ಪಾಟ್ನಾ[ಮಾ.09]: ಬಿಹಾರದ ದರಭಂಗಾ ಕ್ಷೇತ್ರದ ಹಿರಿಯ ಜೆಡಿಯು ನಾಯಕ ಹಾಗೂ ಮಾಜಿ MLC ವಿನೋದ್ ಚೌಧರಿ ಮಗಳು ಪುಷ್ಪಂ ಪ್ರಿಯಾ ಚೌಧರಿ ತಾನು ಬಿಹಾರ ಚುನಾವಣೆಯಲ್ಲಿ ಸ್ಪರ್ಧಿಸುವುದಾಗಿ ಘೋಷಿಸಿದ್ದಾರೆ. ತನ್ನನ್ನು ತಾನು ಸಿಎಂ ಅಭ್ಯರ್ಥಿ ಎಂದಿರುವ ಅವರು ಬಿಹಾರದ ಬಹುತೇಕ ಎಲ್ಲಾ ಪತ್ರಿಕೆಗಳ ಮೊದಲ ಪುಟದಲ್ಲಿ ಜಾಹೀರಾತು ನೀಡಿದ್ದಾರೆ. ಇಲ್ಲಿ ಬಿಹಾರದ ಜನತೆಯನ್ನುದ್ದೇಶಿಸಿ ಅವರು ಒಂದು ಪತ್ರವನ್ನು ಬರೆದಿದ್ದಾರೆ.

"

ಪ್ಲೂರಲ್ಸ್, ರಾಜಕೀಯ ಪಕ್ಷದ ಹೆಸರು

ಲಂಡನ್ ನಲ್ಲಿ ವಾಸಿಸುತ್ತಿದ್ದ ಪುಷ್ಪಂ ಪ್ರಿಯಾ ಪ್ಲೂರಲ್ಸ್ (PLURALS) ಹೆಸರಿನ ಪಕ್ಷವನ್ನೂ ಸ್ಥಾಪಿಸಿದ್ದು, ತಮ್ಮನ್ನು ಇದರವ ಅಧ್ಯಕ್ಷೆ ಎಂದು ಘೋಷಿಸಿದ್ದಾರೆ. ಟ್ವಿಟರ್ ಖಾತೆಯಲ್ಲಿ ನೀಡಿರುವ ಮಾಹಿತಿ ಅನ್ವಯ ಪ್ರಿಯಾ ಲಂಡನ್ ಸ್ಕೂಲ್ ಆಫ್ ಎಕಾನಾಮಿಕ್ಸ್ ಹಾಗೂ ಪೊಲಿಟಿಕಲ್ ಸೈನ್ಸ್ ನಲ್ಲಿ ಮಾಸ್ಟರ್ ಆಫ್ ಪಬ್ಲಿಕ್ ಅಡ್ಮಿನಿಸ್ಟ್ರೇಷನ್ ಪೂರೈಸಿದ್ದಾರೆ. ಯೂನಿವರ್ಸಿಟಿ ಆಫ್ ಸಸೆಕ್ಸ್ನ IDSನಿಂದ ಡೆವಲಪ್ಮೆಂಟ್ ಸ್ಟಡೀಸ್ ನಲ್ಲಿ MA ಕೂಡಾ ಮಾಡಿದ್ದಾರೆ.

ಇನ್ನು ಬಿಹಾರದ ಜನತೆಯನ್ನುದ್ದೇಶಿಸಿ ಟ್ವೀಟ್ ಒಂದನ್ನು ಮಾಡಿರುವ ಪುಷ್ಪಂ 'ಬಿಹಾರಕ್ಕೆ ವೇಗ ಬೇಕು, ರೆಕ್ಕೆಗಳು ಬೇಕು, ಬದಲಾವಣೆ ಬೇಕು.. ಯಾಕೆಂದರೆ ಬಿಹಾರಕ್ಕೆ ಉತ್ತಮ ಹಾಗೂ ಅತ್ಯುತ್ತಮವಾಗುವ ಹಕ್ಕಿದೆ. ಅರ್ಥವಿಲ್ಲದ ರಾಜಕೀಯವನ್ನು ಅಳಿಸಿ ಹಾಕಿ. ಬಿಹಾರವನ್ನು 2020ರಲ್ಲಿ ಮುಂದುವರೆಸಲು ಹಾಗೂ ಅಭಿವೃದ್ಧಿಯತ್ತ ಸಾಗಿಸಲು ಪ್ಲೂರಲ್ಸ್ ಪಕ್ಷವನ್ನು ಬೆಂಬಲಿಸಿ' ಎಂದಿದ್ದಾರೆ.

ಇದರ ಬೆನ್ನಲ್ಲೇ ಮತ್ತೊಂದು ಟ್ವೀಟ್ ಮಾಡಿರುವ ಪುಷ್ಪಂ ಪ್ರಿಯಾ 'LSE ಹಾಗೂ IDSನಲ್ಲಿ ನಡೆಸಿದ ಅಧ್ಯಯನ ಹಾಗೂ ಬಿಹಾರದಲ್ಲಿ ನನ್ನ ಅನುಭವಗಳು, ವ್ಯಕ್ತಿಯೊಬ್ಬನಲ್ಲಿ ಅದ್ಭುತವಾದ ವಾಸ್ತವಿಕತೆ ಇರುತ್ತದೆ ಹೀಗಾಗಿ ಎಲ್ಲರಿಗೂ ಒಂದೇ ತೆರನಾದ ಅಭಿವೃದ್ಧಿಯ ಮಾಡೆಲ್ ಇರಲು ಸಾಧ್ಯವಿಲ್ಲ' ಎಂದಿದ್ದಾರೆ.

ಇನ್ನು ಪುಷ್ಪಂ ಚಿಕ್ಕಪ್ಪ ಅಜಯ್ ಚೌಧರಿ ಅಲಿಯಾಸ್ ವಿನಯ್ ಕೂಡಾ JDUನಲ್ಲಿದ್ದಾರೆ ಹಾಗೂ ಅವರು ಧರ್ಬಂಗಾ ಜಿಲ್ಲೆಯ ಅಧ್ಯಕ್ಷರೂ ಆಗಿದ್ದಾರೆ. ಅಲ್ಲದೇ ಅವರ ಅಜ್ಜ ದಿವಂಗತ ಉಮಾಕಾಂತ್ ಚೌಧರಿ ಕೂಡಾ ನಿತೀಶ್ ಕುಮಾರ್ ಆಪ್ತರಾಗಿದ್ದರು.