ತಿರುವನಂತಪುರ(ಸೆ.  03)  ಕೊರರೋನಾ ನಿಯಂತ್ರಣದಲ್ಲಿ ಇಟ್ಟುಕೊಂಡಿರುವುದಕ್ಕೆ ಕೇರಳ ಒಂದು ಮಾದರಿಯಾಗಿ ನಿಂತಿದೆ.  ಕೇರಳ ಆರೋಗ್ಯ ಸಚಿವೆ ಕೆಕೆ ಶೈಲಜಾ ಅವರನ್ನು ಬ್ರಿಟಿಷ್ ಮ್ಯಾಗಜಿನ್ ಪ್ರೊಸ್ಪೆಕ್ಟ್  ಕೊರೋನಾಕ್ಕೆ ಸಂಬಂಧಿಸಿದ ವಿಶ್ವದ ಅಗ್ರಗಣ್ಯ ಚಿಂತಕರ ಸಾಲಿಗೆ ಸೇರಿಸಿದೆ. 

ನ್ಯೂಜಿಲೆಂಡ್ ಪ್ರಧಾನಿ ಜಸಿಂಡಾ ಅರ್ಡೆರ್ನ್,  ಚಿಂತಕ ಕರ್ನಲ್ ವೆಸ್ಟ್ ಸೇರಿ 50 ಜನರ ಪಟ್ಟಿಯಲ್ಲಿ ಶೈಲಜಾ  ಹೆಸರು ಪಡೆದುಕೊಂಡಿದ್ದಾರೆ. ಸರಿಯಾದ ಜಾಗದಲ್ಲಿ ಸರಿಯಾದ ಮಹಿಳೆ ಎಂದು ಶೈಲಜಾ ಅವರನ್ನು ಮ್ಯಾಗಜೀನ್  ಹೇಳಿದೆ.

ಬಿಸಿಸಿಐ ವೈದ್ಯ ಸಿಬ್ಬಂದಿಗೂ ವಕ್ಕೆರಿಸಿದ ಕೊರೋನಾ

ಕೊರೋನಾ ಜನವರಿಯಲ್ಲಿ ಚೀನಾವನ್ನು ಕಾಡುತ್ತಿತ್ತು.  ಭಾರತಕ್ಕೆ ಅದರ ಆಗಮನ ಮೊದಲೆ ಗೊತ್ತು ಮಾಡಿದ ಶೈಲಜಾ ಸಕಲ ಮುನ್ನೆಚ್ಚರಿಕೆ ಅಂದಿನಿಂದಲೇ ತೆಗೆದುಕೊಂಡಿದ್ದರು ಎಂದು ಕೆಸಲ ಕೊಂಡಾಡಿದ್ದಾರೆ.

ಬಿಬಿಸಿ, ನ್ಯೂಯಾರ್ಕ್ ಟೈಮ್ಸ್, ದಿ ಗಾರ್ಡಿಯನ್ ನಂತಹ ಅಂತಾರಾಷ್ಟ್ರೀಯ ಮಾಧ್ಯಮಗಳು ಕೊರೋನಾ ವಿರುದ್ಧ  ಕೇರಳ ತೆಗೆಗೆದುಕೊಂಡ ಕ್ರಮ ಕೊಂಡಾಡಿದ್ದರು.