I-N-D-I-A ಒಕ್ಕೂಟಕ್ಕೆ ಶಾಕ್, ಅಕ್ರಮ ವರ್ಗಾವಣೆ ಪ್ರಕರಣದಲ್ಲಿ ಜಾರ್ಖಂಡ್ ಸಿಎಂಗೆ ಇಡಿ ಸಮನ್ಸ್!
ವಿಪಕ್ಷಗಳ ಒಕ್ಕೂಟಕ್ಕೆ ಇದೀಗ ಮೂರನೇ ಸಭೆಗೆ ಸಜ್ಜಾಗುತ್ತಿದೆ. ಇದರ ಬೆನ್ನಲ್ಲೇ ಇಡಿ ಅಧಿಕಾರಿಗಳು ಒಕ್ಕೂಟದ ಪ್ರಮುಖ ಪಕ್ಷ ಹಾಗೂ ಜಾರ್ಖಂಡ್ ಸರ್ಕಾರ ಮುನ್ನಡೆಸುತ್ತಿರುವ ಮುಖ್ಯಮಂತ್ರಿ ಹಿಮಂತ್ ಸೊರೆನ್‌ಗೆ ಸಮನ್ಸ್ ನೀಡಿದ್ದಾರೆ.
ನವದೆಹಲಿ(ಆ.08) ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಮಣಿಸಲು ಒಗ್ಗಟ್ಟಾಗಿರುವ ವಿಪಕ್ಷಗಳು ಈಗಾಗಲೇ ಎರಡು ಸಭೆ ನಡೆಸಿದೆ. ಇದೀಗ ಮೂರನೆ ಸಭೆಗೆ ಸಜ್ಜಾಗಿದೆ. ಇದರ ಬೆನಲ್ಲೇ ಈ ಒಕ್ಕೂಟದ ಪ್ರಮುಖ ಪಕ್ಷ ಜಾರ್ಖಂಡ್ ಮುಕ್ತಿ ಮೋರ್ಚಾಗೆ ಶಾಕ್ ಎದುರಾಗಿದೆ. ಜಾರ್ಖಂಡ್ ಸಿಎಂ ಹಿಮಂತ್ ಸೊರೆನ್‌ಗೆ ಇಡಿ ಅಧಿಕಾರಿಗಳು ಸಮನ್ಸ್ ನೀಡಿದ್ದಾರೆ. ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಸಮನ್ಸ್ ನೀಡಲಾಗಿದೆ. ಅಕ್ರಮ ಗಣಿಕಾರಿಕೆ ಹಾಗೂ ಅದರಲ್ಲಿ ನಡೆದಿರುವ ಅವ್ಯವಹಾರಗಳ ತನಿಖೆ ನಡೆಸುತ್ತಿರುವ ಜಾರಿ ನಿರ್ದೇಶನಾಲಯ ಸಮನ್ಸ್ ನೀಡಿದೆ.
ಮುಖ್ಯಮಂತ್ರಿ ಹಿಮಂತ್ ಸೊರೆನ್‌ಗೆ ಆಗಸ್ಟ್ 14 ರಂದು ಇಡಿ ಕಚೇರಿಗೆ ವಿಚಾರಣೆಗೆ ಹಾಜರಾಗುವಂತೆ ಸಮನ್ಸ್ ನೀಡಲಾಗಿದೆ. ರಾಂಚಿಯ ಇಡಿ ಕಚೇರಿಯಲ್ಲಿ ಸೊರೆನ್ ವಿಚಾರಣೆ ನಡೆಯಲಿದೆ. ಜಾರ್ಖಂಡ್‌ನ ಸಾಹೇಬ್‌ಗಂಜ್ ಜಿಲ್ಲೆಯಲ್ಲಿ ನಡೆಸಿರುವ ಅಕ್ರಮ ಗಣಿಕಾರಿಕೆ ಹಾಗೂ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಹಿಮಂತ್ ಸೊರೆನ್ ಹೇಳಿಕೆ ದಾಖಲಿಸಲು ಸಮನ್ಸ್ ನೀಡಲಾಗಿದೆ.
ಜಾರ್ಖಂಡ್ ಆರೋಗ್ಯ ಸಚಿವನ ಅನಾರೋಗ್ಯಕಾರಿ ವರ್ತನೆ: ಅಶ್ಲೀಲ ವಿಡಿಯೋ ಚಾಟ್ ವೈರಲ್
ವಿಪಕ್ಷಗಳ ಮೈತ್ರಿ ಒಕ್ಕೂಟದಲ್ಲಿ ಹಿಮಂತ್ ಸೊರೆನ್ ನೇತೃತ್ವದ ಜಾರ್ಖಂಡ್ ಮುಕ್ತಿ ಮೋರ್ಚಾ ಪ್ರಮುಖ ಪಕ್ಷವಾಗಿದೆ. ಜಾರ್ಖಂಡ್‌ನಲ್ಲಿ ಸಂಪೂರ್ಣ ಪ್ರಾಬಲ್ಯ ಸಾಧಿಸಿರುವ ಹಿಮಂತ್ ಸೊರೆನ್ ನೆರವು ಇಂಡಿಯಾ ಒಕ್ಕೂಟಕ್ಕೆ ಅಗತ್ಯಗತ್ಯ. ಒಕ್ಕೂಟದ ಸಭೆಯಲ್ಲಿ ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ರಾಹುಲ್ ಗಾಂಧಿ, ಬಿಜಾರ ಮುಖ್ಯಮಂತ್ರಿ ನಿತೀಶ್ ಕುಮಾರ್, ಉಪಮುಖ್ಯಮಂತ್ರಿ ತೇಜಸ್ವಿ ಯಾದವ್, ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, ಜಾರ್ಖಂಡ್ ಮುಖ್ಯಮಂತ್ರಿ ಹೇಮಂತ್ ಸೊರೆನ್, ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್, ಮಹಾರಾಷ್ಟ್ರ ಮಾಜಿ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಮತ್ತು ಎನ್‌ಸಿಪಿ ಮುಖ್ಯಸ್ಥ ಶರದ್ ಪವಾರ್ ಸೇರಿದಂತೆ ಹಲವು ನಾಯಕರು ಭಾಗಿಯಾಗಿದ್ದರು. ಇದೀಗ ಸೊರೆನ್ ಇಡಿ ಅಡಕತ್ತರಿಯಲ್ಲಿ ಸಿಲುಕಿದ್ದಾರೆ. ಇದು ವಿಪಕ್ಷಗಳ ಮೂರನೇ ಸಭೆಗೆ ಹಿನ್ನಡೆ ತರುವ ಸಾಧ್ಯತೆ ಇದೆ.
"ಪ್ರಶ್ನೆ ಯಾಕೆ ಮಾಡ್ತೀರ, ನನ್ನನ್ನು ಬಂಧಿಸಿ": ಜಾರ್ಖಂಡ್ ಮುಖ್ಯಮಂತ್ರಿ ಹೇಮಂತ್ ಸೊರೇನ್
ಪಾಟ್ನಾದಲ್ಲಿ ನಡೆದ ಮೊದಲ ವಿಪಕ್ಷಗಳ ಸಭೆಯಲ್ಲಿ ಹಿಮಂತ್ ಸೊರೆನ್ ಪಾಲ್ಗೊಂಡು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದರು. ಇನ್ನು ಬೆಂಗಳೂರಿನಲ್ಲಿ ನಡೆದ 2ನೇ ಸಭೆಯಲ್ಲೂ ಹಿಮಂತ್ ಸೊರೆನ್ ಪಾಲ್ಗೊಂಡಿದ್ದರು. ಇಂಡಿಯಾ ಒಕ್ಕೂಟದಲ್ಲಿ ಜಾರ್ಖಂಡ್ ಮುಕ್ತಿ ಮೋರ್ಚಾ ಪ್ರಮುಖ ಪಕ್ಷವಾಗಿದೆ. ಇದೀಗ ಹಿಮಂತ್ ಸೊರೆನ್‌ಗಂ ಸಂಕಷ್ಟ ಎದುರಾಗಿದೆ. ಈ ಹಿಂದೆ ವಿಚಾರಣೆ ನೋಟಿಸ್ ನೀಡಿದ್ದ ಬಳಿಕ ಆಕ್ರೋಶ ಹೊರಹಾಕಿದ್ದ ಸೊರೆನ್, ಈ ರೀತಿ ವಿಚಾರಣೆ ನಡೆಸುವುದಕ್ಕಿಂತ ನೇರವಾಗಿ ಬಂಧಿಸಿ ಎಂದು ಸವಾಲು ಹಾಕಿದ್ದರು.
ಹಲವು ತಿಂಗಳಿನಿಂದ ಜಾರ್ಖಂಡ್ ಅಕ್ರಮ ಗಣಿಕಾರಿಕೆ ಕುರಿತು ತನಿಖೆ ನಡೆಸುತ್ತಿರುವ ಇಡಿ ಅಧಿಕಾರಿಗಳು ಹಲವು ರಾಜಕಾರಣಿಗಳು, ಅಧಿಕಾರಿಗಳ ವಿಚಾರಣೆ ನಡೆಸಿದ್ದಾರೆ.