Asianet Suvarna News Asianet Suvarna News

ಭಾರತದ ಮೊದಲ ಬುಲೆಟ್‌ ರೈಲು ಮಾರ್ಗದ ಸುರಂಗ ನಿರ್ಮಾಣ ಯಶಸ್ವಿ

ಗುಜರಾತ್‌ನ ವಲ್ಸದ್‌ ಜಿಲ್ಲೆಯ ಜರೋಲಿ ಗ್ರಾಮದ ಬಳಿ ಇರುವ ಈ ಸುರಂಗವನ್ನು ಹೊಸ ಆಸ್ಟ್ರಿಯನ್‌ ಸುರಂಗ ವಿಧಾನ (ಎನ್‌ಎಟಿಎಂ) ಬಳಸಿಕೊಂಡು ಪರ್ವತ ಕೊರೆದು 10 ತಿಂಗಳ ಅವಧಿಯಲ್ಲಿ ನಿರ್ಮಾಣ ಮಾಡಲಾಗಿದೆ. ಈ ಸುರಂಗವು 350 ಮೀಟರ್‌ ಉದ್ದ, 12.6 ಮೀ. ವ್ಯಾಸ ಹಾಗೂ 10.25 ಮೀ. ಎತ್ತರ ಹೊಂದಿದೆ.

Tunnel Construction of India's First Bullet Train Line Successful grg
Author
First Published Oct 6, 2023, 3:00 AM IST

ಮುಂಬೈ(ಅ.06):  ಮಹಾರಾಷ್ಟ್ರದ ಮುಂಬೈ ಮತ್ತು ಗುಜರಾತ್‌ನ ಅಹಮದಾಬಾದ್ ನಡುವಿನ ದೇಶದ ಮೊದಲ ಬುಲೆಟ್‌ ರೈಲು ಹಳಿ ಮಾರ್ಗದಲ್ಲಿ ಮೊದಲ ಸುರಂಗ ನಿರ್ಮಾಣವು ಗುರುವಾರ ಯಶಸ್ವಿಯಾಗಿ ಪೂರ್ಣಗೊಂಡಿದೆ ಎಂದು ನ್ಯಾಷನಲ್‌ ಹೈಸ್ಪೀಡ್‌ ರೈಲು ಕಾರ್ಪೋರೇಶನ್ ಲಿಮಿಟೆಡ್‌ (ಎನ್‌ಎಚ್‌ಎಸ್‌ಆರ್‌ಸಿಎಲ್‌) ತಿಳಿಸಿದೆ.

ಗುಜರಾತ್‌ನ ವಲ್ಸದ್‌ ಜಿಲ್ಲೆಯ ಜರೋಲಿ ಗ್ರಾಮದ ಬಳಿ ಇರುವ ಈ ಸುರಂಗವನ್ನು ಹೊಸ ಆಸ್ಟ್ರಿಯನ್‌ ಸುರಂಗ ವಿಧಾನ (ಎನ್‌ಎಟಿಎಂ) ಬಳಸಿಕೊಂಡು ಪರ್ವತ ಕೊರೆದು 10 ತಿಂಗಳ ಅವಧಿಯಲ್ಲಿ ನಿರ್ಮಾಣ ಮಾಡಲಾಗಿದೆ. ಈ ಸುರಂಗವು 350 ಮೀಟರ್‌ ಉದ್ದ, 12.6 ಮೀ. ವ್ಯಾಸ ಹಾಗೂ 10.25 ಮೀ. ಎತ್ತರ ಹೊಂದಿದೆ.

Bullet Train : ದೆಹಲಿ-ವಾರಣಾಸಿ, ಮುಂಬೈ-ನಾಗ್ಪುರ ನಡುವೆ ಹೈಸ್ಪೀಡ್ ರೈಲು!

ಈ ಬುಲೆಟ್‌ ರೈಲು ಮಾರ್ಗದಲ್ಲಿ ಒಟ್ಟು 7 ಸುರಂಗ ಮಾರ್ಗಗಳನ್ನು ನಿರ್ಮಿಸಲಾಗುವುದು ಎಂದು ಎಚ್‌ಎಚ್‌ಎಸ್‌ಆರ್‌ಸಿಎಲ್‌ ತಿಳಿಸಿದೆ. ಒಟ್ಟು 1.08 ಲಕ್ಷ ಕೋಟಿ ರು. ವೆಚ್ಚದಲ್ಲಿ ಮುಂಬೈ- ಅಹಮದಾಬಾದ್‌ ಬುಲೆಟ್‌ ರೈಲು ಕಾರಿಡಾರ್ ಯೋಜನೆ ನಿರ್ಮಾಣವಾಗುತ್ತಿದೆ.

Follow Us:
Download App:
  • android
  • ios