ಉದ್ಧವ್ ಠಾಕ್ರೆ ಬೆಂಗಾವಲಿನ ಮೇಲೆ ದಾಳಿ : ಸೆಗಣಿ, ತೆಂಗಿನಕಾಯಿ ಎಸೆದ MNS ಕಾರ್ಯಕರ್ತರು
ಮಹಾರಾಷ್ಟ್ರ ನವ ನಿರ್ಮಾಣ ಸೇನೆಯ ಕಾರ್ಯಕರ್ತರು ಶಿವಸೇನೆಯ ಉದ್ಧವ್ ಠಾಕ್ರೆ ಬಣದ ಮುಖ್ಯಸ್ಥ, ಉದ್ಧವ್ ಠಾಕ್ರೆಯವರ ಬೆಂಗಾವಲು ವಾಹನದ ಮೇಲೆ ಸೆಗಣಿ ಹಾಗೂ ತೆಂಗಿನ ಕಾಯಿ ಎಸೆದ ಘಟನೆ ನಡೆದಿದೆ. ಘಟನೆಯ ವೀಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.
ಮುಂಬೈ: ಮಹಾರಾಷ್ಟ್ರ ನವ ನಿರ್ಮಾಣ ಸೇನೆಯ ಕಾರ್ಯಕರ್ತರು ಶಿವಸೇನೆಯ ಉದ್ಧವ್ ಠಾಕ್ರೆ ಬಣದ ಮುಖ್ಯಸ್ಥ, ಉದ್ಧವ್ ಠಾಕ್ರೆಯವರ ಬೆಂಗಾವಲು ವಾಹನದ ಮೇಲೆ ಸೆಗಣಿ ಹಾಗೂ ತೆಂಗಿನ ಕಾಯಿ ಎಸೆದ ಘಟನೆ ನಡೆದಿದೆ. ಘಟನೆಯ ವೀಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಈ ಘಟನೆಗೆ ದಿನ ಮೊದಲು ಮಹಾರಾಷ್ಟ್ರದ ರಾಜಕಾರಣಿ ಹಾಗೂ ಮಹಾರಾಷ್ಟ್ರ ನವನಿರ್ಮಾಣ ಸೇನೆಯ ಸ್ಥಾಪಕ ಸದಸ್ಯರಲ್ಲಿ ಒಬ್ಬರಾಗಿರುವ ರಾಜ್ ಠಾಕ್ರೆಯವರ ಬೆಂಗಾವಲು ವಾಹನದ ಮೇಲೆ ಶುಕ್ರವಾರ ಕೆಲವರು ಅಡಿಕೆ ಎಸೆದಿದ್ದರು. ಇದಕ್ಕೆ ಪ್ರತಿಯಾಗಿ ನಿನ್ನೆಗ ಮಹಾರಾಷ್ಟ್ರ ನವ ನಿರ್ಮಾಣ ಸೇನೆಯ ಕಾರ್ಯಕರ್ತರು ಈ ಕೃತ್ಯವೆಸಗಿದ್ದಾರೆ ಎಂದು ವರದಿ ಆಗಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ 20 ಜನರನ್ನು ಬಂಧಿಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.
ಬಾಳ್‌ಸಾಹೇಬ್ ಠಾಕ್ರೆಯವರ ಪುತ್ರನಾಗಿರುವ ಉದ್ಧವ್ ಠಾಕ್ರೆಗೆ ಜೆಡ್ ಕೆಟಗರಿಯ ಭದ್ರತೆ ಇದೆ. ಅಂತಹ ದೊಡ್ಡ ಮಟ್ಟದ ಭದ್ರತೆ ಇರುವವರಿಗೆ ಥಾಣೆಯಲ್ಲಿ ಹೀಗಾಗಿರುವುದು ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿರುವುದಕ್ಕೆ ಸಾಕ್ಷಿಯಾಗಿದೆ. ರಾಜ್ಯಸಲ್ಲಿ ಶಾಂತಿ ಸುವ್ಯವಸ್ಥೆ ಸಂಪೂರ್ಣ ಹದಗೆಟ್ಟಿದೆ, ರಾಜ್ಯದ ಗೃಹ ಸಚಿವರು ರಾಜೀನಾಮೆ ನೀಡಬೇಕು ಎಂದು ಶಿವಸೇನೆಯ ಯುಟಿಬಿ ಬಣದ ನಾಯಕ ಆನಂದ್ ದುಬೆ ಹೇಳಿದ್ದಾರೆ.
1993 ಮುಂಬೈ ಬಾಂಬ್ ಬ್ಲಾಸ್ಟ್ ಕೇಸ್ ಆರೋಪಿಯಿಂದ ಉದ್ಧವ್ ಠಾಕ್ರೆ ಅಘಾಡಿ ಪಕ್ಷದ ಪರ ಪ್ರಚಾರ
ಶುಕ್ರವಾರ ಉದ್ಧವ್ ಠಾಕ್ರೆಗೆ ಸೋದರ ಸಂಬಂಧಿ(cousin)ಯೂ ಆಗಿರುವ ರಾಜ್ ಠಾಕ್ರೆಯವರು ಮಧ್ಯ ಮಹಾರಾಷ್ಟ್ರ ಪ್ರದೇಶದಲ್ಲಿ ಪ್ರವಾಸ ಕೈಗೊಂಡಿದ್ದರು. ಇವರ ಬೆಂಗಾವಲು ವಾಹನ ಹೊಟೇಲೊಂದಕ್ಕೆ ಆಗಮಿಸುತ್ತಿದ್ದಾಗ ಕೆಲವು ಉದ್ಧವ್ ಠಾಕ್ರೆ ಬಣದ ಕಾರ್ಯಕರ್ತರು ರಸ್ತೆ ತಡೆ ಮಾಡಲು ಮುಂದಾಗಿದ್ದಲ್ಲದೇ ಅವರ ಬೆಂಗಾವಲು ವಾಹನದ ಮೇಲೆ ಅಡಿಕೆ ಎಸೆದಿದ್ದಾರೆ. ಈ ಅಡಕೆ ರಾಜ್ ಠಾಕ್ರೆ ವಾಹನದ ಬದಲು ಬೆಂಗಾವಲು ವಾಹನದಲ್ಲಿ ಸಿಲುಕಿಕೊಂಡಿತ್ತು ಎಂದು ಘಟನೆ ಬಗ್ಗೆ ಪೊಲೀಸರು ಮಾಹಿತಿ ನೀಡಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಕೆಲವರನ್ನು ಬಂಧಿಸಿ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.
ಉದ್ಧವ್ ಠಾಕ್ರೆಗೆ 'ಹೊರಗಡೆ ಕಾಯ್ತಾ ಇರು..' ಎಂದ ಶರದ್ ಪವಾರ್, ವೈರಲ್ ವಿಡಿಯೋ ಹಂಚಿಕೊಂಡ ಬಿಜೆಪಿ!
ಉದ್ಧವ್ ಠಾಕ್ರೆ ಬಣದ ಪ್ರಭಾವ ತಗ್ಗಿಸುವುದಕ್ಕಾಗಿ ರಾಜ್ ಠಾಕ್ರೆ ಸುಪಾರಿ ಪಡೆದಿದ್ದಾರೆ ಎಂದು ಈ ಹಿಂದೆ ಶಿವಸೇನೆಯ ಉದ್ಧವ್ ಠಾಕ್ರೆ ಬಣದ ಕೆಲ ನಾಯಕರು ಆರೋಪ ಮಾಡಿದ್ದರು.