Asianet Suvarna News Asianet Suvarna News

ಹಿಂದೂ ಮಹಾಸಾಗರದಲ್ಲಿ ಲಂಡನ್‌ನ HMS ತಮರ್ ನೌಕೆ ಶಾಶ್ವತ ನಿಯೋಜನೆ, ಭಾರತಕ್ಕೆ ಮತ್ತಷ್ಟು ಬಲ!

ಯುಕೆಯ ರಾಯಲ್ ನೇವಿ HMS ತಮರ್ ಇದೀಗ ಭಾರತದ ಹಿಂದೂಮಹಾಸಾಗರದತ್ತ ದಾಪುಗಾಲಿಟ್ಟಿದೆ. ಹಿಂದೂಮಹಾಸಾಗರದಲ್ಲಿ ಶಾಶ್ವತ ನಿಯೋಜನೆ ಭಾಗವಾಗಿ ತಮರ್ ನೌಕೆ ಅಂಡಮಾನ್ ನಿಕೋಬಾರ್ ದ್ವೀಪಕ್ಕೆ ಆಗಮಿಸುತ್ತಿದೆ. ಇದೀಗ ಇಂಡೋ-ಪೆಸಿಫಿಕ್‌ ವಲಯದಲ್ಲಿ ಭಾರತದ ಶಕ್ತಿ ದುಪ್ಪಟ್ಟಾಗಿದೆ.

UK Royal Navy patrol vessel HMS Tamar to visit Andaman and Nicobar island  part of permanent deployment in Indo Pacific ckm
Author
First Published Jan 6, 2023, 9:24 PM IST

ನವದೆಹಲಿ(ಜ.06): ಇಂಡೋ ಪೆಸಿಫಿಕ್ ವಲಯದಲ್ಲಿ ಬಲವರ್ಧನೆಗೆ ಭಾರತ ಹಾಗೂ ಯುನೈಟೆಡ್ ಕಿಂಗ್‌ಡಮ್ ಸಮರಭ್ಯಾಸ ಮತ್ತಷ್ಟು ಹೆಚ್ಚಿಸಿದೆ. ಇದೀಗ ರಾಯಲ್ ನೇವಿಯ ಕಡಲಾಚೆಗಿನ ಗಸ್ತು ನೌಕೆ HMS ತಮರ್ ಹಿಂದೂಮಹಾಸಾಗರದಲ್ಲಿ ಹದ್ದಿನ ಕಣ್ಣಿಡಲು ಭಾರತಕ್ಕೆ ಆಗಮಿಸುತ್ತಿದೆ. ಯುಕೆಯಿಂದ ಇಂದು ಭಾರತದ ಅಂಡಮಾನ್ ನಿಕೋಬಾರ್ ದ್ವೀಪದತ್ತ ಪಯಣ ಬೆಳೆಸಿರುವ ಈ ನೌಕೆ, ಮುಂದಿನ 5 ದಿನ ಭಾರತೀಯ ನೌಕಾಪಡೆ ಜೊತೆ ಶಕ್ತಿ, ಸಾಮರ್ಥ್ಯ ಪ್ರದರ್ಶನ ಮಾಡಲಿದೆ.

ಯುನೈಟೆಡ್ ಕಿಂಗ್‌ಡಮ್ ಒಪ್ಪಂದದ ಪ್ರಕಾರ ಇಂಡೋ ಪೆಸಿಫಿಕ್ ವಲಯದಲ್ಲಿ ಎರಡು ರಾಯಲ್ ನೇವಿ ನೌಕೆ ಶಾಶ್ವತ ನಿಯೋಜನೆಯಲ್ಲಿರಲಿದೆ. ಇದರಲ್ಲಿ ಒಂದು ನೌಕೆ  HMS ತಮರ್. ಈ ನೌಕೆ ಅಂಡಮಾನ್ ನಿಕೋಬಾರ್ ದ್ವೀಪ ಸೇರಿದಂತೆ ಹಿಂದೂಮಹಾಸಾಗರಲ್ಲಿ ಗಸ್ತು ಜವಾಬ್ದಾರಿ ವಹಿಸಲಿದೆ. ಈ ಮೂಲಕ ಭಾರತ ಹಾಗೂ ಯುಕೆ ಜಂಟಿ ಸಮರಾಭ್ಯಾಸದ ಮೂಲಕ ಹಿಂದೂ ಮಹಾಸಾಗರದಲ್ಲಿ ಕಡಲ ಡೋಮೇನ್ ಜಾಗೃತಿ ಪ್ರಯತ್ನವನ್ನು ಮತ್ತಷ್ಟು ಬಲಪಡಿಸಲಿದೆ. 

ದೇಶದ ಬತ್ತಳಿಕೆಗೆ ಕ್ಷಿಪಣಿ ನಾಶಕ ಯುದ್ಧನೌಕೆ ಮರ್ಮುಗೋವಾ: ರಕ್ಷಣಾ ಸಚಿವರಿಂದ ದೇಶಕ್ಕೆ ಸಮರ್ಪಣೆ

HMS ತಮರ್ ನೌಕೆ ಹಿಂದೂ ಮಹಾಸಾಗರದಲ್ಲಿ ಮೊದಲ ಬಾರಿಗೆ ನೌಕಾಯಾನ ಮಾಡುತ್ತಿದೆ. ಇದು ಅತೀವ ಸಂತಸ ತಂದಿದೆ. ಭಾರತೀಯ ನೌಕಾಪಡೆ ಜೊತೆ ತೊಡಗಿಸಿಕೊಳ್ಳಲಿದೆ. ಇಷ್ಟೇ ಅಲ್ಲ ಭಾರತೀಯ ನೌಕಾಪಡೆ ಜೊತೆಗಿನ ತರಬೇತಿ, ವ್ಯಾಯಾಮ ನಡೆಸುವ ಅವಕಾಶವನ್ನು ಪಡೆದಿದೆ. ಇದು ಅತ್ಯಂತ ಮುಖ್ಯವಾಗಿದೆ ಎಂದು  HMS ತಮರ್ ಅಡ್ಮಿರಲ್ ಸರ್ ಬೆನ್ ಕಿ ಹೇಳಿದ್ದಾರೆ.  

ರಾಯಲ್ ನೇವಿಯ ಕಡಲಾಚೆಗಿನ ಗಸ್ತು ನಿಯೋಜನೆಯಲ್ಲಿ HMS ತಮರ್ ಹಾಗೂ HMS ಸ್ಪೈ ನೌಕೆ ಕಳೆದ ಸೆಪ್ಟೆಂಬರ್ 2021ರಿಂದ ನಿಯೋಜನೆಯಲ್ಲಿದೆ. ಇದೀಗ HMS ತಮರ್ ಸಮರಾಭ್ಯಾಸದ ಜೊತೆ ಹಿಂದೂಮಹಾಸಾರದಲ್ಲಿ ಗಸ್ತು ವಹಿಸಲಿದೆ.   2021ರ ಒಪ್ಪಂದದ ಪ್ರಕಾರ ಯುನೈಟೆಡ್ ಕಿಂಗ್‌ಡಮ್ ವಿದೇಶಿ ರಕ್ಷಣೆ, ಅಭಿವೃದ್ಧಿ ಮತ್ತು ಭದ್ರತಾ ನೀತಿಯನ್ನು ರೂಪಿಸಿದೆ.   ವ್ಯಾಪಾರ,  ಭದ್ರತೆ ಮತ್ತು ಬೆಂಬಲಕ್ಕಾಗಿ ಇಂಡೋ-ಪೆಸಿಫಿಕ್‌ನಲ್ಲಿ ರಾಯಲ್ ನೇವಿ ಉಪಸ್ಥಿತಿ ಇರಲಿದೆ. 

 

ಹಿಂದು ಮಹಾಸಾಗರದಲ್ಲಿ ಇಮ್ಮಡಿಯಾಯ್ತು ಭಾರತದ ಬಲ; ಇಲ್ಲಿದೆ 20 ಸಾವಿರ ಕೋಟಿಯ INS Vikrant ಚಿತ್ರ!

ಭಾರತ ಹಾಗೂ ಯುನೈಟೆಡ್ ಕಿಂಗ್‌ಡಮ್ ವೈಟ್ ಶಿಪ್ಪಿಂಗ್ ಒಪ್ಪಂದದ ಪ್ರಕಾರ, ಹಿಂದೂ ಮಹಾಸಾಗರದ ವಲಯದಲ್ಲಿ ಮಾಹಿತಿ ಹಂಚಿಕೆ, ಗಸ್ತು ಜವಾಬ್ದಾರಿ ಸಕ್ರಿಯಗೊಳಿಸಲಿದೆ. 2021ರಲ್ಲಿ ಯುನೈಟೆಡ್ ಕಿಂಗ್‌ಡಮ್ ಭಾರತದಲ್ಲಿ ಶಾಶ್ವತ ಅಧಿಕಾರಿಯನ್ನು ನಿಯೋಜಿಸಿದೆ. ಗುರುಗ್ರಾಮ್‌ನಲ್ಲಿರುವ  ಭಾರತೀಯ ನೌಕಾಪಡೆಯ ಸೆಂಟರ್ (IFC-IOR) ಕಾರ್ಯನಿರ್ವಹಿಸುತ್ತಿರುವ ಅಧಿಕಾರಿಗೆ ಕಡಲ ಡೋಮೇನ್‌ನಲ್ಲಿ ಜಾಗೃತಿ ಹೆಚ್ಚಿಸುವ ಜವಾಬ್ದಾರಿ ನೀಡಿದೆ.
 

Follow Us:
Download App:
  • android
  • ios