ಬೈಕ್‌ಗೆ ಡಿಕ್ಕಿ ಹೊಡೆದ ಬಿಜೆಪಿ ಎಂಪಿ ಬ್ರಿಜ್ ಭೂಷಣ್ ಪುತ್ರನ ಬೆಂಗಾವಲು ವಾಹನ; ಇಬ್ಬರ ಸಾವು, ಮಹಿಳೆ ಗಂಭೀರ
BJP MP Son: ಪೊಲೀಸರ ಪ್ರಕಾರ, ಅಪಘಾತಕ್ಕೊಳಗಾದ ಕಾರ್‌ನಲ್ಲಿ ಬಿಜೆಪಿ ಅಭ್ಗರ್ಥಿ ಕರಣ್ ಭೂಷಣ್ ಇದ್ದರು ಎಂದು ವರದಿಯಾಗಿದೆ. ಅಪಘಾತಕ್ಕೊಳಗಾದ ಕಾರ್ ನೋಂದಣಿ ಮಾಜಿ ಡಬ್ಲ್ಯೂಎಫ್‌ಐ ಮುಖ್ಯಸ್ಥರ ಕುಟುಂಬಸ್ಥರ ಹೆಸರಿನಲ್ಲಿದೆ.
ಲಕ್ನೋ: ಬಿಜೆಪಿ ಸಂಸದ ಬ್ರಿಜ್ ಭೂಷಣ್ (MP Brij Bhushan Sharan Singh) ಪುತ್ರ ಕರಣ್ ಭೂಷಣ್ ಸಿಂಗ್ ( BJP candidate Karan Bhushan Singh) ಬೆಂಗಾವಲು ವಾಹನಕ್ಕೆ ಬೈಕ್ ಡಿಕ್ಕಿಯಾದ ಪರಿಣಾಮ ಇಬ್ಬರು ಯುವಕರು ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ. ಉತ್ತರಪ್ರದೇಶದ ಗೊಂಡಾ ಎಂಬಲ್ಲಿ ಈ ಅಪಘಾತ ನಡೆದಿದೆ.ಅಪಘಾತದಲ್ಲಿ ಮಹಿಳೆಯೊಬ್ಬರು ಗಂಭೀರವಾಗಿ ಗಾಯಗೊಂಡಿದ್ದು, ಸ್ಥಳೀಯ ಆಸ್ಪತ್ರೆಗ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಬೆಂಗಾವಲು ವಾಹನದ ಚಾಲಕನನ್ನು ಪೊಲೀಸರು ವಶಕ್ಕೆ ಪಡೆದುಕೊಂಡು ವಿಚಾರಣೆಗೆ ಒಳಪಡಿಸಿದ್ದಾರೆ.
ರೆಹಾನ್ ಖಾನ್ (17) ಮತ್ತು ಶೆಹಜಾದ್ ಖಾನ್ (20) ಮೃತ ಯುವಕರು. ಇಬ್ಬರು ಯುವಕರು ಬೈಕ್‌ನಲ್ಲಿ ತೆರಳುತ್ತಿದ್ದರು. ಗೊಂಡಾದ ಶಾಲೆಯ ಬಳಿ ಬಿಜೆಪಿ ಅಭ್ಯರ್ಥಿ ಕರಣ್ ಭೂಷಣ್ ಬೆಂಗಾವಲು ವಾಹನ ಎಸ್‌ಯುವಿ ಚಾಲಕನ ನಿಯಂತ್ರಣ ಕಳೆದುಕೊಂಡು ಬೈಕ್‌ಗೆ ಡಿಕ್ಕಿ ಹೊಡೆದಿದೆ. ಬೈಕ್ ಸವಾರರಿಬ್ಬರು ಸ್ಥಳದಲ್ಲಿಯೇ ಮೃತರಾಗಿದ್ದಾರೆ. ನಂತರ ರಸ್ತೆ ಬದಿ ತೆರಳುತ್ತಿದ್ದ ಸೀತಾ ದೇವಿ (60) ಎಂಬ ಮಹಿಳೆಗೆ ಡಿಕ್ಕಿ ಹೊಡೆದು ನಿಂತಿದೆ ಎಂದು ಕೆರ್ನಾಲ್ಗಂಜ್ ಎಸ್‌ಹೆಚ್‌ಓ ನಾರಾಯಣ್ ಸಿಂಗ್ ಮಾಹಿತಿ ನೀಡಿದ್ದಾರೆ.
ಅಪಘಾತದ ಬಳಿಕ ಕೂಡಲೇ ಪೊಲೀಸರು ರೆಹಾನ್ ಮತ್ತು ಶೆಹಜಾದ್‌ನನ್ನು ಆಸ್ಪತ್ರೆಗೆ ತೆಗೆದುಕೊಂಡು ಹೋಗಲಾಗಿತ್ತು. ಅಲ್ಲಿ ಇಬ್ಬರು ಮೃತರಾಗಿರೋದನ್ನು ವೈದ್ಯರು ಘೋಷಿಸಿದ್ದಾರೆ. ಮಹಿಳೆಗೆ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಪೊಲೀಸ್ ಅಧಿಕಾರಿ ನಾರಾಯಣ್ ಸಿಂಗ್ ಹೇಳಿದ್ದಾರೆ.
ಮೃತದೇಹಗಳನ್ನು ಮರಣೋತ್ತರ ಶವ ಪರೀಕ್ಷೆಗಾಗಿ ರವಾನಿಸಲಾಗಿದೆ. ಕಾರ್ ವಶಕ್ಕೆ ಪಡೆದುಕೊಳ್ಳಲಾಗಿದ್ದು, ಚಾಲಕನನ್ನು ಬಂಧಿಸಲಾಗಿದೆ. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಆರಂಭಿಸಿದ್ದಾರೆ.
ಕಾಂಗ್ರೆಸ್ ಜೊತೆ ನಮ್ಮದು ಪರ್ಮ್‌ನೆಂಟ್ ಮದುವೆ ಅಲ್ಲ ಎಂದ ಅರವಿಂದ್ ಕೇಜ್ರಿವಾಲ್
ಪೊಲೀಸರ ಪ್ರಕಾರ, ಅಪಘಾತಕ್ಕೊಳಗಾದ ಕಾರ್‌ನಲ್ಲಿ ಬಿಜೆಪಿ ಅಭ್ಗರ್ಥಿ ಕರಣ್ ಭೂಷಣ್ ಇದ್ದರು ಎಂದು ವರದಿಯಾಗಿದೆ. ಅಪಘಾತಕ್ಕೊಳಗಾದ ಕಾರ್ ನೋಂದಣಿ ಮಾಜಿ ಡಬ್ಲ್ಯೂಎಫ್‌ಐ ಮುಖ್ಯಸ್ಥರ ಕುಟುಂಬಸ್ಥರ ಹೆಸರಿನಲ್ಲಿದೆ. ಅಪಘಾತದ ಬಳಿಕ ಸ್ಥಳೀಯರು ರಸ್ತೆ ಬಂದ್ ಮಾಡಿ ನ್ಯಾಯಕ್ಕಾಗಿ ಪ್ರತಿಭಟನೆ ನಡೆಸಿದ್ದಾರೆ. ಮುಂಜಾಗ್ರತ ಕ್ರಮವಾಗಿ ಹೆಚ್ಚಿನ ಸಂಖ್ಯೆಯಲ್ಲಿ ಪೊಲೀಸರನ್ನು ನಿಯೋಜನೆ ಮಾಡಲಾಗಿದೆ.
30 ನಿಮಿಷದಲ್ಲಿ ಸ್ಫೋಟಿಸುವ ಬಾಂಬ್ ಬೆದರಿಕೆ: ವಿಮಾನದಿಂದ ಜಾರಿ ಹೊರಬಂದ ಪ್ರಯಾಣಿಕರು, ರಕ್ಕೆ ಮೇಲೆ ಬಂದ ವೃದ್ಧೆ
ಹಾಲಿ ಸಂಸದ ಬ್ರಿಜ್ ಭೂಷಣ್ ಪುತ್ರನಾಗಿರುವ ಕರಣ್ ಭೂಷಣ್ ಈ ಬಾರಿ ಕೈಸೇರ್‌ಗಂಜ್ ಲೋಕಸಭಾ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದಾರೆ. ಬ್ರಿಜ್ ಭೂಷಣ್ ವಿರುದ್ಧ ಗಂಭೀರ ಆರೋಪಗಳು ಕೇಳಿ ಬಂದ ಹಿನ್ನೆಲೆ ಬಿಜೆಪಿ ಮಗನಿಗೆ ಟಿಕೆಟ್ ನೀಡಿತ್ತು.