Asianet Suvarna News Asianet Suvarna News

ಟೀವಿ ಚರ್ಚೆಗಳಿಂದಲೇ ಹೆಚ್ಚು ಮಾಲಿನ್ಯ: ಸುಪ್ರೀಂ ಕಿಡಿ!

* ಮಾಲಿನ್ಯ ವಿಚಾರದ ಚರ್ಚೆಗೆ ತೀವ್ರ ಆಕ್ಷೇಪ

* ಟೀವಿ ಚರ್ಚೆಗಳಿಂದಲೇ ಹೆಚ್ಚು ಮಾಲಿನ್ಯ: ಸುಪ್ರೀಂ ಕಿಡಿ

TV News Debates Causing More Pollution Than Anybody Says Supreme Court pod
Author
Bangalore, First Published Nov 18, 2021, 7:40 AM IST

ನವದೆಹಲಿ(ನ.18): ಇತರೆ ಯಾವುದೇ ಮಾಲಿನ್ಯಕ್ಕಿಂತ ಟೀವಿ ಸುದ್ದಿ ವಾಹಿನಿಗಳಲ್ಲಿ (TV Discussion) ನಡೆಯುವ ಚರ್ಚೆಗಳಿಂದಲೇ ಹೆಚ್ಚು ಮಾಲಿನ್ಯ (Pollution) ಉಂಟಾಗುತ್ತಿದೆ ಎಂದು ಸುಪ್ರೀಂಕೋರ್ಟ್‌ (Supreme Court) ತೀವ್ರ ಆಕ್ಷೇಪ ವ್ಯಕ್ತಪಡಿಸಿದ ಪ್ರಕರಣ ಬುಧವಾರ ನಡೆಯಿತು.

‘ಮಾಲಿನ್ಯದ ವಿಷಯದಲ್ಲಿ ನಾನು ನ್ಯಾಯಾಲಯದ ದಿಕ್ಕುತಪ್ಪಿಸಿದ್ದೇನೆ ಎಂದು ಕೆಲ ಸುದ್ದಿ ವಾಹಿನಿಗಳು ಚರ್ಚೆ ನಡೆಸಿವೆ’ ಎಂದು ಕೇಂದ್ರ ಸರ್ಕಾರದ ಪರವಾಗಿ ಹಾಜರಾಗಿದ್ದ ಸಾಲಿಸಿಟರ್‌ ಜನರಲ್‌ ತುಷಾರ್‌ ಮೆಹ್ತಾ (Tushar Mehta) ಬುಧವಾರ ನ್ಯಾಯಪೀಠದ ಎದುರು ಬೇಸರ ವ್ಯಕ್ತಪಡಿಸಿದರು.

ಈ ಬಗ್ಗೆ ಪ್ರತಿಕ್ರಿಯಿಸಿದ ನ್ಯಾಯಪೀಠ, ಸುದ್ದಿ ವಾಹಿನಿಗಳನ್ನು ಉದ್ದೇಶಿಸಿ ‘ನೀವು ಯಾವುದಾದರೊಂದು ವಿಷಯವನ್ನು ಬಳಸಲು ಇಚ್ಛಿಸುತ್ತೀರಿ, ಅದನ್ನು ನಾವು ಗಮನಿಸುವಂತೆ ಮಾಡುತ್ತೀರಿ, ಬಳಿಕ ಅದನ್ನು ವಿವಾದವನ್ನಾಗಿ ಪರಿವರ್ತಿಸುತ್ತೀರಿ. ಕೊನೆಗೆ ಆರೋಪ ಮತ್ತು ಪ್ರತ್ಯಾರೋಪಗಳು ಮಾತ್ರವೇ ಉಳಿದುಕೊಳ್ಳುತ್ತದೆ. ಟೀವಿ ಚರ್ಚೆಗಳು ಇತರೆ ಯಾವುದೇ ವಿಷಯಕ್ಕಿಂತ ಹೆಚ್ಚಿನ ಮಾಲಿನ್ಯ ಉಂಟು ಮಾಡುತ್ತಿದೆ. ಏನು ವಿಷಯ? ಏನಾಗುತ್ತಿದೆ ಎಂಬ ಅರಿವೇ ಅವರಿಗಿರುವುದಿಲ್ಲ’ ಎಂದು ಕಿಡಿಕಾರಿತು.

‘ಹೇಳಿಕೆಗಳನ್ನು ಸಮಯ, ಸನ್ನಿವೇಶ ಮೀರಿ ಪರಿಗಣಿಸುತ್ತೀರಿ. ಪ್ರತಿಯೊಬ್ಬರಿಗೂ ಅವರದ್ದೇ ಆದ ಹಿತಾಸಕ್ತಿಗಳಿವೆ. ಈ (ತುಷಾರ್‌ ಮೆಹ್ತಾ) ವಿಷಯದಲ್ಲಿ ನಾವು ಅಸಹಾಯಕರು. ನಾವು ಅವರನ್ನು (ಚಾನೆಲ್‌ಗಳನ್ನು) ನಿಯಂತ್ರಿಸಲು ಸಾಧ್ಯವಾಗದು’ ಎಂದು ನ್ಯಾಯಪೀಠ ತೀವ್ರ ಅಸಮಾಧಾನ ವ್ಯಕ್ತಪಡಿಸಿತು.

ಅಲ್ಲದೆ, ‘ಸುದ್ದಿವಾಹಿನಿಗಳಿಂದ ನಾವು ದಿಕ್ಕು ತಪ್ಪಿಲ್ಲ. ನೀವು ಸಾರ್ವಜನಿಕ ಕಚೇರಿಯಲ್ಲಿ ಇದ್ದ ಮೇಲೆ ಇಂಥದ್ದೆಲ್ಲಾ ಸಹಜ. ನಮ್ಮ ಆತ್ಮಸಾಕ್ಷಿ ಸ್ಪಷ್ಟವಾಗಿದ್ದರೆ ಸಾಕು. ನಾವು ಸಮಾಜದ ಒಳಿತಿಗಾಗಿ ಕೆಲಸ ಮಾಡಬೇಕು’’ ಎಂದು ಮೆಹ್ತಾ ಅವರನ್ನು ಸಮಾಧಾನ ಪಡಿಸಿತು.

6 ಉಷ್ಣ ವಿದ್ಯುತ್ ಸ್ಥಾವರ ಬಂದ್, ರಾಷ್ಟ್ರ ರಾಜಧಾನಿಯಲ್ಲಿ ಮಿನಿ ಲಾಕ್‌ಡೌನ್!

 

ರಾಷ್ಟ್ರ ರಾಜಧಾನಿ ದೆಹಲಿ ಮತ್ತು ಅಕ್ಕ ಪಕ್ಕದ ರಾಜ್ಯಗಳಲ್ಲಿ  (Delhi-NCR) ವಾಯು ಗುಣಮಟ್ಟ ತೀರಾ ಕಳಪೆಯಾಗಿದ್ದು, ಜನರು ಉಸಿರಾಡಲೂ ಪರದಾಡುವಂತಾಗಿದೆ. ಈ ಹಿನ್ನೆಲೆಯಲ್ಲಿ ವಾಯು ನಿರ್ವಹಣಾ ಆಯೋಗವು (CAQM) ಮಂಗಳವಾರದಿಂದ ಮುಂದಿನ ಸೂಚನೆ ಬರುವವರೆಗೂ ಶಾಲಾ-ಕಾಲೇಜುಗಳು (School and Colleges) ಸೇರಿದಂತೆ ಎಲ್ಲಾ ಶಿಕ್ಷಣ ಸಂಸ್ಥೆಗಳನ್ನು ಮುಚ್ಚುವಂತೆ ನಿರ್ದೇಶನ ನೀಡಿದೆ. ಕಳಪೆ ವಾಯು ಮಾಲಿನ್ಯದಿಂದ ಪಾರಾಗಲು ದೆಹಲಿ-ಎನ್‌ಸಿಆರ್‌ನ (Delhi-National Capital Region)  ಎಲ್ಲಾ ನಿರ್ಮಾಣ ಚಟುವಟಿಕೆಗಳನ್ನೂ ಸ್ಥಗಿತಗೊಳಿಸುವಂತೆ ಹಾಗೂ ಮನೆಯಿಂದಲೇ ಕೆಲಸ ಮಾಡುವಂತೆ ಆದೇಶ ಹೊರಡಿಸಿದೆ. ನವೆಂಬರ್‌ 21 ವರೆಗೆ ಸರ್ಕಾರಿ ಕಚೇರಿಗಳಲ್ಲಿ 50 ಪ್ರತಿಶತ ಸಿಬ್ಬಂದಿ ಮಾತ್ರ ಕೆಲಸ ಮಾಡಬೇಕಾಗಿ ಹೇಳಿದೆ. ದೆಹಲಿ ವಾಯುಮಾಲಿನ್ಯ ಹೆಚ್ಚಳವಾದ ಹಿನ್ನೆಲೆಯಲ್ಲಿ ನಿನ್ನೆ ನಾಲ್ಕು ರಾಜ್ಯಗಳಿಂದ ಸುಪ್ರೀಂ ಕೋರ್ಟ್‌ಗೆ (Supreme Court) ವರದಿ ಸಲ್ಲಿಸಲಾಗಿತ್ತು. ಈ ವರದಿಯ ವಿಚಾರಣೆ ಇಂದು (ಬುಧವಾರ ನ.17) ಸುಪ್ರೀಂ ಕೋರ್ಟ್ ನಲ್ಲಿ ನಡೆಯಲಿದೆ. ಮಾಲಿನ್ಯ ನಿಯಂತ್ರಣ ಕುರಿತು ಸುಪ್ರೀಂ ಕೋರ್ಟ್‌ನಿಂದ ಇಂದು ತೀರ್ಮಾನ ಹೊರಬೀಳುವ ಸಾಧ್ಯತೆ ಇದೆ.

ದೆಹಲಿ ಪ್ರವೇಶಕ್ಕೆ ಟ್ರಕ್‌ಗಳಿಗೆ ನಿಷೇಧ!

ಅಗತ್ಯ ಸಾಮಗ್ರಿಗಳನ್ನು ಸಾಗಿಸುವ ಟ್ರಕ್‌ಗಳನ್ನು (Truck) ಹೊರತುಪಡಿಸಿ, ಇತರೆ ಟ್ರಕ್‌ ಗಳನ್ನು ನವೆಂಬರ್ 21 ರವರೆಗೆ ದೆಹಲಿಗೆ ಪ್ರವೇಶಿಸಲು ಅನುಮತಿಸಲಾಗುವುದಿಲ್ಲ ಮತ್ತು ಷರತ್ತುಗಳು ಅನ್ವಯವಾಗಲಿದವೆ. ಸದ್ಯಕ್ಕಿರುವ ಈ ನಿರ್ಬಂಧವನ್ನು ವಿಸ್ತರಿಸ ಸಾಧ್ಯತೆಯೂ ಇದೆ, ಎಂದು ಆಯೋಗ ಹೇಳಿದೆ. CAQM ನಿರ್ವಹಣೆಯಲ್ಲಿರು ಐದು ರಾಜ್ಯಗಳಾದ ದೆಹಲಿ, ಉತ್ತರ ಪ್ರದೇಶ , ಪಂಜಾಬ್, ಹರಿಯಾಣ ಮತ್ತು ರಾಜಸ್ಥಾನಗಳಿಗೆ ನವೆಂಬರ್ 21 ರವರೆಗೆ ಎನ್‌ಸಿಆರ್‌ನಲ್ಲಿ ಬರುವ ಎಲ್ಲಾ ಖಾಸಗಿ ಸಂಸ್ಥೆಗಳಲ್ಲಿ 50 ಪ್ರತಿಶತ ಸಿಬ್ಬಂದಿಗೆ ಮನೆಯಿಂದಲೇ ಕೆಲಸ ಮಾಡಲು ಸೂಚಿಸಿದೆ.

ನಿರ್ಮಾಣ ಕಾರ್ಯಗಳು ಸ್ಥಗಿತ! 

ಅಲ್ಲಿಯವರೆಗೆ ರೈಲ್ವೆ, ಮೆಟ್ರೋ, ವಿಮಾನ ನಿಲ್ದಾಣ, ಬಸ್ ಟರ್ಮಿನಲ್‌ಗಳು ಮತ್ತು ರಕ್ಷಣಾ ಸಂಬಂಧಿತ ಯೋಜನೆಗಳಿಗೆ ಸಂಬಂಧಿಸಿದ ಕೆಲಸಗಳನ್ನು ಹೊರತುಪಡಿಸಿ, ಎಲ್ಲಾ ನಿರ್ಮಾಣಗಳನ್ನು ಸ್ಥಗಿತಗೊಳಿಸಲಾಗುವುದು. ದೆಹಲಿಯ 300 ಕಿಮೀ ವ್ಯಾಪ್ತಿಯಲ್ಲಿರುವ ಆರು ಉಷ್ಣ ಸ್ಥಾವರಗಳು (Thermal power plants) ಸಹ ಮುಚ್ಚಲ್ಪಡಲಿವೆ. ಸುಪ್ರೀಂ ಕೋರ್ಟ್‌ನ ನಿರ್ದೇಶನದ ಮೇರೆಗೆ ತುರ್ತು ಸಭೆ ನಡೆಸಿದ ನಂತರ ಮಂಗಳವಾರ ತಡರಾತ್ರಿ ದಿಲ್ಲಿಯಲ್ಲಿ ಮಿನಿ ಲಾಕ್ ಡೌನ್ ಜಾರಿಗೊಳಿಸಲು ನಿರ್ಧರಿಸಲಾಯಿತು. ಸಭೆಯಲ್ಲಿ ಆಯೋಗದ ಸದಸ್ಯರು, ಮುಖ್ಯ ಕಾರ್ಯದರ್ಶಿಗಳು, ಹೆಚ್ಚುವರಿ ಮುಖ್ಯ ಕಾರ್ಯದರ್ಶಿಗಳು ಮತ್ತು ಸಾರಿಗೆ ಮತ್ತು ನಗರಾಭಿವೃದ್ಧಿ ಮುಂತಾದ ಇಲಾಖೆಗಳ ಪ್ರಧಾನ ಕಾರ್ಯದರ್ಶಿಗಳು ಉಪಸ್ಥಿತರಿದ್ದರು.

 

 

Follow Us:
Download App:
  • android
  • ios