57ರ ವಯಸ್ಸಲ್ಲಿ 7 ನೇ ಬಾರಿ ತಂದೆಯಾದ ಬ್ರಿಟನ್ ಪ್ರಧಾನಿ Boris Johnson, ಮಗುವಿಗೆ ಜನ್ಮ ಕೊಟ್ಟ 3ನೇ ಹೆಂಡತಿ!
* ಬ್ರಿಟನ್ ಪ್ರಧಾನಿ ಬೋರಿಸ್ ಜಾನ್ಸನ್, ಕ್ಯಾರಿ ದಂಪತಿಗೆ ಮಗು ಜನನ
* 57ರ ವಯಸ್ಸಲ್ಲಿ 7 ನೇ ಬಾರಿ ತಂದೆಯಾದ ಬ್ರಿಟನ್ ಪ್ರಧಾನಿ Boris Johnson
* ಹೆಣ್ಣು ಮಗುವಿಗೆ ಜನ್ಮ ಕೊಟ್ಟ ಮೂರನೇ ಹೆಂಡತಿ
ಇಂಗ್ಲೆಂಡಗ(ಡಿ.10): ಬ್ರಿಟನ್ ಪ್ರಧಾನಿ ಬೋರಿಸ್ ಜಾನ್ಸನ್ ಅವರ ಪತ್ನಿ ಕ್ಯಾರಿ ಅವರು ಪ್ರಧಾನಿಯ ಏಳನೇ ಮಗುವಿಗೆ ಜನ್ಮ ನೀಡಿದ್ದಾರೆ. ಕ್ಯಾರಿ ಜಾನ್ಸನ್‌ರಿಂದ ಬ್ರಿಟನ್ ಪ್ರಧಾನಿಗೆ ವಿಲ್ಫ್ರೆಡ್ ಹೆಸರಿನ ಒಂದು ಗಂಡು ಮಗು ಸೇರಿದಂತೆ ಇಬ್ಬರು ಮಕ್ಕಳಿದ್ದಾರೆ. ಬೋರಿಸ್ ಜಾನ್ಸನ್ ಅವರ ಎರಡನೇ ಪತ್ನಿ ಮರೀನಾ ಅವರೊಂದಿಗೆ ಅವರಿಗೆ ನಾಲ್ಕು ಮಕ್ಕಳಿದ್ದಾರೆ. ಪ್ರಧಾನಿ ಬೋರಿಸ್ ಜಾನ್ಸನ್ ಅವರ ಪತ್ನಿ ಲಂಡನ್ ಆಸ್ಪತ್ರೆಯಲ್ಲಿ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ ಎಂದು ಅವರ ವಕ್ತಾರರು ತಿಳಿಸಿದ್ದಾರೆ. ತಾಯಿ ಮತ್ತು ಮಗು ಇಬ್ಬರೂ ಆರೋಗ್ಯವಾಗಿದ್ದಾರೆ.
ಪ್ರಧಾನಿ ರಜೆ ತೆಗೆದುಕೊಳ್ಳುತ್ತಾರೆಯೇ ಎಂದು ಕೇಳಿದಾಗ? ಇದಕ್ಕೆ ವಕ್ತಾರರು ದೇಶಕ್ಕಾಗಿ ಕೆಲಸ ಮಾಡುವುದನ್ನು ಮುಂದುವರಿಸುತ್ತಾರೆಂದು ಹೇಳಿದ್ದಾರೆ. ಅವರು ತಮ್ಮ ಕುಟುಂಬದೊಂದಿಗೆ ಸ್ವಲ್ಪ ಸಮಯ ಕಳೆಯುತ್ತಾರೆ ಮತ್ತು ಪ್ರಧಾನಿಯಾಗಿ ತಮ್ಮ ಜವಾಬ್ದಾರಿಗಳನ್ನು ನಿರ್ವಹಿಸುತ್ತಾರೆ ಎಂದಿದ್ದಾರೆ. ಬೋರಿಸ್ ಜಾನ್ಸನ್ ಈ ವರ್ಷದ ಮೇನಲ್ಲಿ ವೆಸ್ಟ್ಮಿನಿಸ್ಟರ್ ಕ್ಯಾಥೆಡ್ರಲ್ನಲ್ಲಿ ಕ್ಯಾರಿಯನ್ನು ವಿವಾಹವಾಗಿದ್ದರು. 56 ವರ್ಷದ ಬ್ರಿಟಿಷ್ ಪ್ರಧಾನಿ ಮೂರನೇ ಬಾರಿಗೆ ವಿವಾಹವಾಗಿದ್ದರು. ಬೋರಿಸ್ ಮತ್ತು ಕ್ಯಾರಿ ನಡುವಿನ ವಯಸ್ಸಿನ ವ್ಯತ್ಯಾಸ 23 ವರ್ಷ. ಮದುವೆಗೆ ಆಪ್ತ ಸ್ನೇಹಿತರು ಮತ್ತು ಸಂಬಂಧಿಕರಿಗೆ ಮಾತ್ರ ಆಹ್ವಾನ ನೀಡಲಾಗಿತ್ತು. 2019 ರಿಂದ ಇಬ್ಬರೂ ಒಟ್ಟಿಗೆ ಇದ್ದರು. ಕಳೆದ ವರ್ಷವಷ್ಟೇ ಅವರು ನಿಶ್ಚಿತಾರ್ಥ ಮಾಡಿಕೊಂಡಿರುವುದಾಗಿ ಘೋಷಿಸಿದ್ದರು.
ಕ್ಯಾರಿಗೆ ಮೊದಲು ಗರ್ಭಪಾತವಾಗಿತ್ತು
ಹಿಂದೆ, ಕ್ಯಾರಿಗೆ ಗರ್ಭಪಾತವಾಗಿತ್ತು. ಜುಲೈನಲ್ಲಿ ಅವರು ಇನ್ಸ್ಟಾಗ್ರಾಮ್ ಪೋಸ್ಟ್ ಮೂಲಕ ಈ ಮಾಹಿತಿಯನ್ನು ನೀಡಿದ್ದಾರೆ. ಪೋಸ್ಟ್‌ನಲ್ಲಿ, ಈ ವರ್ಷದ ಆರಂಭದಲ್ಲಿ ನನಗೆ ಗರ್ಭಪಾತವಾಗಿದೆ, ಇದರಿಂದಾಗಿ ನಾನು ತುಂಬಾ ದುಃಖಿತಳಾಗಿದ್ದೆ ಎಂದು ಕ್ಯಾರಿ ಹೇಳಿದ್ದರು. ಕ್ರಿಸ್‌ಮಸ್ ವೇಳೆಗೆ ನಾವು ಮಗುವನ್ನು ಹೊಂದುತ್ತೇವೆ ಎಂದು ಭಾವಿಸುತ್ತೇವೆ ಎಂದಿದ್ದರು.
ಬೋರಿಸ್ ಜಾನ್ಸನ್ ಅವರ ಪೂರ್ಣ ಹೆಸರು ಅಲೆಕ್ಸಾಂಡರ್ ಬೋರಿಸ್ ಡಿ ಫೀಫೆಲ್ ಜಾನ್ಸನ್. ಜೂನ್ 19, 1964 ರಂದು ಜನಿಸಿದ ಬೋರಿಸ್ ರಾಜಕಾರಣಿ ಮತ್ತು ಬರಹಗಾರ. 2019ರಲ್ಲಿ ದೇಶದ ಪ್ರಧಾನಿಯಾದರು. ಇದಕ್ಕೂ ಮೊದಲು ಅವರು 2008 ರಿಂದ 2016 ರವರೆಗೆ ಲಂಡನ್ ಮೇಯರ್ ಆಗಿದ್ದರು. ಜಾನ್ಸನ್ 2015 ರಿಂದ ಆಕ್ಸ್‌ಬ್ರಿಡ್ಜ್ ಮತ್ತು ಸೌತ್ ರುಯಿಸ್ಲಿಪ್‌ಗೆ ಸಂಸತ್ತಿನ (MP) ಸದಸ್ಯರಾಗಿದ್ದಾರೆ. ಈ ಹಿಂದೆ ಅವರು 2001 ರಿಂದ 2008 ರವರೆಗೆ ಹೆನ್ಲಿಯಿಂದ ಸಂಸದರಾಗಿದ್ದರು.