ನವದೆಹಲಿ(ಏ. 16) ಇಡಿ ದೇಶಕ್ಕೆ ಅರ್ಧ ಕರೋನಾ ಹಬ್ಬಿಸಿದ್ದು ದೆಹಲಿಯ ಜಮಾತ್ ಪ್ರಕರಣ ಎನ್ನುವುದು ಪದೇ ಪದೇ ವರದಿಯಾಗುತ್ತಲೇ ಇದೆ.  ಇದೆಲ್ಲದರ ನಡುವೆ ನಿಜಾಮುದ್ದೀನ್ ಮರ್ಕಜ್ ಮುಖ್ಯಸ್ಥನ ಸಂಬಂಧಿಗೆ ಕೊರೋನಾ ತಾಗಿದೆ.

ದೆಹಲಿಯ ನಿಜಾಮುದ್ದೀನ್ ಮರ್ಕಜ್ ಮುಖ್ಯಸ್ಥ ಮೌಲಾನಾ ಸಾದ್ ಸದ್ಯ ಹೋಂ ಕ್ವಾರಂಟೈನ್ ನಲ್ಲಿ ಇದ್ದಾನೆ.  ದೇಶದಲ್ಲಿ ಕೊರೋನಾ ಹರಡಲು ಕಾರಣವಾಗಿದ್ದ ಜಮಾತ್ ಎಲ್ಲ ಕಡೆ ಆತಂಕ ಸೃಷ್ಟಿ ಮಾಡಿತ್ತು.

ತಬ್ಲಿಘಿ ಜಮಾತ್‌ನ ಧಾಮಿಕ ಸಭೆಯಲ್ಲಿ ಭಾಗವಹಿಸಿದ್ದ ಕೆಲವು ವ್ಯಕ್ತಿಗಳು ಕೊರೊನಾ ವೈರಸ್ ಸೋಂಕಿನಿಂದ ಮೃತಪಟ್ಟಿದ್ದಾರೆ. ಇದೆಲ್ಲ ಕಾರಣ ಇಟ್ಟುಕೊಂಡು  ಮಾಲಾನಾ ಸಾದ್‌ ಕಾಂಧಾಲ್ವಿ ವಿರುದ್ಧ ಕೊಲೆ ಪ್ರಕರಣ ದಾಖಲಿಸಲಾಗಿದೆ.

ಕೊರೋನಾ ಔಷಧಿ ಹುಡುಕುವವರ ಕೈಗೆ ಹೊಸ ಅಸ್ತ್ರ

ಸಾಮಾಜಿಕ ಅಂತರ ಕಾಪಾಡಿಕೊಳ್ಳುವ ನಿಯಮ ಉಲ್ಲಂಘಿಸಿ ಕೊರೊನಾ ಹರಡಿದ್ದಾರೆ ಎಂದು ಆರೋಪಿಸಿ ಮೌಲಾನಾ ವಿರುದ್ಧ ನಿಜಾಮುದ್ದೀನ್‌ ಠಾಣಾಧಿಕಾರಿ ದೂರು ನೀಡಿದ್ದರು. ಅದನ್ನು ಆಧರಿಸಿ ಮಾರ್ಚ್ 31ರಂದು ಕ್ರೈಮ್‌ ಬ್ರ್ಯಾಂಚ್‌ ಠಾಣೆಯಲ್ಲಿಎಫ್‌ಐಆರ್‌ ದಾಖಲಾಗಿತ್ತು. ಈಗ ದೇಶಾದ್ಯಂತ ತಬ್ಲಿಘಿ ಸಭೆಯಲ್ಲಿ ಭಾಗವಹಿಸಿದ ಹಲವು ಮಂದಿ ಸಾವಿಗೀಡಾದ ಹಿನ್ನೆಲೆಯಲ್ಲಿ ಮೌಲಾನಾ ಸಾದ್‌ ವಿರುದ್ಧ ಐಪಿಸಿ 304 ಅಡಿಯಲ್ಲಿ ಕೊಲೆ ಪ್ರಕರಣ ದಾಖಲಿಸಲಾಗಿದೆ ಎಂದು ದೆಹಲಿ ಪೊಲೀಸರು ಮಾಹಿತಿ ನೀಡಿದ್ದಾರೆ.

ಮಾರ್ಚ್‌ ಮಧ್ಯಭಾಗದಲ್ಲಿ ನವದೆಹಲಿಯಲ್ಲಿ ನಡೆದ ಸಮಾವೇಶದಲ್ಲಿ 9000 ತಬ್ಲಿಘಿಗಳು ಭಾಗವಹಿಸಿದ್ದರು. ಇವರು ಅಲ್ಲಿಂದ ದೇಶದಾದ್ಯಂತ ತೆರಳಿದರು. ಇವರು ಸೋಂಕು ಹೊತ್ತು ಸಾಗಿದರು ಎಂಬ ಆತಂಕ ಇನ್ನೂ ಇದೆ.  ಸ್ವಯಂ ಪ್ರೇರಿತರಾಗಿ ಬಂದು ಚೆಕ್ ಮಾಡಿಕೊಳ್ಳಿ  ಎಂದು ಹೇಳಿದ್ದರೂ ತಬ್ಲಿಘಿಗಳು ಮಾತು ಕೇಳುತ್ತಿಲ್ಲ.