Asianet Suvarna News Asianet Suvarna News

ಕಾಂಗ್ರೆಸ್ ಜೊತೆ ನಮ್ಮದು ಪರ್ಮ್‌ನೆಂಟ್ ಮದುವೆ ಅಲ್ಲ ಎಂದ ಅರವಿಂದ್ ಕೇಜ್ರಿವಾಲ್ 

ಸಂದರ್ಶನದಲ್ಲಿ ಕಾಂಗ್ರೆಸ್ ಜೊತೆ ಎಎಪಿ  ಪರ್ಮ್‌ನೆಂಟ್‌ ಆಗಿ ಮದುವೆ ಮಾಡಿಕೊಂಡಿಲ್ಲ ಎಂದ ಅರವಿಂದ್ ಕೇಜ್ರಿವಾಲ್, ಗೂಂಡಾಗಿರಿ ಮತ್ತು ಸರ್ವಾಧಿಕಾರದ ಬಿಜೆಪಿ ಸರ್ಕಾರವನ್ನು ತೆಗೆದು ಹಾಕೋದು ನಮ್ಮ ಗುರಿಯಾಗಿದೆ ಎಂದಿದ್ದಾರೆ.

Delhi CM Arvind Kejriwal says not in a permanent or love marriage with Congress party mrq
Author
First Published May 29, 2024, 5:41 PM IST | Last Updated May 29, 2024, 5:41 PM IST

ನವದೆಹಲಿ: ಐಎನ್‌ಡಿಐಎ ಕೂಟದ (INDIA Bloc) ಭಾಗವಾಗಿರುವ ಎಎಪಿ ಪಕ್ಷದ ಮುಖ್ಯಸ್ಧ, ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ (Delhi CM Arvind Kejriwal) ಸಂದರ್ಶನದಲ್ಲಿ ಅಚ್ಚರಿಯ ಹೇಳಿಕೆಯನ್ನು ನೀಡಿದ್ದಾರೆ. ಕಾಂಗ್ರೆಸ್ (Congress) ಜೊತೆಗಿನ ನಮ್ಮ ಮೈತ್ರಿ ಪರ್ಮ್‌ನೆಂಟ್ ಅಲ್ಲ. ಬಿಜೆಪಿಯನ್ನು ಸೋಲಿಸಬೇಕು ಎಂಬ ಉದ್ದೇಶದಿಂದ ಎರಡು ಪಕ್ಷಗಳು ಜೊತೆಯಾಗಿ ಲೋಕಸಭಾ ಚುನಾವಣೆಯನ್ನು ಎದುರಿಸಿವೆ. ಜೂನ್ 4ರಂದು ಸರ್ಪ್ರೈಸ್ ಫಲಿತಾಂಶ ಬರಲಿದ್ದು, ಐಎನ್‌ಡಿಐಎ ಗೆಲ್ಲಲಿದೆ ಎಂದು ಅರವಿಂದ್ ಕೇಜ್ರಿವಾಲ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ. 

ಇಂಡಿಯಾ ಟುಡೇಗೆ ನೀಡಿದ ಸಂದರ್ಶನದಲ್ಲಿ ಕಾಂಗ್ರೆಸ್ ಜೊತೆ ಎಎಪಿ  ಪರ್ಮ್‌ನೆಂಟ್‌ ಆಗಿ ಮದುವೆ ಮಾಡಿಕೊಂಡಿಲ್ಲ ಎಂದ ಅರವಿಂದ್ ಕೇಜ್ರಿವಾಲ್, ಗೂಂಡಾಗಿರಿ ಮತ್ತು ಸರ್ವಾಧಿಕಾರದ ಬಿಜೆಪಿ ಸರ್ಕಾರವನ್ನು ತೆಗೆದು ಹಾಕೋದು ನಮ್ಮ ಗುರಿಯಾಗಿದೆ ಎಂದಿದ್ದಾರೆ. ದೆಹಲಿಯಲ್ಲಿ ಎಎಪಿ ಮತ್ತು ಕಾಂಗ್ರೆಸ್ ಮೈತ್ರಿ ಮಾಡಿಕೊಂಡು ಕ್ಷೇತ್ರಗಳನ್ನು ಹಂಚಿಕೊಂಡಿವೆ. ಆದ್ರೆ ಪಂಜಾಬ್‌ನಲ್ಲಿ ಎದುರಾಳಿಯಾಗಿ ಸ್ಪರ್ಧಿಸಿದ್ದಾರೆ.

ಬಿಜೆಪಿಯನ್ನು ಎಲ್ಲೆಲ್ಲಿ ಸೋಲಿಸಬಹುದು ಅಲ್ಲಿ ಕಾಂಗ್ರೆಸ್ ಮತ್ತು ಆಪ್ ಮೈತ್ರಿ ಮಾಡಿಕೊಂಡು ಚುನಾವಣೆ ಎದುರಿಸಿವೆ. ಪಂಜಾಬ್‌ನಲ್ಲಿ ಬಿಜೆಪಿಗೆ ಅಸ್ತಿತ್ವ ಇಲ್ಲ ಎಂದ ಅರವಿಂದ್ ಕೇಜ್ರಿವಾಲ್, ಈ ಬಾರಿ ದೇಶವನ್ನು ರಕ್ಷಿಸಬೇಕಿದೆ ಎಂದು ಹೇಳಿದರು.

ಜೈಲಿಗೆ ಹೋಗಲು ನಾನು ಹೆದರಲ್ಲ

ತಮ್ಮ ವಿರುದ್ಧದ ಪ್ರಕರಣ ಮತ್ತು ಬಂಧನದ ಕುರಿತು ಮಾತನಾಡಿದ ಅರವಿಂದ್ ಕೇಜ್ರಿವಾಲ್, ನಾನು ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡುವ ಪ್ರಶ್ನೆಯೇ ಇಲ್ಲಿ ಉದ್ಭವ ಆಗಲ್ಲ. ನಾನು ಮತ್ತೆ ಜೈಲಿಗೆ ಹೋದರೆ ಅದು ವಿಷಯವೇ ಅಲ್ಲ, ದೇಶ ಅಪಾಯದಲ್ಲಿದೆ. ಬಿಜೆಪಿಯವರು ನನ್ನನ್ನು ಎಷ್ಟು ಬೇಕಾದ್ರೂ ದಿನ ಜೈಲಿಗೆ ಹಾಕಲಿ ನಾನು ಹೆದರಲ್ಲ ಎಂದು ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು. ಮದ್ಯ ಹಗರಣ ಪ್ರಕರಣದಲ್ಲಿ ಮಧ್ಯಂತರ ಜಾಮೀನಿನ ಮೇಲೆ ಹೊರಗಡೆ ಇರೋ ಸಿಎಂ ಅರವಿಂದ್ ಕೇಜ್ರಿವಾಲ್ ಜೂನ್ 2ರಂದು ಜೈಲು ಅಧಿಕಾರಿಗಳ ಮುಂದೆ ಶರಣಾಗಬೇಕು.

ಆಪ್ ರಾಜ್ಯಸಭಾ ಸಂಸದೆ ಸ್ವಾತಿ ಮಲಿವಾಲ್ ಅವರ ಮೇಲಿನ ಹಲ್ಲೆ ಪ್ರಕರಣದ ಕುರಿತು ಪ್ರತಿಕ್ರಿಯಿಸಲು ನಿರಾಕರಿಸಿದ ಅರವಿಂದ್ ಕೇಜ್ರಿವಾಲ್, ಕೇಸ್ ನ್ಯಾಯಾಲಯದಲಲ್ಲಿದೆ ಎಂದರು. ಇದೇ ವೇಳೆ ಬಿಜೆಪಿ ಮತ್ತೆ ಅಧಿಕಾರಕ್ಕೆ ಬಂದ್ರೆ ಉತ್ತರ ಪ್ರದೇಶದ ಸಿಎಂ ಯೋಗಿ ಆದಿತ್ಯನಾಥ್ ಅವರ ರಾಜಕೀಯ ಜೀವನವನ್ನು ಪ್ರಧಾನಿಗಳು ಅಂತ್ಯಗೊಳಿಸಲಿದ್ದಾರೆ ಎಂದು ತಮ್ಮ ಹೇಳಿಕೆಯನ್ನು ಅರವಿಂದ್ ಕೇಜ್ರಿವಾಲ್ ಪುನರುಚ್ಚಿಸಿದರು. 

ಸಿಎಂ ಯೋಗಿ ರಾಜಕೀಯದ ಬಗ್ಗೆ ಮಾತು

ಪ್ರಧಾನಿ ನರೇಂದ್ರ ಮೋದಿ ಗೆದ್ದರೆ ಸಿಎಂ ಯೋಗಿ ಆದಿತ್ಯನಾಥ್ ಅವರ ರಾಜಕೀಯ ಭವಿಷ್ಯ ಅತಂತ್ರವಾಗಲಿದೆ ಎಂಬ ಹೇಳಿಕೆಯನ್ನು ನಾನು ಸಮರ್ಥಿಸಿಕೊಳ್ಳುತ್ತೇನೆ. ಆದ್ರೆ ಬಿಜೆಪಿಯವರು ನನ್ನ ಮಾತನ್ನು ಸುಳ್ಳು ಅಂತ ಹೇಳಬಹುದು.

ಪ್ರಧಾನಿ ಮೋದಿಗೆ ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಮಾಡ್ಕೊಂಡ್ರು ಮನವಿ!

ಈ ಚುನಾವಣೆಯಲ್ಲಿ ಬಹುಮತ ಪಡೆದುಕೊಂಡು ಬಿಜೆಪಿ ಅಧಿಕಾರಕ್ಕೆ ಬಂದರೆ ಮೊದಲು ನರೇಂದ್ರ ಮೋದಿ ಪ್ರಧಾನಿ ಆಗ್ತಾರೆ. ಎರಡು ವರ್ಷಗಳ ನಂತರ ಅಮಿತ್ ಶಾ ಪ್ರಧಾನಿ ಪಟ್ಟಕ್ಕೆ ಏರಲಿದ್ದಾರೆ. ಬಿಜೆಪಿಯ ಮುಂದಿನ ಪಿಎಂ ಅಂತಾನೇ ಬಿಂಬಿತವಾಗುತ್ತಿರುವ ಸಿಎಂ ಯೋಗಿ ಆದಿತ್ಯನಾಥ್  ರಾಜಕೀಯ ಭವಿಷ್ಯವನ್ನ ಬಿಜೆಪಿ ಅಂತ್ಯಗೊಳಿಸಲಿದೆ ಎಂದು ಅರವಿಂದ್ ಕೇಜ್ರಿವಾಲ್ ತಮ್ಮ ಚುನಾವಣಾ ಪ್ರಚಾರದಲ್ಲಿ ಹೇಳಿಕೊಂಡು ಬರುತ್ತಿದ್ದಾರೆ.

ಕ್ಯಾನ್ಸರ್‌ ಆತಂಕದಲ್ಲಿ ದೆಹಲಿ ಸಿಎಂ ಕೇಜ್ರಿವಾಲ್‌, ಜಾಮೀನು ವಿಸ್ತರಣೆ ನಿರಾಕರಿಸಿದ ಸುಪ್ರೀಂ

ಅರವಿಂದ್ ಕೇಜ್ರಿವಾಲ್ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ್ದ ಕೇಂದ್ರ ಗೃಹ ಸಚಿವ ಅಮಿತ್ ಶಾ, ಮುಂದಿನ ಐದು ವರ್ಷ ನರೇಂದ್ರ ಮೋದಿಯವರೇ ಪ್ರಧಾನಿಗಳಾಗಿ ಇರುತ್ತಾರೆ. ಎನ್‌ಡಿಎ ಮೈತ್ರಿ ಕೂಟವೇ ಕೇಂದ್ರದಲ್ಲಿ ಮೂರನೇ ಬಾರಿ ಸರ್ಕಾರ ರಚನೆ ಮಾಡಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ. 

Latest Videos
Follow Us:
Download App:
  • android
  • ios