ಮೀರತ್(ಅ.28): ಉತ್ತರ ಪ್ರದೇಶದ ಮೀರತ್ ಜಿಲ್ಲೆಯ;್;ಒ ಲಂಡನ್‌ನಿಂದ ಬಂದ ವೈದ್ಯ ಮೋಸಗೊಳಗಾದ ಘಟನೆ ನಡೆದಿದೆ. ಲಂಡನ್‌ ರಿಟರ್ನ್‌ಡ್ ವೈದ್ಯ ಸುಮಾರು ಎರಡೂವರೆ ಕೋಟಿ ರೂಪಾಯಿ ಕೊಟ್ಟು ಅಲ್ಲಾವುದ್ದೀನ್‌ನ ಅದ್ಭುತ ದ್ವೀಪವನ್ನು ಖರೀದಿಸಿದ್ದಾನೆ.

ನಿನ್ನೆಲ್ಲ ಆಸೆಗಳನ್ನು ನೆರವೇರಿಸುತ್ತೆ ಎಂಬ ಆಶ್ವಾಸೆನೆ ಕೊಟ್ಟು ಇಬ್ಬರು ಯುವಕರು ತಾವು ತಾಂತ್ರಿಕರೆಂದು ಪರಿಚಯಿಸಿಕೊಂಡು ಅಲ್ಲಾವುದ್ದೀನ್ ನ ಚಿರಾಗ್ ಎಂದು ದೀಪವೊಂದನ್ನು ಮಾರಾಟ ಮಾಡಿದ್ದಾರೆ. ಇದಕ್ಕೆ ಪ್ರತಿಯಾಗಿ ಎರಡೂವರೆ ಕೋಟಿ ರೂಪಾಯಿ ವಸೂಲಿ ಮಾಡಿದ್ದಾರೆ.

21 ದಿನ ವೃತಾಚಣೆ ಮಾಡಿ ಶಾರದೆ ರೂಪದಲ್ಲಿ ಮಿಂಚಿದ ಕ್ರಿಶ್ಚಿಯನ್ ಯುವತಿ

ಬ್ರಹ್ಮಾಪುರಿ ಪೊಲೀಸ್ ಠಾಣೆಯ ವ್ಯಾಪ್ತಿಯ ಕೈರಾನಗರದಲ್ಲಿ ಘಟನೆ ವರದಿಯಾಗಿದೆ. ಲಂಡನ್‌ನಿಂದ ಮರಳಿದ್ದ ವೈದ್ಯ ಡಾ. ಲಯೀಕ್ ಖಾನ್ ಘಟನೆಯಲ್ಲಿ ಮೋಸ ಹೋಗಿದ್ದು ಪೊಲೀಸ್ ಠಾಣೆಯ ಮೊರೆ ಹೋಗಿದ್ದಾರೆ.

ಪೊಲೀಸರು ಇಬ್ಬರು ವಂಚಕರನ್ನು ವಶಕ್ಕೆ ಪಡೆದು, ಮ್ಯಾಜಿಕಲ್ ದೀಪವನ್ನೂ ಪಡೆದಿದ್ದಾರೆ. 2018ರಲ್ಲಿ ಸಮೀನಾ ಎಂ ರೋಗಿಯನ್ನು ಭೇಟಿಯಾಗಿ ನಂತರ ಪ್ರತಿಬಾರಿ ಚಿಕಿತ್ಸೆ ನೀಡಲು ಬರುತ್ತಿದ್ದರು.

ಗಂಗೂಲಿ To ಧೋನಿ: ಬಾಲ್ಯದ ಗೆಳೆತಿಯರ ಮದುವೆಯಾದ ಕ್ರಿಕೆಟಿಗರು!

ಅದೇ ಮಹಿಳೆಯ ಮನೆಯಲ್ಲಿ ತಾಂತ್ರಿಕರನ್ನು ಭೇಟಿಯಾಗಿದ್ದೆ ಎಂದಿದ್ದಾರೆ ವೈದ್ಯ. ಈ ಸಂದರ್ಭ ತಾಂತ್ರಿಕ ಮ್ಯಾಜಿಕಲ್ ದೀಪದ ಬಗ್ಗೆ ಹೇಳಿದ್ದ. ತಾಂತ್ರಿಕ ವೈದ್ಯನನ್ನು ಬಿಲಿಯನೇರ್ ಮಾಡುವುದಾಗಿ ಭರವಸೆ ಕೊಟ್ಟಿದ್ದ.

ದೀಪವನ್ನು ನೀಡಿ ಅದರಿಂದ ಜಿನ್ ಪ್ರತ್ಯಕ್ಷವಾಗುವುದಾಗಿಯೂ ವೈದ್ಯನನ್ನು ನಂಬಿಸಲಾಗಿತ್ತು. ನಂತರದಲ್ಲಿ ಜಿನ್ ತನ್ನ ರೋಗಿ ಸಮೀನಾಳ ಪತಿ ಎಂದು ವೈದ್ಯನಿಗೆ ಅರಿವಾಗಿದೆ.