Asianet Suvarna News Asianet Suvarna News

ಪಾಕಿಸ್ತಾನದ ಹುಟ್ಟಡಗಿಸಿದ್ದ ಬಾಲಾ​ಕೋ​ಟ್‌ ವೈಮಾ​ನಿಕ ದಾಳಿಗೆ 2 ವರ್ಷ!

ಬಾಲಾ​ಕೋ​ಟ್‌ ವೈಮಾ​ನಿಕ ದಾಳಿಗೆ 2 ವರ್ಷ| ಪುಲ್ವಾಮ ದಾಳಿಗೆ ಪ್ರತಿ​ಯಾಗಿ ವಾಯು​ಪಡೆ ನಡೆ​ಸಿದ್ದ ದಾಳಿ

Two Years of Balakot Air Strike A successful retaliation pod
Author
Bangalore, First Published Feb 27, 2021, 8:32 AM IST | Last Updated Feb 27, 2021, 8:38 AM IST

ನವ​ದೆ​ಹ​ಲಿ(ಫೆ.27): 40ಕ್ಕೂ ಹೆಚ್ಚು ಯೋಧರ ಬಲಿ​ಪ​ಡೆದ ಪುಲ್ವಾಮಾ ಉಗ್ರರ ದಾಳಿಗೆ ಪ್ರತಿ​ಯಾಗಿ ಭಾರ​ತೀಯ ವಾಯು​ಪ​ಡೆಯು ಪಾಕಿ​ಸ್ತಾ​ನದೊಳಗೆ ನುಗ್ಗಿ ಉಗ್ರರ ಸೇನಾ ನೆಲೆ​ಗ​ಳನ್ನು ಧ್ವಂಸ ಮಾಡಿದ ಬಾಲಾ​ಕೋಟ್‌ ವೈಮಾ​ನಿಕ ದಾಳಿಗೆ ಶುಕ್ರವಾರಕ್ಕೆ 2 ವರ್ಷ ಸಂದಿತು.

ಈ ಹಿನ್ನೆಲೆಯಲ್ಲಿ ರಕ್ಷಣಾ ಸಚಿವ ರಾಜ​ನಾಥ್‌ ಸಿಂಗ್‌ ಹಾಗೂ ಕೇಂದ್ರ ಗೃಹ ಸಚಿವ ರಾಜ​ನಾಥ್‌ ಸಿಂಗ್‌ ಅವರು ಪುಲ್ವಾ​ಮಾ​ದಲ್ಲಿ ಹುತಾ​ತ್ಮ​ರಾದ ಯೋಧ​ರಿಗೆ ಗೌರವ ಸಲ್ಲಿ​ಸಿ​ದರು. ಅಲ್ಲದೆ ಬಾಲಾ​ಕೋಟ್‌ನಲ್ಲಿದ್ದ ಉಗ್ರರ ನೆಲೆ​ಗ​ಳನ್ನು ನೆಲ​ಸ​ಮ​ಗೊ​ಳಿ​ಸಿದ ವಾಯು​ಪ​ಡೆ ಸಾಮ​ರ್ಥ್ಯದ ಬಗ್ಗೆ ಕೊಂಡಾ​ಡಿ​ದರು.

2019ರ ಫೆ.14ರಂದು ಜೈಷ್‌-ಎ-ಮೊಹ​ಮ್ಮದ್‌ ಉಗ್ರ ಸಂಘ​ಟನೆ ಪುಲ್ವಾ​ಮಾ​ದ​ಲ್ಲಿ ಎಸ​ಗಿದ ವಿಧ್ವಂಸಕ ಕೃತ್ಯ​ದಿಂದ 40ಕ್ಕೂ ಹೆಚ್ಚು ಸಿಆ​ರ್‌​ಪಿ​ಎಫ್‌ ಯೋಧರು ಬಲಿ​ಯಾ​ಗಿ​ದ್ದರು. ಇದಕ್ಕೆ ಪ್ರತಿ​ಯಾಗಿ ಫೆ.26ರಂದು ಭಾರ​ತೀಯ ವಾಯು​ಪಡೆ ಪಾಕಿ​ಸ್ತಾ​ನದ ಗಡಿ ನುಗ್ಗಿ ಬಾಲಾ​ಕೋ​ಟ್‌​ನಲ್ಲಿದ್ದ ಉಗ್ರರ ನೆಲೆ​ಗ​ಳನ್ನು ಧ್ವಂಸ ಮಾಡಿತ್ತು.

ಈ ಸಂಬಂಧ ಶುಕ್ರ​ವಾರ ಟ್ವೀಟ್‌ ಮಾಡಿದ ರಕ್ಷಣಾ ಸಚಿವ ರಾಜ​ನಾಥ್‌ ಸಿಂಗ್‌ ಅವರು, ‘ಪಾಕಿ​ಸ್ತಾ​ನದ ಭಾಗ​ದಲ್ಲಿ ನೆಲೆ​ಯೂ​ರಿದ್ದ ಉಗ್ರ​ರನ್ನು ಸಂಹಾರ ಮಾಡಿದ ಬಾಲಾ​ಕೋಟ್‌ ದಾಳಿ ಘಟ​ನೆಗೆ ಇಂದು 2ನೇ ವರ್ಷ. ಭಾರ​ತದ ವಾಯು​ಪ​ಡೆಯ ಧೈರ್ಯ ಮತ್ತು ಸಾಹ​ಸಕ್ಕೆ ನಾನು ಸೆಲ್ಯೂಟ್‌ ಮಾಡು​ತ್ತೇನೆ. ಯಶಸ್ವಿ ಬಾಲಾ​ಕೋಟ್‌ ಕಾರಾರ‍ಯ​ಚ​ರ​ಣೆಯು ಭಯೋ​ತ್ಪಾ​ದನೆ ವಿರು​ದ್ಧದ ಭಾರ​ತದ ಸಾಮ​ರ್ಥ್ಯವನ್ನು ಎತ್ತಿ ತೋರಿದೆ. ನಮ್ಮ ದೇಶದ ರಕ್ಷ​ಣೆ​ಗಾಗಿ ಶ್ರಮಿ​ಸು​ತ್ತಿ​ರುವ ನಮ್ಮ ಸೈನಿ​ಕರ ಬಗ್ಗೆ ಹೆಮ್ಮೆ​ಯಿ​ದೆ’ ಎಂದು ಹೇಳಿ​ದ್ದಾರೆ.

ಈ ಘಟ​ನೆಯು ಭಯೋ​ತ್ಪಾ​ದನೆ ವಿರುದ್ಧ ಹೊಸ ಭಾರ​ತದ ನಿಲುವು ಏನು ಎಂಬ ಸ್ಪಷ್ಟಸಂದೇ​ಶ​ವನ್ನು ರವಾ​ನಿ​ಸಿದೆ. ಪ್ರಧಾನಿ ನರೇಂದ್ರ ಮೋದಿ ಅವರ ಆಡ​ಳಿ​ತ​ದಲ್ಲಿ ದೇಶ ಮತ್ತು ಯೋಧರು ಸುರ​ಕ್ಷಿ​ತ​ವಾ​ಗಿ​ದ್ದಾರೆ ಎಂದು ಕೇಂದ್ರ ಗೃಹ ಸಚಿವ ಅಮಿತ್‌ ಶಾ ಹೇಳಿ​ದ್ದಾರೆ. ಅಲ್ಲದೆ ಪುಲ್ವಾಮಾ ದಾಳಿ​ಯಲ್ಲಿ ಹುತಾ​ತ್ಮ​ರಾದ ಯೋಧ​ರಿಗೂ ಶಾ ಗೌರವ ನಮನ ಸಲ್ಲಿ​ಸಿ​ದರು.

Latest Videos
Follow Us:
Download App:
  • android
  • ios