Vogue India ಮಾಸಿಕದ ಮುಖಪುಟದಲ್ಲಿ ಕೇರಳದ ಆರೋಗ್ಯ ಸಚಿವೆ ಕೆಕೆ ಶೈಲಜಾ ರಾರಾಜಿಸಿದ್ದಾರೆ.

ನವೆಂಬರ್‌ ತಿಂಗಳಲ್ಲಿ ತನ್ನ ಮುಖಪುಟದಲ್ಲಿ ಕೇರಳದ ಆರೋಗ್ಯ ಸಚಿವೆ ಕೆಕೆ ಶೈಲಜಾ ಅವರ ಮುಖಪುಟವನ್ನು ಪ್ರಕಟಿಸಿರುವ Vogue India ಮಾಸಿಕ ಈ ಮೂಲಕ ಸಚಿವೆಗೆ ಗೌರವ ತಿಳಿಸಿದೆ. Vogue ವರ್ಷದ ಮಹಿಳೆ 2020ರಲ್ಲಿ ಕೆಕೆ ಶೈಲಜಾ ಅವರನ್ನು ಗುರುತಿಸಲಾಗಿದೆ.

ಕೊರೋನಾ ವೈರಸ್ ಸಂದರ್ಭ ಕೆಕೆ ಶೈಲಜಾ ತಾವು ತೆಗೆದುಕೊಂಡಿದ್ದ ನಿರ್ಧಾರಗಳಿಂದ ಅಂತಾರಾಷ್ಟ್ರ ಮಟ್ಟದಲ್ಲಿ ಗುರುತಿಸಲ್ಪಟ್ಟಿದ್ದರು. ಇದೀಗ Vogue India ಮಾಸಿಕ ನೋಡಿದ ನೆಟ್ಟಿಗರು ಈ ಕ್ಷಣವನ್ನು ಸೆಲೆಬ್ರೇಟ್ ಮಾಡಿದ್ದಾರೆ.

ಸಾಂಕ್ರಾಮಿಕವಲ್ಲದ ರೋಗ ನಿಯಂತ್ರಣ: ಕೇರಳಕ್ಕೆ ವಿಶ್ವಸಂಸ್ಥೆ ಪ್ರಶಸ್ತಿ

ಬಹಳಷ್ಟು ಜನರು ನಾನು ಇದನ್ನು ಕೊಳ್ಳುತ್ತೇನೆ ಎಂದೂ ಬಹಳಷ್ಟು ಜನರು ಕಮೆಂಟ್ ಮಾಡಿದ್ದಾರೆ. ಪತ್ರಿಕೆಯ ಟ್ವಿಟರ್ ಖಾತೆಯ ಪ್ರೊಫೈಲ್‌ಗೆ ಶೈಲಜಾ ಫೋಟೋ ಹಾಕಲಾಗಿದೆ.

Scroll to load tweet…

ಕೊರೋನಾ ಸಂದರ್ಭ ಕೇರಳದ ಸಚಿವೆಯ ಶ್ರಮವನ್ನು ಜಗತ್ತೇ ಗುರುತಿಸಿತ್ತು. ಸೆಪ್ಟೆಂಬರ್‌ನಲ್ಲಿ ಯುಕೆ ಪ್ರಾಸ್ಪೆಕ್ಟ್ ಮ್ಯಾಗಝಿನ್ 2020ರ ಜಗತ್ತಿನ ಟಾಪ್ ಚಿಂತಕರ ಲಿಸ್ಟ್‌ನಲ್ಲಿ ಕೆಕೆ ಶೈಲಜಾ ಅವರ ಹೆಸರನ್ನು ಟಾಪ್‌ನಲ್ಲಿಟ್ಟು ಗೌರವಿಸಿತ್ತು. ಜೂನ್‌ನಲ್ಲಿ ವಿಶ್ವಸಂಸ್ಥೆ ಸಚಿವೆಯನ್ನು ಇವೆಂಟ್‌ಗೆ ಆಹ್ವಾನಿಸಿತ್ತು. ಕೊರೋನಾ ಸಂದರ್ಭ ತಮ್ಮ ಜೀವವನ್ನು ಅಪಾಯಕ್ಕೊಡ್ಡಿ ಕೆಲಸ ಮಾಡಿದವರನ್ನು ಗೌರವಿಸಲಾಗಿತ್ತು.