Turning Point: ಸ್ಮಶಾನದಲ್ಲಿದ್ದಾಗ ಬಂದ ಫೋನ್ ಕಾಲ್ ಮೋದಿ ಬದುಕನ್ನೇ ಬದಲಿಸಿತು..!

Turning Point Modi Story ಅವಕಾಶಗಳು ಹೇಗೆ ಬೇಕಾದ್ರೂ, ಯಾವ ರೂಪದಲ್ಲಿ ಬೇಕಾದ್ರೂ ಬರಬಹುದು. ನರೇಂದ್ರ ಮೋದಿಯವ್ರಿಗೆ ಗುಜರಾತ್ ಮುಖ್ಯಮಂತ್ರಿಯಾಗುವ ಅವಕಾಶ ಅರಸಿ ಬಂದದ್ದು ಅವರು ದೆಹಲಿಯ ಸ್ಮಶಾನದಲ್ಲಿದ್ದಾಗ. 

Turning Point One Phone Call From atal bihari vajpayee  Changes Narendra Modi Entire Life san

ಬೆಂಗಳೂರು (ಏ.4): ಇದು ಇಪ್ಪತ್ತೆರಡೂವರೆ ವರ್ಷಗಳ ಹಿಂದಿನ ಮಾತು. ದೆಹಲಿ ಅದೊಂದು ಸ್ಮಶಾನದಲ್ಲಿ ನರೇಂದ್ರ ಮೋದಿ ಇದ್ದರು. ಸ್ಮಶಾನದಲ್ಲಿದ್ದ ಮೋದಿಯವರ ಮೊಬೈಲ್ ಫೋನ್ ಅವತ್ತು ಇದ್ದಕ್ಕಿಂದಂತೆ ರಿಂಗಣಿಸಿತ್ತು. ಮೋದಿಗೆ ತುರ್ತು ಕರೆ ಮಾಡಿದ್ದು ಬೇರೆ ಯಾರೂ ಅಲ್ಲ ಅಂದಿನ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ. ಎಲ್ಲಿದ್ದೀಯಾ ಅಂದವರಿಗೆ "ಸ್ಮಶಾನದಲ್ಲಿದ್ದೀನಿ.." ಅಂದಿದ್ದರು ನರೇಂದ್ರ ಮೋದಿ..!  ಆ ದಿನ ಮೋದಿ ಸ್ಮಶಾನದಲ್ಲಿದ್ದದ್ದೇಕೆ..? ವಾಜಪೇಯಿ ಕರೆ ಕಳುಹಿಸಿದ್ದೇಕೆ..?  ಅದೊಂದು ದೂರವಾಣಿ ಕರೆ.. ರಾಷ್ಟ್ರ ರಾಜಕಾರಣಕ್ಕೆ ಟರ್ನಿಂಗ್ ಪಾಯಿಂಟ್ ಆಗಿತ್ತು. ಕರೆ ಸ್ವೀಕರಿಸಿದ್ದ ನರೇಂದ್ರ ಮೋದಿಗೆ "ಗುಜರಾತ್'ಗೆ ಹೊರಡು" ಎಂದು ಅಣತಿ ಮಾಡಿದ್ದರು ಅಟಲ್‌ ಬಿಹಾರಿ ವಾಜಪೇಯಿ. ಸ್ವಂತ ರಾಜ್ಯದ ಹೆಸರು ಕೇಳಿ ಗುಜರಾತ್‌ನ ನಾಯಕ ಗಲಿಬಿಲಿಯಾಗಿದ್ದರು. ಹೌದು, ಸ್ಮಶಾನದಲ್ಲಿದ್ದಾಗ ಬಂದ ಫೋನ್ ಕಾಲ್ ಮೋದಿ ಬದುಕನ್ನೇ ಬದಲಿಸಿತು. ಅಲ್ಲಿಂದಲೇ ಶುರು ನರೇಂದ್ರ ಮೋದಿಯವರ ಸಾಟಿಯಿಲ್ಲದ ನಾಗಾಲೋಟ.

Watch Video: ಶಾಸಕನಾಗುವ ಮೊದಲೇ ಮೋದಿ ಸಿಎಂ ಆಗಿದ್ದು ಹೇಗೆ? ಗೋದ್ರಾ ಹತ್ಯಾಕಾಂಡ ಮೋದಿ ಮೇಲೆ ಬೀರಿದ ಪರಿಣಾಮವೇನು?

ಅವಕಾಶಗಳು ಹೇಗೆ ಬೇಕಾದ್ರೂ, ಯಾವ ರೂಪದಲ್ಲಿ ಬೇಕಾದರೂ ಬರಬಹುದು. ನರೇಂದ್ರ ಮೋದಿಯವರಿಗೆ ಗುಜರಾತ್ ಮುಖ್ಯಮಂತ್ರಿಯಾಗುವ ಅವಕಾಶ ಅರಸಿ ಬಂದದ್ದು ಅವರು ದೆಹಲಿಯ ಸ್ಮಶಾನದಲ್ಲಿದ್ದಾಗ. ಶಾಸಕನಾಗೋದಕ್ಕೂ ಮೊದಲೇ ಮುಖ್ಯಮಂತ್ರಿಯಾದ ಮೋದಿಯವರಿಗೆ ಹೆಜ್ಜೆ ಹೆಜ್ಜೆಗೂ ಅಗ್ನಿಪರೀಕ್ಷೆಗಳೇ ಎದುರಾಗುತ್ತವೆ. ಆದ್ರೆ ಚಾಣಾಕ್ಷ ಮೋದಿ, ತಮ್ಮ ಬುದ್ಧಿಬಲದಿಂದಲೇ ಎಲ್ಲವನ್ನೂ ಮೆಟ್ಟಿ ನಿಲ್ತಾರೆ.

Turning Point: Sorry ಸರ್ದಾರ್! ಉಕ್ಕಿನ ಮನುಷ್ಯನಿಗೆ ಪಟ್ಟ ತಪ್ಪಿಸಿದ್ದರಾ ಗಾಂಧೀಜಿ..?

ನರೇಂದ್ರ ಮೋದಿಯವರು ತುಂಬಾ ವರ್ಷಗಳ ಕಾಲ ಗುಜರಾತ್’ನಿಂದ ದೂರ ಉಳಿದಿದ್ರು. ಕಾರಣ, ಗುಜರಾತ್ ಬಿಜೆಪಿಯ ಆಂತರಿಕ ಸಂಘರ್ಷ. ಮೋದಿಯವರಿಗೂ ಬಿಜೆಪಿ ರಾಜ್ಯಾಧ್ಯಕ್ಷರಾಗಿದ್ದ ಶಂಕರ್ ಸಿಂಗ್ ವಘೇಲಾಗೂ ಭಿನ್ನಾಭಿಪ್ರಾಯವಿತ್ತು. ಪಕ್ಷದಲ್ಲಿ ಸಂಘರ್ಷವಾಗೋದು ಬೇಡ ಅಂತ ಮೋದಿಯವರನ್ನು ಗುಜರಾತ್’ನಿಂದ ಹೊರಗೆ ಕಳುಹಿಸಿ ಪಕ್ಷ ಸಂಘಟನೆಯ ಜವಾಬ್ದಾರಿ ನೀಡಿತ್ತು ಬಿಜೆಪಿ ವರಿಷ್ಠ ಮಂಡಳಿ.

ಅಚಾನಕ್ ಆಗಿ ಗುಜರಾತ್ ಮುಖ್ಯಮಂತ್ರಿಯಾದ ನರೇಂದ್ರ ಮೋದಿಯವರಿಗೆ, ಗೋಧ್ರಾ ಹತ್ಯಾಕಾಂಡ ಕಳಂಕ ಅಂಟಿಕೊಂಡು ಬಿಡುತ್ತೆ. ಅದು ಮೋದಿ ನಾಯಕತ್ವವನ್ನೇ ಪ್ರಶ್ನಿಸುವಂತೆ ಮಾಡಿ ಬಿಡುತ್ತೆ. ಆದರೆ, ಗುಜರಾತ್ ಜನ ಮಾತ್ರ ಮೋದಿ ಮೇಲೆ ನಂಬಿಕೆ ಇಟ್ಟಿದ್ದರು. ಇಡೀ ದೇಶವೇ ತಿರುಗಿ ನೋಡೋ ಹಾಗೆ, 2002ರ ವಿಧಾನಸಭಾ ಚುನಾವಣೆ ಗೆದ್ದ ಮೋದಿ, ಅಲ್ಲಿಂದ ಹಿಂದಿರುಗಿ ನೋಡಿದ್ದೇ ಇಲ್ಲ. ಮುಂದೆ 2007, 2012ರಲ್ಲೂ ಗುಜರಾತ್'ನಲ್ಲಿ ಮೋದಿ ದಿಗ್ವಿಜಯ ಸಾಧಿಸುತ್ತಾರೆ. 12 ವರ್ಷಗಳ ಕಾಲ, ಒಟ್ಟು ನಾಲ್ಕು ಬಾರಿ ಗುಜರಾತ್ ಮುಖ್ಯಮಂತ್ರಿಯಾದ ಮೋದಿ, ಗುಜರಾತ್'ನ ದಿಕ್ಕನ್ನೇ ಬದಲಿಸಿ ಬಿಡುತ್ತಾರೆ. ಅಭಿವೃದ್ಧಿ ರಾಜಕಾರಣವನ್ನೇ ಮುಂದಿಟ್ಟುಕೊಂಡು, ಗುಜರಾತ್ ಮಾಡೆಲನ್ನು ದೇಶಕ್ಕೆ ಪರಿಚಯಿಸ್ತಾರೆ. 

ಗುಜರಾತ್ ಮುಖ್ಯಮಂತ್ರಿಯಾಗಿ ಮಿಂಚಿದವರನ್ನು ದೆಹಲಿ ಗದ್ದುಗೆ ಕೈ ಬೀಸಿ ಕರೆಯುತ್ತದೆ. 2014ರಲ್ಲಿ ನರೇಂದ್ರ ಮೋದಿಯವರು ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯನ್ನು ಅಭೂತಪೂರ್ವ ಗೆಲುವಿನತ್ತ ಮುನ್ನಡೆಸಿ ದೇಶದ ಪ್ರಧಾನಿ ಪಟ್ಟದಲ್ಲಿ ವಿರಾಜಮಾನರಾಗ್ತಾರೆ. ಜೀವನಕ್ಕೆ ಸಿಗೋ ತಿರುವುಗಳೇ ಹಾಗೆ. ಅದು ಅನಿರೀಕ್ಷಿತ. ಅಂಥ ಅನಿರೀಕ್ಷಿತ ತಿರುವು ಸ್ಮಶಾನದಲ್ಲಿದ್ದ ಮೋದಿಯವರನ್ನು ಮುಖ್ಯಮಂತ್ರಿ ಪಟ್ಟಕ್ಕೇರಿಸತ್ತೆ, ಅಲ್ಲಿಂದ ಎರಡು ಬಾರಿ ದೇಶದ ಪ್ರಧಾನಿಯಾಗ್ತಾರೆ. 

Latest Videos
Follow Us:
Download App:
  • android
  • ios