ಭೋಪಾಲ್(ಜು. 24)   ಸೆಲ್ಫಿ ತೆಗೆದುಕೊಳ್ಳಬಬೇಕು ಎಂದು ಇಬ್ಬರು ಹುಡುಗಿಯರು ನದಿಯ ಮಧ್ಯಭಾಗದ ಬಂಡೆಯ ಮೇಲೆ ಹೋಗಿ ಪೋಸ್ ನೀಡುವ ತಯಾರಿ ಮಾಡಿದ್ದಾರೆ. ನದಿಯ ನೀರಿನ ಹರಿವು ಹೆಚ್ಚಾಗಿದ್ದು ಸಿಕ್ಕಿಹಾಕಿಕೊಂಡಿದ್ದಾರೆ.

ಮಧ್ಯಪ್ರದೇಶ ಚಿಂದ್ವಾರಾ ಜಿಲ್ಲೆಯಲ್ಲಿ ಘಟನೆ ನಡೆದಿದ್ದು ಸ್ಥಳೀಯರು ಮತ್ತು ಪೊಲೀಸರು ಸೇರಿ ಹುಡುಗಿಯರನ್ನು ಪ್ರಾಣಾಪಾಯದಿಂದ ಪಾರು ಮಾಡಿದ್ದಾರೆ.

ಜುನಾರ್ಡೋ ಪಟ್ಟಣದ ಆರು ಜನ ಹುಡುಗಿಯರು ಚಿಂದ್ವಾರಾದಿಂದ ಐವತ್ತು ಕಿಮೀ ದೂರದ ಪ್ರದೇಶಕ್ಕೆ ತೆರಳಿದ್ದರು.  ಪಿಕ್ ನಿಕ್ ಗೆಂದು ಪೆಂಚ್ ನದಿಯ ಬಳಿ ಹೋಗಿದ್ದರು.

ನಟಿ ತ್ರಿಷಾ ಸೆಲ್ಫಿಗೆ ಬಂದ ಕಮೆಂಟ್ ಅಯ್ಯಪ್ಪಾ!

12  ನೇ ತರಗತಿ ಓದುತ್ತಿರುವ ಮೇಘಾ ಜ್ವಾರೆ ಮತ್ತು ವಂದನಾ ತ್ರಿಪಾಠಿ ಸೆಲ್ಫಿ ಕ್ಲಿಕ್ಕಿಸಿಕೊಳ್ಳಬೇಕು ಎಂದು ಹರಿಯುವ ನದಿಯ ಮಧ್ಯಭಾಗಕ್ಕೆ ತೆರಳಿದ್ದಾರೆ.  ಇದ್ದಕ್ಕಿದಂತೆ ನದಿಯಲ್ಲಿ ನೀರಿನ ಹರಿವು ಹೆಚ್ಚಾಗಿದೆ.  ಇದನ್ನು ಕಂಡು ಹೌಹಾರಿದ ಉಳಿದ ಗೆಳತಿಯರು ತಕ್ಷಣ ಪೊಲೀಸರಿಗೆ ಸುದ್ದಿ ಮುಟ್ಟಿಸಿದ್ದಾರೆ. 

ಡಿವೈಎಸ್‌ಪಿ ಅಜಯ್ ವಾಗ್ಮೋರೆ ನೇತೃತ್ವದ ಹನ್ನೆರಡು ಜನ ಪೊಲೀಸರ ತಂಡ ರಕ್ಷಣಾ ಕಾರ್ಯಕ್ಕೆ ಬಂದಿದೆ.  ಸ್ಥಳೀಯರ ಸಹಕಾರದೊಂದಿಗೆ ಯುವತಿಯರ ರಕ್ಷಣೆ ಮಾಡಲಾಗಿದ್ದು ಸೋಶೀಯಲ್ ಮೀಡಿಯಾದಲ್ಲಿ ವಿಡಿಯೋ ಹರಿದಾಡುತ್ತಿದೆ.