ಊಬರ್ ಡ್ರೈವರ್‌ಗೆ ಮಕ್ಕಳಾಡುವ ನಕಲಿ 500 ರೂ. ಕೊಟ್ಟ ಪ್ರವಾಸಿಗ; ಮುಂದಾಗಿದ್ದೇನು ನೋಡಿ..
ಊಬರ್ ಡ್ರೈವರ್‌ಗೆ ನಕಲಿ 500 ರೂ. ನೋಟು ಕೊಟ್ಟ ಘಟನೆಯನ್ನು ಓರ್ವ ಪ್ರವಾಸಿಗರು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಮಕ್ಕಳು ಆಟವಾಡುವ ನಕಲಿ ನೋಟು ಕಂಡು ಬೆಚ್ಚಿ ಬಿದ್ದಿದ್ದಾರೆ.
ನಕಲಿ ನೋಟು ಮತ್ತು ಕಪ್ಪು ಹಣ ತಡೆಯಲು 2016 ನವೆಂಬರ್ 16 ರಂದು ಹಳೆಯ 500 ಮತ್ತು 1000 ರೂ. ನೋಟುಗಳನ್ನು ನಿಷೇಧಿಸಲಾಗಿತ್ತು. ಇತ್ತೀಚೆಗೆ ತನಗೆ ಸಿಕ್ಕಿದ್ದ ನಕಲಿ ನೋಟು ಅಂತ ಗೊತ್ತಿಲ್ಲದೆ ಊಬರ್ ಡ್ರೈವರ್‌ಗೆ ಕೊಟ್ಟ ಘಟನೆಯನ್ನು ಓರ್ವ ಟೂರಿಸ್ಟ್ ಸಾಮಾಜಿಕ ಜಾಲತಾಣದಲ್ಲಿ ಬರೆದಿದ್ದು ವೈರಲ್ ಆಗಿದೆ. ಬರ್ಕಾ ಎಂಬ ರೆಡ್ಡಿಟ್ ಖಾತೆಯಲ್ಲಿ ತನಗೆ ಎಟಿಎಂನಿಂದ ಸಿಕ್ಕಿದ್ದ 500 ರೂ. ನೋಟು ನಕಲಿಯಾಗಿತ್ತು ಎಂದು ಬರೆದಿದ್ದಾರೆ. ಈ ನೋಟನ್ನು ಊಬರ್ ಟ್ಯಾಕ್ಸಿ ಡ್ರೈವರ್‌ಗೆ ಕೊಡಲು ಹೋದಾಗ ಆದ ಘಟನೆಯನ್ನು ತಮ್ಮ ರೆಡ್ಡಿಟ್ ಖಾತೆಯಲ್ಲಿ ವಿವರಿಸಿದ್ದಾರೆ.
ಎಟಿಎಂನಿಂದ ತಪ್ಪಾಗುತ್ತೆ ಅಂತ ಶೇ.10 ಪರ್ಸೆಂಟ್ ಸಹ ನಾನು ನಂಬಲ್ಲ, ಆದರೆ ಊಬರ್ ಡ್ರೈವರ್‌ಗೆ ಕೊಟ್ಟ 500 ರೂ. ನೋಟು ಎಟಿಎಂನಿಂದ ನಾನು ಪಡೆದಿದ್ದು ಎಂದು ಶೇ.90 ಪರ್ಸೆಂಟ್ ಖಚಿತ ಎಂದು ಬರೆದಿದ್ದಾರೆ. ಗುಡಗಾಂವ್‌ನ ಗ್ರಾಮೀಣ ಸೌಂದರ್ಯ ಸವಿಯಲು ಕರೆದಿದ್ದ ಊಬರ್ ಟ್ಯಾಕ್ಸಿಗೆ ಓಡಾಟದ 3,500 ರೂ. ಕೊಟ್ಟೆ. ಆದರೆ, ಅದರಲ್ಲಿ ನಕಲಿ 500 ರೂ. ನೋಟು ಅಂತ ಗಮನಿಸದೆ ಆ ಹಣವನ್ನು ಊಬರ್ ಡ್ರೈವರ್‌ಗೆ ಕೊಟ್ಟಾಗ ದೊಡ್ಡ ಘಟನೆಯೇ ನಡೆದಿದೆ.
ಹಣ ನೋಡಿ ಗಾಬರಿಗೊಂಡ ಡ್ರೈವರ್, 'ನಕಲಿ ನೋಟು, ನಕಲಿ ನೋಟು' ಅಂತ ತನಗೆ ಗೊತ್ತಿದ್ದ ಇಂಗ್ಲಿಷ್‌ನಲ್ಲಿ ಕೂಗಿದ. ನನಗಾದ ಆಘಾತ ಮತ್ತು ಅವನ ಉಚ್ಛಾರಣೆಯಿಂದ ಅವನು ನನ್ನನ್ನು ಶಪಿಸುತ್ತಿದ್ದಾನೆ ಅಂತ ಅನಿಸಿತು. ಆ ಸಮಯದಲ್ಲಿ ನಾನು ಒಬ್ಬ ಮೂರ್ಖ ಅಂತಲೂ ಅನಿಸಿತು ಎಂದು ಟೂರಿಸ್ಟ್ ಬರೆದಿದ್ದಾರೆ. ಆದರೆ ಆ ಸಮಸ್ಯೆಯನ್ನು ಹೇಗೆ ಬಗೆಹರಿಸಿಕೊಂಡರು, ನಕಲಿ ನೋಟನ್ನು ಏನು ಮಾಡಿದರು ಅಂತ ಬರೆದಿಲ್ಲ.
Posts from the ಗುಡಗಾಂವ್
community on Reddit
ಇದನ್ನೂ ಓದಿ: ಬ್ಯಾಂಕ್ ಸೀಲ್ ಇರುವ ಸ್ಲಿಪ್ ತೋರಿಸಿ ಫೋನ್ ಕದ್ದ ಕಳ್ಳ!
ಈ ಪೋಸ್ಟ್ ಜೊತೆಗೆ ಟೂರಿಸ್ಟ್ ಅಸಲಿ 500 ರೂ. ನೋಟು ಮತ್ತು ನಕಲಿ ನೋಟಿನ ಚಿತ್ರಗಳನ್ನು ಹಂಚಿಕೊಂಡಿದ್ದಾರೆ. ನಕಲಿ ನೋಟಿನಲ್ಲಿ 'ಮನೋರಂಜನ್ ಬ್ಯಾಂಕ್ ಆಫ್ ಇಂಡಿಯಾ' ಅಂತ ಬರೆದಿತ್ತು. ಅಸಲಿ ನೋಟಿಗಿಂತ ನಕಲಿ ನೋಟು ಪ್ಲಾಸ್ಟಿಕ್ ರೀತಿ ಕಾಣುತ್ತಿತ್ತು. 'ಫುಲ್ ಆಫ್ ಫನ್' ಮತ್ತು 'ಚುರಾಲ್ ಲೇಬಲ್' ಅಂತಲೂ ಮುದ್ರಿಸಲಾಗಿತ್ತು. ತಮ್ಮ ಹೆಸರು ಅಥವಾ ಇತರೆ ಮಾಹಿತಿ ನೀಡದ ಈ ಪೋಸ್ಟ್ ರೆಡ್ಡಿಟ್‌ನಲ್ಲಿ ವೈರಲ್ ಆಗಿದೆ.
ಇದಕ್ಕೆ ಅನೇಕರು ತಮ್ಮ ಅಭಿಪ್ರಾಯಗಳನ್ನು ಬರೆದಿದ್ದಾರೆ. ಅದರಲ್ಲಿ ಹಲವರು ಟೂರಿಸ್ಟ್‌ನ ಅಜಾಗರೂಕತೆ ಬಳಸಿಕೊಂಡು ಊಬರ್ ಡ್ರೈವರ್ ತಂತ್ರದಿಂದ ನಕಲಿ ನೋಟು ಸೇರಿಸಿರಬಹುದು ಎಂದಿದ್ದಾರೆ. ಎಟಿಎಂನಿಂದ ನಕಲಿ ನೋಟು ಸಿಗುವ ಸಾಧ್ಯತೆ ಇದೆ ಎಂದು ಕೆಲವರು ಬರೆದಿದ್ದಾರೆ. ಇನ್ನು ಕೆಲವರು ತಮಾಷೆಯಾಗಿ ನಮ್ಮ ವಂಚನೆಗಳು ಸೃಜನಶೀಲವಾಗಿವೆ ಎಂದು ಬರೆದಿದ್ದಾರೆ. ಇನ್ಮೇಲಾದರೂ ಎಲ್ಲಿಂದ ಹಣ ಸಿಕ್ಕರೂ ಎಚ್ಚರಿಕೆಯಿಂದ ಪರಿಶೀಲಿಸಬೇಕು ಎಂದು ಕೆಲವರು ಹೇಳಿದ್ದಾರೆ.
ಇದನ್ನೂ ಓದಿ: ಭಿಕ್ಷುಕನನ್ನು ಪ್ರೀತಿಸಿ ಓಡಿಹೋದ 6 ಮಕ್ಕಳ ತಾಯಿ; ಪೊಲೀಸರ ಮುಂದೆ ಗೋಳಾಡುತ್ತಿರುವ ಗಂಡ!