ಇಂಗ್ಲೆಂಡ್‌ನ ಹಿರಿಯ ಮಾನವಶಾಸ್ತ್ರಜ್ಞ ಒಸೆಲ್ಲಾ ದುಬೈ ಮೂಲಕ ತಿರುವನಂತಪುರಂಗೆ ಬಂದಿಳಿದ ಒಸೆಲ್ಲಾ ಪ್ರವೇಶ ನೀಡದೇ ವಾಪಸ್ ಕಳುಹಿಸಿದ ಏರ್‌ಪೋರ್ಟ್ ಸಿಬ್ಬಂದಿ
ತಿರುವನಂತಪುರಂ (ಕೇರಳ): ತಿರುವನಂತಪುರಂ ವಿಮಾನ ನಿಲ್ದಾಣಕ್ಕೆ ಬಂದಿಳಿದ ಹಿರಿಯ ಮಾನವಶಾಸ್ತ್ರಜ್ಞ ಮತ್ತು ಸಮಾಜಶಾಸ್ತ್ರಜ್ಞ ಫಿಲಿಪ್ಪೊ ಒಸೆಲ್ಲಾ ಅವರಿಗೆ ದೇಶ ಪ್ರವೇಶಕ್ಕೆ ಅನುಮತಿ ನಿರಾಕರಿಸಿ ವಾಪಸ್ ಕಳುಹಿಸಲಾಗಿದೆ. ದುಬೈ ಮೂಲಕ ಆಗಮಿಸಿದ ಅವರನ್ನು ದುಬೈಗೆ ವಾಪಸ್ ಕಳುಹಿಸಲಾಗಿದ್ದು ಅಲ್ಲಿಂದ ಯುಕೆಗೆ ಅವರು ಮರಳಲಿದ್ದಾರೆ.
ಇಲ್ಲಿನ ವಿಮಾನ ನಿಲ್ದಾಣಕ್ಕೆ (airport) ಆಗಮಿಸಿದ ಅವರನ್ನು ಅಧಿಕಾರಿಯೊಬ್ಬರು ಇಮಿಗ್ರೇಷನ್ ಡೆಸ್ಕ್‌ಗೆ (immigration desk)ಕರೆದೊಯ್ದರು ಮತ್ತು ಸ್ವಲ್ಪ ಸಮಯದ ನಂತರ ಅವರನ್ನು ಗಡೀಪಾರು ಮಾಡಲಾಗುತ್ತಿದೆ ಎಂದು ತಿಳಿಸಲಾಯಿತು. ಗಡಿಪಾರು (deportation) ಮಾಡಲು ಏನು ಕಾರಣ ಎಂಬುದನ್ನು ತಿಳಿಸದೇ ವಿಮಾನ ನಿಲ್ದಾಣದ ಅಧಿಕಾರಿಗಳು ಬಾಯಿ ಮುಚ್ಚಿಕೊಂಡಿದ್ದರು. ಈ ಬಗ್ಗೆ ಕೇಳಿದಾಗ ತಾವು ತಮ್ಮ ಕರ್ತವ್ಯವನ್ನು ಮಾಡುತ್ತಿರುವುದಾಗಿ ಏರ್‌ಪೋರ್ಟ್ ಸಿಬ್ಬಂದಿ ಹೇಳಿದ್ದಾರೆ ಎಂದು ವರದಿಯಾಗಿದೆ.
ಐಪಿಎಸ್ ಅಧಿಕಾರಿಯ ಬ್ಯಾಗ್ ಚೆಕ್ ಮಾಡಿದ ಏರ್‌ಪೋರ್ಟ್ ಅಧಿಕಾರಿಗಳಿಗೆ ಶಾಕ್
ಸಸೆಕ್ಸ್ ವಿಶ್ವವಿದ್ಯಾನಿಲಯದಲ್ಲಿ (University of Sussex) ಮಾನವಶಾಸ್ತ್ರ (Anthropology) ಮತ್ತು ದಕ್ಷಿಣ ಏಷ್ಯಾ ಅಧ್ಯಯನಗಳ (South Asian Studies) ಪ್ರಾಧ್ಯಾಪಕರಾಗಿರುವ 65 ವರ್ಷದ ಒಸೆಲ್ಲಾ (Osella) ಅವರು ಕೇರಳದ (Kerala) ಬಗ್ಗೆ ಪರಿಣತರಾಗಿದ್ದು, ಇಂದು (ಶುಕ್ರವಾರ) ನಡೆಯಲಿರುವ ಸೆಮಿನಾರ್‌ನಲ್ಲಿ ಭಾಗವಹಿಸಲು ಇಲ್ಲಿಗೆ ಆಗಮಿಸಿದ್ದರು. ಅಲ್ಲದೇ ಒಸೆಲ್ಲಾ ಅವರು ಏಪ್ರಿಲ್ ವರೆಗೆ ಮಾನ್ಯವಾದ ಸಂಶೋಧನಾ ವೀಸಾವನ್ನು (research visa) ತಮ್ಮ ಬಳಿ ಹೊಂದಿದ್ದರು ಮತ್ತು ಅವರ ವಾಪಸಾತಿಯನ್ನು ಅವಧಿಗೆ ಮುಂಚೆಯೇ ನಿಗದಿಪಡಿಸಲಾಗಿತ್ತು. ಆದಾಗ್ಯೂ ವಿಮಾನ ನಿಲ್ದಾಣ ಸಿಬ್ಬಂದಿ ಏಕೆ ಹೀಗೆ ಮಾಡಿದರು ಎಂಬುದು ನಿಗೂಢವಾಗಿ ಉಳಿದಿದೆ.
ಕೇಂದ್ರ ಸರ್ಕಾರದ ಖಾಸಗೀಕರಣ ಸ್ಕೀಮ್ ಅಡಿಯಲ್ಲಿ ಹಲವು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಗಳ ನಿರ್ವಹಣೆ ಖಾಸಗಿ ಮಾಲೀಕತ್ವಕ್ಕೆ ನೀಡಲಾಗಿದೆ. ಇದರಡಿ ಕೇರಳದ ತಿರುವನಂತಪುರಂ ವಿಮಾನ ನಿಲ್ದಾಣ ಈಗಾಗಲೇ ಅದಾನಿ ಗ್ರೂಪ್ ಖರೀದಿಸಿತ್ತು. ಇದೀಗ ಅಧಿಕೃತವಾಗಿ ತಿರುವನಂತಪುರಂ ಏರ್‌ಪೋರ್ಟ್ ಅದಾನಿ ಗ್ರೂಪ್‌ಗೆ ಹಸ್ತಾಂತರಿಸಲಾಗಿದೆ. ಕೇರಳ ಆಡಳಿತಾರೂಢ ಎಲ್‌ಡಿಎಫ್ ಹಾಗೂ ವಿರೋಧ ಪಕ್ಷವಾದ ಯುಡಿಎಫ್ ತೀವ್ರ ವಿರೋಧದ ನಡುವೆಯೂ ಕೇಂದ್ರ ಸರ್ಕಾರ ಎಲ್ಲಾ ಕಾನೂನಾತ್ಮಕ ಪ್ರಕ್ರಿಯೆ ಮುಗಿಸಿ ವಿಮಾನ ನಿಲ್ದಾವನ್ನು ಅದಾನಿ ಗ್ರೂಪ್‌ಗೆ ಹಸ್ತಾಂತರಿಸಿದೆ. ಏರ್‌ಪೋರ್ಟ್ ಸ್ವಾಧೀನಪಡಿಸಿಕೊಂಡ ಅದಾನಿ ಗ್ರೂಪ್ ಸಂತಸವನ್ನು ಟ್ವಿಟರ್ ಮೂಲಕ ಹಂಚಿಕೊಂಡಿದೆ.
ಅದಾನಿ ಗ್ರೂಪ್‌ಗೆ ತಿರುವನಂತಪುರಂ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಹಸ್ತಾಂತರ!
ದೇವರ ನಾಡಿನ ಪ್ರಯಾಣಿಕರಿಗೆ ಸೇವೆ ಸಲ್ಲಿಸಲು ಹಾಗೂ ಅರನ್ನು ಸ್ವಾಗತಿಸಲು ನಾವು ಹೆಮ್ಮೆ ಪಡುತ್ತೇವೆ. ಹಚ್ಚ ಹಸಿನಿಂದ ಕೂಡಿದ, ಕಡಲ ತೀರದ ಸುಂದರ, ಸೊಗಸಾದ ತಿನಿಸುಗಳ ನಾಡಿನ ಜನರ ಸೇವೆಗೆ ಅವಕಾಶ ಪಡೆದಿದ್ದೇವೆ. ತಿರುವನಂತಪುರಂ ವಿಮಾನ ನಿಲ್ದಾಣದ ಮೂಲಕ ಅತ್ಯುನ್ನತ ಸೇವೆ ನೀಡಲು ಬದ್ಧರಾಗಿದ್ದೇವೆ ಎಂದು ಅದಾನಿ ಗ್ರೂಪ್ ಹೇಳಿದೆ.
ತಿರುವುಂತಪುರಂ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವನ್ನು 50 ವರ್ಷಗಳ ಕಾಲಕ್ಕೆ ನಿರ್ವಹಣೆ ಹಾಗೂ ಅಭಿವೃದ್ಧಿ ಮಾಡಲು ಅದಾನಿ ಗ್ರೂಪ್ ಪಡೆದುಕೊಂಡಿದೆ. ಅದಾನಿ ಎಂಟರ್‌ಪ್ರೈಸಸ್ ಲಿಮಿಟೆಡ್ ವಿಮಾನ ನಿಲ್ದಾಣದ ನಿರ್ವಹಣೆ ಮಾಡಲಿದೆ.ಕೇಂದ್ರ ಸರ್ಕಾರದ ಈ ನಿರ್ಧಾರವನ್ನು ಕೇರಳ ತೀವ್ರವಾಗಿ ವಿರೋಧಿಸಿತ್ತು. ಕೇರಳ ಅಸೆಂಬ್ಲಿಯಲ್ಲಿ ಆಡಳಿತಾರೂಢ ಹಾಗೂ ವಿರೋಧ ಪಕ್ಷಗಳು ವಿಮಾನ ನಿಲ್ದಾಣ ಖಾಸಗೀಕರಣವನ್ನು ಕಟುವಾಗಿ ವಿರೋಧಿಸಿತ್ತು. ಖಾಸಗೀಕರಣವನ್ನು ವಿರೋಧಿಸುವ ನಿರ್ಣಯವನ್ನು ಸರ್ವಾನುಮತದಿಂದ ಅಂಗೀಕರಿಸಿತ್ತು. ಆದರೆ ತೀವ್ರ ವಿರೋಧದ ನಡುವೆಯೂ ತಿರುವನಂತಪುರಂ ವಿಮಾನ ನಿಲ್ದಾಣ ಅದಾನಿ ಗ್ರೂಪ್‌ಗೆ ಹಸ್ತಾಂತರಿಸಲಾಗಿದೆ.
1932ರಲ್ಲಿ ತಿರುವನಂತಪುರಂ ವಿಮಾನ ನಿಲ್ದಾಣ ಕಾರ್ಯಾರಂಭಿಸಿತು. ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ತಿರುವನಂತಪುರಂ ವಿಮಾನ ನಿಲ್ದಾಣವನ್ನು ಇದೀಗ ಉದ್ಯಮಿ ಅದಾನಿ ಒಡೆತನದ ಅದಾನಿ ಸಂಸ್ಥೆ ನಿರ್ವಹಣೆ ಮಾಡಲಿದೆ.