ರೈಲ್ವೆ ನಿಲ್ದಾಣದಲ್ಲಿ ಬ್ಲೂಫಿಲಂ ನೋಡೋರ ಮಧ್ಯೆ ಫ್ರೀ ವೈಫೈ ಬಳಸಿ UPSC ಪಾಸಾದ ಕೂಲಿ ಕಾರ್ಮಿಕ
ಶ್ರೀನಾಥ್ ಕೇರಳದ ಮುನ್ನಾರ ಮೂಲದವರು. ಕುಟುಂಬದ ಆರ್ಥಿಕ ಪರಿಸ್ಥಿತಿ ಚೆನ್ನಾಗಿರದ ಕಾರಣ ಶ್ರೀನಾಥ್ ಎರ್ನಾಕುಲಂ ರೈಲು ನಿಲ್ದಾಣದಲ್ಲಿ ಕೂಲಿ ಕೆಲಸ ಮಾಡುತ್ತಿದ್ದರು.
ಬೆಂಗಳೂರು: ಭಾರತದ ಪ್ರಮುಖ ರೈಲು ನಿಲ್ದಾಣಗಳಲ್ಲಿ ಉಚಿತ ವೈಫೈ ಸೌಲಭ್ಯ ಕಲ್ಪಿಸಲಾಗಿದೆ. ಈ ವೈಫೈ ಬಳಸಿ ಕೆಲವರು ಬ್ಲೂಫಿಲಂ ವೀಕ್ಷಣೆ ಮಾಡುತ್ತಿರುವ ವಿಡಿಯೋ ವೈರಲ್ ಆಗಿತ್ತು. ಇದೀಗ ಇದೇ ಉಚಿತ ವೈ-ಫೈ ಬಳಸಿ ಕೂಲಿ ಕಾರ್ಮಿಕರೊಬ್ಬರು ಯುಪಿಎಸ್‌ಸಿ ಪರೀಕ್ಷೆ ಪಾಸ್ ಮಾಡಿ ಸಾಧನೆ ಮಾಡಿದ್ದಾರೆ. ಐಎಎಸ್ ಪರೀಕ್ಷೆ ದೇಶದ ಕಠಿಣ ಪರೀಕ್ಷೆಗಳಲ್ಲಿ ಒಂದಾಗಿದೆ. ಸತತ ಪರಿಶ್ರಮ ಮತ್ತು ಶ್ರದ್ಧೆಯಿದ್ರೆ ಖಂಡಿತವಾಗಿ ಸರಸ್ವತಿ ಕೃಪೆ ಸಿಗುತ್ತೆ ಎಂಬ ಮಾತಿದೆ. ಇದು ಬಹುತೇಕ ಎಲ್ಲರ ಜೀವನದಲ್ಲಿ ಸಾಬೀತಾಗಿದೆ. ಐಎಎಸ್ ಅಧಿಕಾರಿ ಶ್ರೀನಾಥ್ ಕೆ. ಅವರ ಜೀವನ ಮೇಲಿನ ಮಾತಿಗೆ ಸಾಕ್ಷಿ. ರೈಲ್ವೆ ನಿಲ್ದಾಣದಲ್ಲಿ ಕೂಲಿ ಕೆಲಸ ಮಾಡ್ಕೊಂಡಿದ್ದ ಶ್ರೀನಾಥ್ ಇಂದು ಐಎಎಸ್ ಅಧಿಕಾರಿಯಾಗಿದ್ದಾರೆ. ಐಎಎಸ್ ಪರೀಕ್ಷೆ ತೇರ್ಗಡೆಯಾಗಲು ಅಭ್ಯರ್ಥಿಗಳು ಕೋಚಿಂಗ್ ಸೆಂಟರ್‌ನಲ್ಲಿ ತರಬೇತಿ ಪಡೆದುಕೊಂಡು, ಹಲವು ಪುಸ್ತಕಗಳಳನ್ನು ಖರೀದಿಸಿ ಅಭ್ಯಾಸ ಮಾಡುತ್ತಾರೆ. ಆದ್ರೆ ಶ್ರೀನಾಥ್ ವೈಫೈ ಕನೆಕ್ಷನ್‌ನಲ್ಲಿ ಅಭ್ಯಾಸ ಮಾಡಿ ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದಾರೆ.
ಶ್ರೀನಾಥ್ ಕೇರಳದ ಮುನ್ನಾರ ಮೂಲದವರು. ಕುಟುಂಬದ ಆರ್ಥಿಕ ಪರಿಸ್ಥಿತಿ ಚೆನ್ನಾಗಿರದ ಕಾರಣ ಶ್ರೀನಾಥ್ ಎರ್ನಾಕುಲಂ ರೈಲು ನಿಲ್ದಾಣದಲ್ಲಿ ಕೂಲಿ ಕೆಲಸ ಮಾಡುತ್ತಿದ್ದರು. ಶ್ರೀನಾಥ್ ತುಂಬಾ ಶ್ರದ್ಧೆಯಿಂದಲೇ ಕೂಲಿ ಕೆಲಸ ಮಾಡುತ್ತಿದ್ದರು. ಪ್ರಯಾಣಿಕರ ಬ್ಯಾಗ್‌ಗಳನ್ನು ತಲೆ ಮೇಲೆ ಹೊತ್ತು ಪ್ಲಾಟ್‌ಫಾರಂನಲ್ಲಿ ಓಡಾಡುತ್ತಿದ್ದರು. ಕಾರಣ, ಶ್ರೀನಾಥ್ ಸಂಬಳವೇ ಅವರ ಕುಟುಂದ ಆದಾಯದ ಮೂಲವಾಗಿತ್ತು. ಎರಡು ಶಿಫ್ಟ್ ನಲ್ಲಿ ಕೆಲಸ ಮಾಡುತ್ತಿದ್ದ ಶ್ರೀನಾಥ್ ಪ್ರತಿದಿನ 400 ರಿಂದ 500 ರೂಪಾಯಿವರೆಗೂ ಸಂಪಾದಿಸುತ್ತಿದ್ದರು. ಇದೇ ಹಣದಲ್ಲಿ ಜೀವನ ನಡೆಸುತ್ತಿದ್ದ ಶ್ರೀನಾಥ್ ಅವರಿಗೆ ಏನಾದ್ರೂ ಸಾಧಿಸಬೇಕು ಎಂಬ ಉದ್ದೇಶದಿಂದ ಕೆಲಸದ ಜೊತೆ ಸಿವಿಲ್ ಪರೀಕ್ಷೆಗೆ ತಯಾರಿ ಆರಂಭಿಸಿದರು.
ಆರ್ಥಿಕ ಪರಿಸ್ಥಿತಿ ಚೆನ್ನಾಗಿರದ ಕಾರಣ ಎಲ್ಲರಂತೆ ಕೋಚಿಂಗ್ ಪಡೆದುಕೊಳ್ಳುವುದು ಕಷ್ಟವಾಗಿತ್ತು. ಪರೀಕ್ಷೆಗೆ ಸಂಬಂಧಿಸಿದ ಪುಸ್ತಕಗಳನ್ನು ಖರೀದಿಸಲು ಸಾಧ್ಯವಾಗುತ್ತಿರಲಿಲ್ಲ. ತಮ್ಮ ಬಳಿಯಲ್ಲಿದ್ದ ಸ್ಮಾರ್ಟ್‌ಫೋನ್‌ನಲ್ಲಿ ಕೆಲ ಮಾಹಿತಿ ತಿಳಿದುಕೊಳ್ಳುತ್ತ ಶ್ರೀನಾಥ್ ಪರೀಕ್ಷೆ ತಯಾರಿ ಆರಂಭಿಸಿದರು. ಕೆಲ ವರ್ಷಗಳ ಬಳಿಕ ದೇಶದ ಪ್ರಮುಖ ರೈಲು ನಿಲ್ದಾಣಗಳಲ್ಲಿ ಕೇಂದ್ರ ಸರ್ಕಾರ ವೈಫೈ ಸೌಲಭ್ಯ ಆರಂಭಿಸಿತು.
22ನೇ ವಯಸ್ಸಿಗೆ ಯುಪಿಎಸ್ಸಿ ಪಾಸಾದ ಯಶಸ್ವಿನಿ; ಮೊದಲ ಪ್ರಯತ್ನದಲ್ಲೇ ಯಶಸ್ಸು ಕಂಡ ಬಿಎ ಪದವೀಧರೆ!
ಜನವರಿ 2016ರಂದು ಮುಂಬೈನ ಛತ್ರಪತಿ ಶಿವಾಜಿ ಟರ್ಮಿನಸ್ ರೈಲು ನಿಲ್ದಾಣದಲ್ಲಿ ವೈಫೈ ಕನೆಕ್ಷನ್ ಸ್ಥಾಪಿಸಲಾಯ್ತು. ಈ ಸೌಲಭ್ಯ ಶ್ರೀನಾಥ್ ಅವರಿಗೆ ಸಿಎಸ್‌ಇ ಪರೀಕ್ಷೆ ಎದುರಿಸಲು ಸ್ಪೂರ್ತಿ ನೀಡಿತು. ನಂತರ ಕೋಚಿಂಗ್ ಸಂಬಂಧ ಆನ್‌ಲೈನ್ ವಿಡಿಯೋಗಳನ್ನು ನಿರಂತರವಾಗಿ ನೋಡಲು ಆರಂಭಿಸಿದರು. ಉಚಿತ ವೈಫೈ ಸೌಲಭ್ಯ ಪಡೆದು ಮೊಬೈಲ್‌ನಲ್ಲಿಯೇ ಪರೀಕ್ಷೆಗೆ ಸಂಬಂಧಿಸಿದ ಮಾಹಿತಿ ಪಡೆದುಕೊಂಡು ಕೆಪಿಎಸ್‌ಸಿ (ಕೇರಳದ ಸಿವಿಲ್ ಪರೀಕ್ಷೆ) ಪಾಸ್ ಮಾಡ್ತಾರೆ.
ಒಂದು ನಿಶ್ಚಿತ ಉದ್ಯೋಗ ಪಡೆದುಕೊಂಡ ಮೇಲೆ ಶ್ರೀನಾಥ್ ಓದುವುದನ್ನು ಮಾತ್ರ ನಿಲ್ಲಿಸಲಿಲ್ಲ. ಕೆಲಸದ ಜೊತೆ ಯುಪಿಎಸ್‌ಸಿ ಪರೀಕ್ಷೆಯ ತಯಾರಿ ಆರಂಭಿಸಿದರು. ನಾಲ್ಕನೇ ಪ್ರಯತ್ನದಲ್ಲಿ ಯುಪಿಎಸ್‌ಸಿ ಉತ್ತೀರ್ಣರಾಗಿ ಐಎಎಸ್ ಅಧಿಕಾರಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ.
ವೈದ್ಯೆಯಾಗಿಯೇ ಯುಪಿಎಸ್‌ಸಿ ಪಾಸ್! IAS ಅಧಿಕಾರಿಯನ್ನೇ 2ನೇ ಮದ್ವೆಯಾದ ರೇಣು!