ಹೇಮಂತ್ ಸೊರೇನ್ ರಾಜೀನಾಮೆ ಕಾರಣ ಅಧಿಕಾರದ ಚುಕ್ಕಾಣಿ ಹಿಡಿದಿರುವ ಚಂಪೈ ಸೊರೇನ್ ನೇತೃತ್ವದ ಜೆಎಂಎಂ-ಕಾಂಗ್ರೆಸ್ ಸರ್ಕಾರ ಇಂದು ವಿಶ್ವಾಸಮತದ ಅಗ್ನಿಪರೀಕ್ಷೆಎದುರಿಸಲಿದೆ.

  • ಹೇಮಂತ್ ಸೊರೇನ್ ರಾಜೀನಾಮೆ ಬಳಿಕ ಸಿಎಂ ಆಗಿರುವ ಚಂಪೈ ಸೊರೇನ್
  • 81 ಸದಸ್ಯ ಬಲದ ಜಾರ್ಖಂಡ್ ವಿಧಾನಸಭೆಯಲ್ಲಿ ಸದ್ಯ 1 ಶಾಸಕ ಸ್ಥಾನ ಖಾಲಿ
  • ಬಹುಮತಕ್ಕೆ 41 ಸ್ಥಾನ ಬೇಕು. ಜೆಎಂಎಂ- ಕಾಂಗ್ರೆಸ್ ಕೂಟದಲ್ಲಿ 46 ಶಾಸಕರು
  • ಸರ್ಕಾರ ರಚನೆ ಹಕ್ಕು ಮಂಡನೆ ವೇಳೆ 43 ಶಾಸಕರ ಪತ್ರ ಮಾತ್ರ ಸಲ್ಲಿಸಿರುವ ಸಿಎಂ ಚಂಪೈ
  • ಇದೀಗ ಮತ್ತೆರಡು ಶಾಸಕರಿಂದ ಸರ್ಕಾರದ ವಿರುದ್ಧ ಬಂಡಾಯ

ರಾಂಚಿ: ಹೇಮಂತ್ ಸೊರೇನ್ ರಾಜೀನಾಮೆ ಕಾರಣ ಅಧಿಕಾರದ ಚುಕ್ಕಾಣಿ ಹಿಡಿದಿರುವ ಚಂಪೈ ಸೊರೇನ್ ನೇತೃತ್ವದ ಜೆಎಂಎಂ-ಕಾಂಗ್ರೆಸ್ ಸರ್ಕಾರ ಸೋಮವಾರ ವಿಶ್ವಾಸಮತದ ಅಗ್ನಿಪರೀಕ್ಷೆಎದುರಿಸಲಿದೆ. ಸರ್ಕಾರಕ್ಕೆ 46 ಶಾಸಕರ ಬೆಂಬಲ ವಿದ್ದರೂ, ಮೈತ್ರಿ ಕೂಟದ ಕೆಲ ಶಾಸಕರು ಬಂಡಾಯ ಎದ್ದಿದ್ದಾರೆ. ಹೀಗಾಗಿ ಇನ್ನಷ್ಟು ಜನರು ಬಂಡಾಯ ಎದ್ದರೆ ಎಂಬ ಭೀತಿ ಸರ್ಕಾರಕ್ಕೆ ಆವರಿಸಿದ್ದು, ವಿಶ್ವಾಸಮತ ಕುತೂಹಲ ಕೆರಳಿಸಿದೆ.

ಚಂಪೈ ಸೊರೇನ್ ಮೊನ್ನೆ ರಾಜ್ಯಪಾಲ ರಿಗೆ 43 ಶಾಸಕರ ಬೆಂಬಲ ಪತ್ರ ಮಾತ್ರ ಸಲ್ಲಿಸಿದ್ದರು. ಮೂವರ ಸಹಿ ಸಂಗ್ರಹ ಸಾಧ್ಯವಾಗಿರಲಿಲ್ಲ. ಈ ಪೈಕಿ ಲಿಂಡಾ ಹೇಂದ್ರೋಂ ಹಾಗೂ ಚಾಮ್ರಾ ಲಿಂಡಾ ಎಂಬ ಇಬ್ಬರು ಶಾಸಕರು ಸರ್ಕಾರದ ಬಗ್ಗೆ ಅತೃಪ್ತಿ ಹೊಂದಿದ್ದಾರೆ. ಹೇಂಬ್ರಂ ಅವರು ಬಹಿರಂಗವಾಗಿಯೇ ಹೇಮಂತ ಸೊರೇನ್ ವಿರುದ್ದ ಭಾನುವಾರ ವಾಗ್ದಾಳಿ ನಡೆಸಿದ್ದರೆ, ಚಾಮ್ರಾ ಅವರು ಯಾರ ಸಂಪರ್ಕಕ್ಕೂ ಸಿಗದೇ ನಾಪತ್ತೆಯಾಗಿದ್ದಾರೆ. ಈ ನಡುವೆ, ಹೈದರಾಬಾದ್ ರೆಸಾರ್ಟಲ್ಲಿರುವ 40 ಜೆಎಂಎಂ-ಕಾಂಗ್ರೆಸ್ ಶಾಸಕರು ರಾಂಚಿಗೆ ಮರಳಿ ವಿಶ್ವಾಸಮತ ದಲ್ಲಿ ಪಾಲ್ಗೊಳ್ಳಲಿದ್ದಾರೆ.

I-N-D-I-A ಒಕ್ಕೂಟಕ್ಕೆ ಶಾಕ್, ಅಕ್ರಮ ವರ್ಗಾವಣೆ ಪ್ರಕರಣದಲ್ಲಿ ಜಾರ್ಖಂಡ್ ಸಿಎಂಗೆ ಇಡಿ ಸಮನ್ಸ್!

ಜೆಎಂಎಂ-ಕಾಂಗ್ರೆಸ್ ಶಾಸಕರನ್ನು ಸೆಳೆದು ಸರ್ಕಾರ ಬೀಳಿಸಲು ಬಿಜೆಪಿ ಯತ್ನಿಸುತ್ತಿದೆ ಎಂಬ ಆರೋಪವಿದೆ. ಹೀಗಾಗಿಯೇ ವಿಶ್ವಾಸಮತ ಯಾಚನೆ ಕುತೂಹಲ ಮೂಡಿಸಿದೆ. 81 ಸದಸ್ಯ ಬಲದ ಜಾರ್ಖಂಡ್ ವಿಧಾನ ಸಭೆಯಲ್ಲಿ 1 ಸೀಟು ಖಾಲಿ ಇದ್ದು, ಹಾಲಿ 80 ಶಾಸಕರಿದ್ದಾರೆ. ಬಹುಮತಕ್ಕೆ 41 ಸೀಟು ಬೇಕು. ಜೆಎಂಎಂ-ಕಾಂಗ್ರೆಸ್ 46 ಹಾಗೂ ಬಿಜೆಪಿ ಮೈತ್ರಿಕೂಟ 29 ಸ್ಥಾನಗಳನ್ನು ಹೊಂದಿವೆ. 5 ಶಾಸಕರು ತಟಸ್ಥರಿದ್ದಾರೆ. ಆದರೆ ಆಡಳಿತ ಕೂಟದ ಇಬ್ಬರು ಶಾಸಕರ ಹೊಯ್ದಾಟ ಸಹಜವಾಗೇ ಸಂಚಲನ ಮೂಡಿಸಿದೆ.

ಇ.ಡಿ. ವಿರುದ್ಧವೇ ಎಸ್ಸಿಎಸ್ಟಿ ಕಾಯ್ದೆ ಅಡಿ ಜಾರ್ಖಂಡ್‌ ನಿರ್ಗಮಿತ ಸಿಎಂ ಹೇಮಂತ್ ಸೊರೇನ್‌ ಕೇಸು