ಕೇಂದ್ರದ ವಿರುದ್ಧ ರಾಹುಲ್ ಗಾಂಧಿ ಸತತ ವಾಗ್ದಾಳಿ ಭಾರತವನ್ನು ಇಬ್ಬಾಗ ಮಾಡಿದ ಮೋದಿ ಸರ್ಕಾರ ಸಾಮ್ರಾಜ್ಯವಾಗಿ ಭಾರತ ಆಳಲು ಸಾಧ್ಯವಿಲ್ಲ
ನವದೆಹಲಿ(ಫೆ.02): ಪ್ರಧಾನಿ ನರೇಂದ್ರ ಮೋದಿ(PM Narendra Modi) ನೇತೃತ್ವದ ಕೇಂದ್ರ ಸರ್ಕಾರ ಶ್ರೀಮಂತರ ಸರ್ಕಾರವಾಗಿದೆ. ಹೀಗಾಗಿ ಶ್ರೀಮಂತರು(Rich) ಹಾಗೂ ಬಡವರಿಗಾಗಿ(Poor) ಭಾರತವನ್ನು ಇಬ್ಬಾಗ ಮಾಡಲಾಗಿದೆ. ಎರಡು ವರ್ಗದ ಜನರಿಗಾಗಿ ಭಾರತವನ್ನು ಒಡೆಯಲಾಗಿದೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ(Rahul Gandhi) ಕೇಂದ್ರ ಸರ್ಕಾರದ ವಿರುದ್ದ ವಾಗ್ದಾಳಿ ನಡೆಸಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಹಾಗೂ ಕೇಂದ್ರ ಸರ್ಕಾರದ ವಿರುದ್ಧ ಸತತ ವಾಗ್ದಾಳಿ ನಡೆಸಿದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಸಂಸತ್ತಿನಲ್ಲಿ(Rahul Gandhi in Parliament) ಭಾರಿ ಸದ್ದು ಮಾಡಿದ್ದಾರೆ. ರಾಹುಲ್ ಮಾತಿಗೆ ಭಾರಿ ವಿರೋಧ ಖಂಡನೆಗಳು ವ್ಯಕ್ತವಾಗುತ್ತಿದೆ. ಶ್ರೀಮಂತರಿಗಾಗಿ ದೇಶವನ್ನು ಸೃಷ್ಟಿಸಿ ಅವರ ಯೋಗಕ್ಷೇಮ ನೋಡಿಕೊಳ್ಳಲಾಗುತ್ತಿದೆ. ಇತ್ತ ಬಡವರು ಮತ್ತಷ್ಟು ಕಡು ಬಡವರಾಗಿದ್ದಾರೆ. ಉದ್ಯೋಗ ಕಳೆದುಕೊಳ್ಳುತ್ತಿದ್ದಾರೆ. ಎರಡು ಭಾರತವನ್ನು ಸೃಷ್ಟಿಸಿದ ಮೋದಿ ಸರ್ಕಾರ ಭಾರತದ ಬಹುಪಾಲು ಜನರನ್ನು ಬಡವರನ್ನಾಗಿಸಿದೆ ಎಂದು ರಾಹುಲ್ ಗಾಂಧಿ ಹೇಳಿದ್ದಾರೆ.
ಇದೇ ಕಾರಣಕ್ಕೆ ರಾಷ್ಟ್ರಪತಿ ಅಧ್ಯಕ್ಷೀಯ ಭಾಷಣದಲ್ಲಿ ಬಡವರ ಕುರಿತು, ಉದ್ಯೋಗ ಕಳೆದುಕೊಂಡವರ ಕುರಿತು ಮಾತನಾಡಿಲ್ಲ. ಹೀಗಾಗಿ ರಾಷ್ಟಪತಿ ಭಾಷಣ ಅಧಿಕಾರಶಾಹಿ ವಿಚಾರಧಾರೆಯನ್ನು ಹೊಂದಿತ್ತೆ ಹೊರತು ನೈಜ ಕಾಳಜಿ ಕಾಣಲಿಲ್ಲ ಎಂದು ರಾಹುಲ್ ಗಾಂಧಿ ಹೇಳಿದ್ದಾರೆ. ಕಳೆದ 50 ವರ್ಷಗಳಲ್ಲಿ ಭಾರತ ಅತೀ ಹೆಚ್ಚು ನಿರುದ್ಯೋಗ ಸಮಸ್ಯೆ ಎದುರಿಸುತ್ತಿದೆ. ಇವರ ಕುರಿತು ಯಾರೂ ಚಕಾರವೆತ್ತುತ್ತಿಲ್ಲ. ಕಾರಣ ಇದು ಇಬ್ಬಾಗ ಮಾಡಿದ ಬಡವರ ಭಾರತ. ಮೋದಿ ಸರ್ಕಾರ ಕೇವಲ ಶ್ರೀಮಂತರ ಭಾರತ ಹಾಗೂ ಅವರ ಕುರಿತು ಮಾತನಾಡುತ್ತದೆ ಎಂದು ರಾಹುಲ್ ಗಾಂಧಿ ಹೇಳಿದ್ದಾರೆ.
Rahul Gandhi In Parliament : ರಾಹುಲ್ ಗಾಂಧಿ ಮಾತಿಗೆ ಸಾಕ್ಷಿ ಸಮೇತ ಉತ್ತರ ಕೊಟ್ಟ ಜೈಶಂಕರ್!
ಯುಪಿಎ ಅವಧಿಯಲ್ಲಿ 27 ಕೋಟಿ ಮಂದಿಯ್ನು ಬಡತನ ರೇಖೆಗಿಂತ ಮೇಲತ್ತಲಾಗಿತ್ತು. ಆದರೆ ಮೋದಿ ಸರ್ಕಾರ 23 ಕೋಟಿ ಮಂದಿಯನ್ನು ಕಡುಬಡತನಕ್ಕೆ ತಳ್ಳಿದೆ. ವರ್ಷದಿಂದ ವರ್ಷಕ್ಕೆ ನಿರೋದ್ಯೋಗಿಗಳ ಸಂಖ್ಯೆ ಹೆಚ್ಚುತ್ತಿದೆ. 2021ರಲ್ಲಿ 3 ಕೋಟಿ ಮಂದಿ ನಿರುದ್ಯೋಗಿಗಳಾಗಿದ್ದಾರೆ. ಇತರ ಎಲ್ಲಾ ದೇಶಗಳು ಈ ಮಟ್ಟಿನ ನಿರುದ್ಯೋಗ ಸಮಸ್ಯೆ ಎದುರಿಸುತ್ತಿಲ್ಲ. ಆದರೆ ಇದ್ಯಾವುದನ್ನು ಮೋದಿ ಸರ್ಕಾರ ಕಣ್ಣೆತ್ತಿ ನೋಡುತ್ತಿಲ್ಲ ಎಂದು ರಾಹುಲ್ ಗಾಂಧಿ ಕೇಂದ್ರದ ವಿರುದ್ದ ವಾಗ್ದಾಳಿ ನಡೆಸಿದ್ದಾರೆ.
ಬಡವರು ಶ್ರೀಮಂತರ ನಡುವಿನ ಅಂತರ ಬೆಳೆಯುತ್ತಲೇ ಇದೆ. ಕೇಂದ್ರದ ಸರ್ಕಾರದಿಂದ ಶ್ರೀಮಂತರು ಮತ್ತಷ್ಟು ಶ್ರೀಮಂತರಾಗಿದ್ದಾರೆ. ಬಡವರು ಕಡುಬಡನತಕ್ಕೆ ಗುರಿಯಾಗಿದ್ದಾರೆ. ಇದು ಶ್ರೀಮಂತರ ಒಲೈಕೆ ಸರ್ಕಾರದಿಂದ ಈ ಅಂತರ ಸೃಷ್ಟಿಯಾಗಿದೆ ಎಂದು ರಾಹುಲ್ ಗಾಂಧಿ ಸಂಸತ್ತಿನಲ್ಲಿ ಹೇಳಿದ್ದಾರೆ.
Rahul Gandhi ನ್ಯಾಯಾಂಗ, ಆಯೋಗ, ಪೆಗಾಸಸ್ ಬಳಸಿ ರಾಜ್ಯಗಳ ಧ್ವನಿ ಹತ್ತಿಕ್ಕುತ್ತಿದೆ ಸರ್ಕಾರ, ರಾಹುಲ್ ಮಾತಿಗೆ ಖಂಡನೆ!
ಭಾರತ ಹಲವು ರಾಜ್ಯಗಳ ಒಕ್ಕೂಟವಾಗಿದೆ. ರಾಜ ಹಾಗೂ ತನ್ನ ಸಾಮ್ರಾಜ್ಯವಾಗಿ ಭಾರತವನ್ನು ಆಳಲು ಸಾಧ್ಯವಿಲ್ಲ. ರಾಜ್ಯಗಳ ಜೊತೆ ಮಾತನಾಡದೆ, ರಾಜ್ಯಗಳನ್ನು ಗಣನೆಗೆ ತೆಗೆದುಕೊಳ್ಳದೆ ಏಕಪಕ್ಷೀಯವಾಗಿ, ರಾಜನಂತೆ ಆಳ್ವಿಕೆ ನಡೆಸುತ್ತಿದೆ. 1947ರಲ್ಲಿ ಕಾಂಗ್ರೆಸ್ ಸರ್ಕಾರ ರಾಜರ ಆಳ್ವಿಕೆ ಅಂತ್ಯಗೊಳಿಸಿದೆ. ಆದರೆ ಇದೀಗ ಅದೇ ಅಳ್ವಿಕೆ ಮತ್ತೆ ಬಂದಿದೆ. ಆದರೆ ಈ ರಾಜ ಯಾರ ಮಾತನ್ನು ಕೇಳುತ್ತಿಲ್ಲ ಎಂದು ರಾಹುಲ್ ಗಾಂಧಿ ಹೇಳಿದ್ದಾರೆ.
ಭಾರತ ಹಲವು ರಾಜ್ಯಗಳು ಹಲವು ಸಂಸ್ಕ್ರತಿ, ಹಲವು ಭಾಷೆಗಳ ದೇಶ. ಆದರೆ ಕೇಂದ್ರ ಇದಲ್ಲವನ್ನು ನಾಶಮಾಡುತ್ತಿದೆ. ಕೇಂದ್ರದ ರಾಜರ ಆಳ್ವಿಕೆಯನ್ನು ರಾಜ್ಯಗಳ ಮೇಲೆ ಹೇರುತ್ತಿದೆ ಎಂದು ರಾಹುಲ್ ಗಾಂಧಿ ಹೇಳಿದ್ದಾರೆ.
ಇದೇ ವೇಳೆ ಚೀನಾ ಹಾಗೂ ಪಾಕಿಸ್ತಾನವನ್ನು ಪ್ರತ್ಯೇಕವಾಗಿಡುವುದು ಭಾರತದ ಕಾರ್ಯತಂತ್ರದ ಗುರಿಯಾಗಬೇಕು. ಆದರೆ ಕೇಂದ್ರ ಜೊತೆಯಾಗಿ ಸೇರಿಸಿ ಭಾರತವನ್ನು ಇಕ್ಕಟ್ಟಿಗೆ ಸಿಲುಕಿಸಿದೆ. ಭಾರತ ತನ್ನ ನೆರೆಯ ರಾಷ್ಟ್ರಗಳ ಜೊತೆ ಸ್ನೇಹದ ಜೊತೆ ಶತ್ರುತ್ವ ಬೆಳೆಸಿದೆ. ಇದರಿಂದ ಭಾರತ ಇದೀಗ ಒಬ್ಬಟ್ಟಿಂಯಾಗಿದೆ ಎಂದಿದ್ದಾರೆ.
