Asianet Suvarna News Asianet Suvarna News

Gulf of Kutch: ಕಛ್‌ ಕೊಲ್ಲಿಯಲ್ಲಿ ಎರಡು ಹಡಗುಗಳ ಡಿಕ್ಕಿ : ICGS Samudra Pavak ಕಾರ್ಯಾಚರಣೆ!

*ಓಖ್ಲಾ  ಸಮೀಪದ ಕಛ್‌ ಕೊಲ್ಲಿಯಲ್ಲಿ  ಎರಡು ಹಡಗುಗಳ ಡಿಕ್ಕಿ
*ಸುದೈವವಶಾತ್‌ ಯಾವುದೇ ಸಾವು ನೋವುಗಳು ಸಂಭವಿಸಿಲ್ಲ
*ಐಸಿಜಿಎಸ್ ಸಮುದ್ರ ಪಾವಕ್ ಕಾರ್ಯಾಚರಣೆ ಆರಂಭ!

Two merchant vessels collide near Gulf of Kutch no casualty or oil spill reported ICG mnj
Author
Bengaluru, First Published Nov 28, 2021, 11:32 AM IST

ಅಹಮದಾಬಾದ್‌(ನ.28): ಗುಜರಾತಿನ ಓಖ್ಲಾ (Okhla) ಸಮೀಪದ ಕಛ್‌ ಕೊಲ್ಲಿಯಲ್ಲಿ (Gulf of Kutch) ಶುಕ್ರವಾರ ರಾತ್ರಿ ಎರಡು ಹಡಗುಗಳ ಡಿಕ್ಕಿಯಾಗಿವೆ. ಹಡಗು ಡಿಕ್ಕಿಯಿಂದ ಭಾರೀ ಪ್ರಮಾಣದ ತೈಲ ಸೋರಿಕೆಯಾಗಿರುವ ಸಾಧ್ಯತೆ ಇತ್ತು. ಆದರೆ ಐಸಿಜಿ (ICG) ಹಡಗುಗಳು ಮತ್ತು ಪ್ರದೇಶದ ಮೌಲ್ಯಮಾಪನಕ್ಕಾಗಿ ನಿಯೋಜಿಸಲಾದ ಹೆಲಿಕಾಪ್ಟರ್, ಎರಡೂ ಎಂವಿಗಳಿಂದ ಯಾವುದೇ ತೈಲ ಸೋರಿಕೆ ಅಥವಾ ಸಮುದ್ರ ಮಾಲಿನ್ಯವಾಗಿಲ್ಲ ಎಂದು ಸ್ಪಷ್ಟಪಡಿಸಿದೆ. ಅರಬ್ಬೀ ಸಮುದ್ರದಲ್ಲಿ ಎಂವಿ ಏವಿಯೇಟರ್‌ (MV Aviator) ಹಾಗೂ ಅಟ್ಲಾಂಟಿಕ್‌ ಗ್ರೇಸ್‌ (Atlantic grace) ಎಂಬ ಎರಡು ಬೃಹತ್‌ ಹಡಗುಗಳು ಪರಸ್ಪರ ಡಿಕ್ಕಿ ಹೊಡೆದಿದ್ದು, ಸುದೈವವಶಾತ್‌ ಯಾವುದೇ ಸಾವು ನೋವುಗಳು ಸಂಭವಿಸಿಲ್ಲ.

ಘಟನಾ ಸ್ಥಳದ ಸುತ್ತಲೂ ಭಾರತೀಯ ತಟ ರಕ್ಷಣಾಪಡೆಯ (Indian Coast Guard) ಹಡಗುಗಳನ್ನು ನೇಮಿಸಲಾಗಿದ್ದು ಅವು ಪರಿಸ್ಥಿತಿಯ ಮೇಲ್ವಿಚಾರಣೆ ನಡೆಸುತ್ತಿವೆ. ತೈಲ ಸೋರಿಕೆಯ ಸಾಧ್ಯತೆ ಹಿನ್ನೆಲೆ ಈ ಪ್ರದೇಶದಲ್ಲಿ ಮಾಲಿನ್ಯ ನಿಯಂತ್ರಣ ನೌಕೆಯನ್ನು ಸಹ ಸಜ್ಜುಗೊಳಿಸಲಾಗಿದೆ. ತೈಲ/ರಾಸಾಯನಿಕ ಟ್ಯಾಂಕರ್ ಎಂವಿ  ಅಟ್ಲಾಂಟಿಕ್ ಗ್ರೇಸ್ ಮತ್ತು ಬಲ್ಕ್ ಕ್ಯಾರಿಯರ್ ಎಂವಿ ಏವಿಯೇಟರ್ ನಡುವೆ ಘರ್ಷಣೆಯು ನವೆಂಬರ್ 26 ರಂದು 21:30 ಗಂಟೆಗಳ ಸುಮಾರಿಗೆ ಸಂಭವಿಸಿದೆ. ಇದು ಅತ್ಯಂತ ಸೂಕ್ಷ್ಮ ಸಮುದ್ರ ವೈವಿಧ್ಯತೆಯ ಮೀಸಲು ಎಂದು ಪರಿಗಣಿಸಲ್ಪಟ್ಟ ಪ್ರದೇಶದಲ್ಲಿ ಸಂಭವಿಸಿದೆ ಎಂದು ICG ಪ್ರಕಟಣೆಯಲ್ಲಿ ತಿಳಿಸಿದೆ. 

 

 

ಐಸಿಜಿಎಸ್ ಸಮುದ್ರ ಪಾವಕ್ ಕಾರ್ಯಾಚರಣೆ!

ಎಂವಿ ಅಟ್ಲಾಂಟಿಕ್ ಗ್ರೇಸ್ (Hong Kong origin) 22 ಭಾರತೀಯ ಸಿಬ್ಬಂದಿಯನ್ನು ಹೊಂದಿದ್ದು, ಎಂವಿ ಏವಿಯೇಟರ್ ( Marshall Island) ಫಿಲಿಪೈನ್ಸ್‌ನಿಂದ 22 ಸದಸ್ಯರನ್ನು ಹೊಂದಿತ್ತು ಎಂದು ತಿಳಿದು ಬಂದಿದೆ. ಘಟನೆಯ ಮಾಹಿತಿಯನ್ನು ಸ್ವೀಕರಿಸಿದ ತಕ್ಷಣ, ICG ಪ್ರದೇಶವನ್ನು ಪರೀಕ್ಷಿಸಲು ಎರಡು ಹಡಗುಗಳನ್ನು ನಿಯೋಜಿಸಿದೆ. ಕರಾವಳಿ ಕಾವಲು ಪಡೆಯ ಮಾಲಿನ್ಯ ನಿಯಂತ್ರಣ ನೌಕೆ, ಐಸಿಜಿಎಸ್ ಸಮುದ್ರ ಪಾವಕ್ ( ICGS Samudra Pavak) ಅನ್ನು ಮೌಲ್ಯಮಾಪನಕ್ಕಾಗಿ ಮತ್ತು ಸಮುದ್ರ ತೈಲ ಮಾಲಿನ್ಯ ತಡೆಗಟ್ಟುಲು ನಿಯೋಜಿಸಲಾಗಿದೆ. ಜತೆಗೆ ಐಸಿಜಿ ಹೆಲಿಕಾಪ್ಟರ್ (ICG helicopter) ಕೂಡ ಮಾಲಿನ್ಯದ ಮೌಲ್ಯಮಾಪನವನ್ನು ನಡೆಸುತ್ತಿದೆ ಮತ್ತು ಸಹಾಯ ಮಾಡುತ್ತಿದೆ ಎಂದು ಎಂದು ಪ್ರಕಟಣೆ ತಿಳಿಸಿದೆ. ಅಟ್ಲಾಂಟಿಕ್‌ ಗ್ರೇಸ್‌  ಹಡಗು 183 ಮೀಟರ್ ಉದ್ದವಿದ್ದರೆ,  ಎಂವಿ ಏವಿಯೇಟರ್‌ 140 ಮೀಟರ್ ಉದ್ದವಾಗಿದೆ. ಅವು 32 ಮೀಟರ್ ಮತ್ತು 25 ಮೀಟರ್ ಅಗಲ ಇವೆ.

ಪಾಕ್‌ ಬತ್ತಳಿಕೆಗೆ ಚೀನಾದ ದೈತ್ಯ ಯುದ್ಧ ನೌಕೆ!

ಡಿಯಲ್ಲಿ ಭಾರತದ (India) ಜತೆ ತಗಾದೆ ತೆಗೆದಿರುವ ಚೀನಾ ಇದೀಗ ಭಾರತದ ಶತ್ರು ರಾಷ್ಟ್ರವಾಗಿರುವ ಪಾಕಿಸ್ತಾನಕ್ಕೆ (Pakistan) ಬಲ ತುಂಬುವ ಕೆಲಸವನ್ನು ತೀವ್ರಗೊಳಿಸಿದೆ. ತನ್ನ ಅತ್ಯಂತ ದೈತ್ಯ ಹಾಗೂ ಅತ್ಯಾಧುನಿಕ ಸೌಲಭ್ಯಗಳನ್ನು ಹೊಂದಿರುವ ಯುದ್ಧ ನೌಕೆಯನ್ನು ಪಾಕಿಸ್ತಾನಕ್ಕೆ ಚೀನಾ (China) ಹಸ್ತಾಂತರ ಮಾಡಿದೆ. ತನ್ಮೂಲಕ ಪಾಕಿಸ್ತಾನವನ್ನು ಶಕ್ತಿಶಾಲಿಗೊಳಿಸುವುದರ ಜತೆಗೆ ಹಿಂದೂ ಮಹಾಸಾಗರದಲ್ಲಿ ತನ್ನ ಅಸ್ತಿತ್ವವನ್ನು ಹೆಚ್ಚಳ ಮಾಡಿಕೊಳ್ಳಲು ಹೊರಟಿದೆ.

INS Vela: ನೌಕಾಪಡೆಗೆ 4ನೇ ಸ್ಕಾರ್ಪೀನ್ ದರ್ಜೆಯ ಜಲಾಂತರ್ಗಾಮಿ ನೌಕೆ... ಏನಿದರ ವಿಶೇಷತೆ

ಚೀನಾದ ಸರ್ಕಾರಿ ಸ್ವಾಮ್ಯದ ಹಡಗು (Warship) ನಿಗಮ 054ಎ/ಪಿ ಮಾದರಿಯ ಯುದ್ಧ ನೌಕೆಯನ್ನು ತಯಾರಿಸಿದ್ದು, ಶಾಂಘೈನಲ್ಲಿ ನಡೆದ ಸಮಾರಂಭದಲ್ಲಿ ಅದನ್ನು ಪಾಕಿಸ್ತಾನ ಸೇನೆಗೆ ಹಸ್ತಾಂತರ ಮಾಡಲಾಗಿದೆ ಎಂದು ಅಧಿಕೃತ ಪ್ರಕಟಣೆ ತಿಳಿಸಿದೆ. ಪಾಕಿಸ್ತಾನ ತನ್ನ ಈ ಹೊಸ ಯುದ್ಧ ನೌಕೆಗೆ ‘ಪಿಎನ್‌ಎಸ್‌ ತುಘ್ರಿಲ್‌’ ಎಂದು ನಾಮಕರಣ ಮಾಡಿದೆ.

Follow Us:
Download App:
  • android
  • ios