ನವದೆಹಲಿ(ಜ.16): ಭಾರತದಲ್ಲಿ ವಿಶ್ವದ ಅತೀ ದೊಡ್ಡ ಕೊರೋನಾ ಲಸಿಕಾ ವಿತರಣಾ ಅಭಿಯಾನಕ್ಕೆ ಚಾಲನೆ ನೀಡಿದ್ದಾರೆ.  ಇದಕ್ಕೂ ಮೊದಲು ಎಲ್ಲಾ ಮುಖ್ಯಮಂತ್ರಿಗಳ ಜೊತೆಗಿನ ಸಭೆಯಲ್ಲಿ ಕೆಲ ಮಹತ್ವ ಸೂಚನೆ ನೀಡಿದ್ದರು. ಇದರಲ್ಲಿ ರಾಜಕಾರಣಿಗಳು ತಮ್ಮ ಸರದಿ ಬಂದಾಗ ಲಸಿಕೆ ಪಡೆಯಬೇಕು. ಮೊದಲ ಹಂತದಲ್ಲಿ ಆರೋಗ್ಯ ಕಾರ್ಯಕರ್ತರಿಗೆ ಲಸಿಕೆ ನೀಡಲಾಗುತ್ತಿದೆ ಎಂದಿದ್ದರು. ಮೋದಿ ಸೂಚನೆ ನಡುವೆಯೂ ಇಬ್ಬರು ಮಂತ್ರಿಗಳು ಲಸಿಕೆ ಪಡೆದಿದ್ದಾರೆ.

ಭಾರತದಲ್ಲಿ ಲಸಿಕೆ ಅಭಿಯಾನ; ಇತರ ದೇಶಗಳಿಗೆ ವಿಶ್ವ ಆರೋಗ್ಯ ಸಂಸ್ಥೆ ವಿಶೇಷ ಮನವಿ !.

ಉತ್ತರ ಪ್ರದೇಶದ ಸಂಸದ, ಬಿಜೆಪಿ ನಾಯಕ ಮಹೇಶ್ ಶರ್ಮಾ ಕೊರೋನಾ ಲಸಿಕೆ ಪಡೆದ ಮೊದಲ ರಾಜಕಾರಣಿಯಾಗಿದ್ದಾರೆ. 61 ವರ್ಷದ ಮಹೇಶ್ ಶರ್ಮಾ ವೃತ್ತಿಯಲ್ಲಿ ವೈದ್ಯರಾಗಿದ್ದಾರೆ. ಇನ್ನು ಆರೋಗ್ಯ ಕಾರ್ಯಕರ್ತ ವಿಭಾಗದಲ್ಲಿ ಮಹೇಶ್ ಶರ್ಮಾ ಅವರಿಗೆ ಅವಕಾಶವಿದೆ. ಇನ್ನು ಅವರ ವಯಸ್ಸು 61 ದಾಟಿದೆ. ಹೀಗಾಗಿ ಮಹೇಶ್ ಶರ್ಮಾ ಲಸಿಕೆ ಪಡೆದಿದ್ದಾರೆ.

ಲಸಿಕೆ ಸುರಕ್ಷತಿವಾಗಿದೆ. ಯಾವುದೇ ಆತಂಕವಿಲ್ಲದೆ ಲಸಿಕೆ ಪಡೆಯಬಹುದು ಎಂದು ಮಹೇಶ್ ಶರ್ಮಾ ಹೇಳಿದ್ದಾರೆ. ಲಸಿಕೆ ನೀಡಿದ ಬಳಿಕ ಅರ್ಧ ಗಂಟೆಗಳ ಕಾಲ ಮಹೇಶ್ ಶರ್ಮಾ ಅವರನ್ನ ಮೇಲೆ ನಿಘಾ ಇಡಲಾಗಿತ್ತು.

ಇನ್ನು ತೃಣಮೂಲ ಕಾಂಗ್ರೆಸ್ ಶಾಸಕ ರಬೀಂದ್ರನಾಥ್ ಚಟರ್ಜಿ ಕೂಡ ಲಸಿಕೆ ಪಡೆದುಕೊಂಡಿದ್ದಾರೆ. ರಬೀಂದ್ರನಾಥ್ ಆರೋಗ್ಯ ಸಮಸ್ಯೆ ಎದುರಿಸುತ್ತಿದ್ದಾರೆ. ರೋಗಿಗಳ ವಿಭಾಗದಲ್ಲಿ ರಬೀಂದ್ರನಾಥ್ ಲಸಿಕೆ ಪಡೆದಿದ್ದಾರೆ.

ತೆಲಂಗಾಣದ ಆರೋಗ್ಯ ಸಚಿವ ಎಟಾಲ ರಾಜೇಂದ್ರ ಲಸಿಕೆ ಪಡೆಯಲು ಮುಂದಾಗಿದ್ದರು. ಭಾರಿ ವಿರೋಧದ ಬಳಿಕ ಲಸಿಕೆ ಪಡೆಯುವುದರಿಂದ ಹಿಂದೆ ಸರಿದಿದ್ದಾರೆ.