯಂತ ಜನರ ನಿರೀಕ್ಷೆಗಳು, ಭಕ್ತರ ಅಭಿಪ್ರಾಯ ಮತ್ತು ಹರ್ಷೋದ್ಘಾರಗಳು, ಮಧ್ಯಾಹ್ನ 12 ಗಂಟೆಯಿಂದ ಭೂಮಿ ಪೂಜೆಯ ನೇರ ಪ್ರಸಾರ ಕಾರ್ಯಕ್ರಮಗಳು ಪ್ರಸಾರವಾಗಲಿವೆ. ಅಲ್ಲದೆ, ಹನುಮಾನ್‌ಗಡಿ, ರಾಮಮಂದಿರ ಸೇರಿದಂತೆ ಅಯೋಧ್ಯೆಯಲ್ಲಿರುವ ಇತರ ಪ್ರದೇಶಗಳಲ್ಲಿ ಮನೆ ಮಾಡಿದ ಸಂಭ್ರಮ-ಸಡಗರದ ದೃಶ್ಯಾವಳಿಗಳು ವಾಹಿನಿಗಳಲ್ಲಿ ಮೂಡಿಬರಲಿದೆ.

Latest Videos
Follow Us:
Download App:
  • android
  • ios