ರಾಮೇಶ್ವರಂ [ಜ.31]: ಕಾಗೆಗಳ ಮಾಂಸವನ್ನು ಕೋಳಿ ಮಾಂಸದ ಅಂಗಡಿಗಳಿಗೆ ಪೂರೈಸುತ್ತಿದ್ದ ಪ್ರಕರಣ ಭೇದಿಸಿರುವ ತಮಿಳುನಾಡು ಅರಣ್ಯ ಇಲಾಖೆ ಅಧಿಕಾರಿಗಳು, ಈ ಸಂಬಂಧ ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ. 

ಅಲ್ಲದೆ, ಈ ಆರೋಪಿಗಳಿಂದ ಸುಮಾರು 150 ಸತ್ತ ಕಾಗೆಗಳನ್ನು ಅರಣ್ಯಾಧಿಕಾರಿಗಳು ವಶಕ್ಕೆ ಪಡೆದಿದ್ದಾರೆ.

ದೇವನಗರಿ ಎಂದೇ ಪ್ರಸಿದ್ಧವಾದ ರಾಮೇಶ್ವರಂ ನಗರದಲ್ಲಿ ಭಕ್ತಾದಿಗಳು, ತಮ್ಮ ಪೂರ್ವಜರ ಆತ್ಮಶಾಂತಿಗಾಗಿ ಇಡಲಾಗಿದ್ದ ಪಿಂಡದ ಆಹಾರ ತಿಂದ ಕೆಲ ಕಾಗೆಗಳು ಸತ್ತಿದ್ದವು. 

ಚೀನಾಕ್ಕೆ ಹೋದರೆ ಹಸಿಯಾದ ಮಾಂಸ ತಿನ್ನಬೇಡಿ: ಕೇಂದ್ರ..

ಈ ಸಂಬಂಧ ಭಕ್ತಾದಿಗಳೇ ನೀಡಿದ ದೂರಿನ ಮೇರೆಗೆ, ಕಾರಾರ‍ಯಚರಣೆ ಕೈಗೊಂಡ ಅಧಿಕಾರಿಗಳು, ದುಷ್ಕರ್ಮಿಗಳು ಕಾಗೆಗಳನ್ನೇ ಕೋಳಿ ಮಾಂಸದ ಅಂಗಡಿಗಳಿಗೆ ಮಾರುತ್ತಿದ್ದನ್ನು ಪತ್ತೆ ಹಚ್ಚಿದ್ದಾರೆ.