Asianet Suvarna News Asianet Suvarna News

ಯುನಿಫಾರ್ಮ್‌ನಲ್ಲಿ ಉದ್ಯಮಿಗೆ ಬಾಡಿಗಾರ್ಡ್ ಆಗಿ ರೀಲ್ ಮಾಡಿದ ಪೊಲೀಸರು ಸಸ್ಪೆಂಡ್

ರೀಲ್ ಮಾಡಿದ್ದ ಇಬ್ಬರು ಅಧಿಕಾರಿಗಳು ಅಮಾನತಿನ ಶಿಕ್ಷೆಗೆ ಒಳಗಾಗಿದ್ದಾರೆ. ಇಬ್ಬರು ಸಬ್‌ ಇನ್‌ಸ್ಪೆಕ್ಟರ್‌ಗಳು ರಿಯಲ್ ಎಸ್ಟೇಟ್ ಉದ್ಯಮಿಗೆ ಬಾಡಿಗಾರ್ಡ್‌ ರೀತಿಯಲ್ಲಿ ಪೋಸ್ ಕೊಟ್ಟಿದ್ದರು.

two police sub inspector suspended after making reel with property dealer mrq
Author
First Published Jul 9, 2024, 3:27 PM IST

ಲಕ್ನೋ: ಸಮವಸ್ತ್ರ ಧರಿಸಿ ರೀಲ್ ಮಾಡಿದ್ದ ಇಬ್ಬರು ಸಬ್‌ ಇನ್‌ಸ್ಪೆಕ್ಟರ್ ಗಳನ್ನು ಅಮಾನತು ಮಾಡಿ ಆದೇಶ ಹೊರಡಿಸಲಾಗಿದೆ. ಇಬ್ಬರು ಪೊಲೀಸ್ ಅಧಿಕಾರಿಗಳು ರಿಯಲ್ ಎಸ್ಟೇಟ್ ಉದ್ಯಮಿ ಜೊತೆ ಸೇರಿ ಹೆದ್ದಾರಿಯಲ್ಲಿ ಭರ್ಜರಿ ರೀಲ್ ಮಾಡಿ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದರು. ಈ ರೀಲ್‌ಗೆ ಸಾರ್ವಜನಿಕ ವಲಯದಿಂದ ಭಾರೀ ಆಕ್ರೋಶ ವ್ಯಕ್ತವಾಗಿದೆ. ಇದೀಗ ರೀಲ್ ಮಾಡಿದ್ದ ಇಬ್ಬರು ಅಧಿಕಾರಿಗಳು ಅಮಾನತಿನ ಶಿಕ್ಷೆಗೆ ಒಳಗಾಗಿದ್ದಾರೆ. ಇಬ್ಬರು ಸಬ್‌ ಇನ್‌ಸ್ಪೆಕ್ಟರ್‌ಗಳು ರಿಯಲ್ ಎಸ್ಟೇಟ್ ಉದ್ಯಮಿಗೆ ಬಾಡಿಗಾರ್ಡ್‌ ರೀತಿಯಲ್ಲಿ ಪೋಸ್ ಕೊಟ್ಟಿದ್ದರು.

ಧರ್ಮೇಂದ್ರ ಶರ್ಮಾ ಮತ್ತು ರಿತೇಶ್ ಕುಮಾರ್ ಅಮಾನತುಗೊಂಡ ಅಧಿಕಾರಿಗಳು. ಇಬ್ಬರು ಅಂಕುರ ವಿಹಾರ ಪೊಲೀಸ್ ಠಾಣೆಯಲ್ಲಿ ಸೇವೆ ಸಲ್ಲಿಸುತ್ತಿದ್ದರು. ಗಾಜಿಯಾಬಾದ್ ಜಿಲ್ಲೆಯ ಲೋನಿ ವೃತ್ತದ ಟ್ರೋನಿಕಾ ಸಿಟಿ ಬಳಿಯ ಉದ್ಯಮಿ ಕಚೇರಿ ಮುಂದಿನ ರಸ್ತೆಯಲ್ಲಿ ಈ ರೀಲ್ ಮಾಡಲಾಗಿದೆ ಎಂದು ಪಿಟಿಐ ವರದಿ ಮಾಡಿದೆ. ಈ ರೀಲ್ ಮಾಡುವ ಉದ್ದೇಶದಿಂದಲೇ ಧರ್ಮೇಂದ್ರ ಶರ್ಮಾ ಮತ್ತು ರಿತೇಶ್ ಕುಮಾರ್ ಉದ್ಯಮಿಯ ಕಚೇರಿ ಬಳಿ ತೆರಳಿದ್ದರು. 

ಒಂದೇ ಒಂದು ಗುರಿ ಸಾಧನೆಗೆ 20 ಬಾಯ್‌ಫ್ರೆಂಡ್‌ ಮಾಡ್ಕೊಂಡ ಚಾಲಾಕಿ ಯುವತಿ

ಉದ್ಯಮಿಯನ್ನು ಸರ್ತಾಜ್ ಎಂದು ಗುರುತಿಸಲಾಗಿದೆ. ಇಬ್ಬರು ಪೊಲೀಸ್ ಅಧಿಕಾರಿಗಳ ಜೊತೆ ಉದ್ಯಮಿ ಸರ್ತಾಜ್ ಹಸ್ತಲಾಘವ ಮಾಡುತ್ತಾರೆ. ನಂತರ ಮೂವರು ನಿಧಾನವಾಗಿ ವಾಕ್ ಮಾಡುತ್ತಾರೆ. ಈ ವಿಡಿಯೋ ಮಾಸ್ ಹಾಡು ಹಾಕಲಾಗಿದೆ. ಸದ್ಯ ಈ ವಿಡಿಯೋ ವೈರಲ್ ಆಗಿದ್ದು, ಕೆಲಸ ಮಾಡೋದು ಬಿಟ್ಟು ಇನ್ನೇನಾದ್ರೂ ಮಾಡಿದ್ರೆ ಹೀಗೆ ಆಗೋದು. ಮಾಡಿದ್ದುಣ್ಣೋ ಮಾರಾಯಾ ಎಂಬಂತೆ ಅಧಿಕಾರಿಗಳ ಸ್ಥಿತಿ ಆಗಿದೆ.

Latest Videos
Follow Us:
Download App:
  • android
  • ios