Bullet Train : ದೆಹಲಿ-ವಾರಣಾಸಿ, ಮುಂಬೈ-ನಾಗ್ಪುರ ನಡುವೆ ಹೈಸ್ಪೀಡ್ ರೈಲು!

ಮುಂದಿನ ವರ್ಷದಲ್ಲಿ ದೇಶದಲ್ಲಿ ಮತ್ತೆರಡು ಬುಲೆಟ್ ಟ್ರೇನ್ ಯೋಜನೆ
ಮುಂದಿನ ಬಜೆಟ್ ನಲ್ಲಿ ದೆಹಲಿ-ವಾರಣಾಸಿ, ಮುಂಬೈ-ನಾಗ್ಪುರ ಬುಲೆಟ್ ಟ್ರೇನ್ ಯೋಜನೆಗೆ ಅಸ್ತು ಸಾಧ್ಯತೆ
ಕಳೆದ ತಿಂಗಳು ದೆಹಲಿ-ವಾರಣಾಸಿ ಬುಲೆಟ್ ಟ್ರೇನ್ ನ ಪ್ರಾಜೆಕ್ಟ್ ನೀಡಿರುವ ರೈಲ್ವೇಸ್

Bullet train for New Delhi to Varanasi and Mumbai to Nagpur may-get-nod-soon san

ನವದೆಹಲಿ (ಡಿ.18): ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ತನ್ನ ಮಹಾತ್ವಾಕಾಂಕ್ಷೆಯ ಯೋಜನೆಯಾಗಿರುವ ಬುಲೆಟ್ ಟ್ರೇನ್ (Bullet Train) ಪ್ರಾಜೆಕ್ಟ್ ಗಳನ್ನು ವಿಸ್ತರಣೆ ಮಾಡುವ ಗುರಿಯಲ್ಲಿದೆ. ಈಗಾಗಲೇ ಸರ್ಕಾರದ ಬಹುದೊಡ್ಡ ಯೋಜನೆಯಾಗಿರುವ ಮುಂಬೈ-ಅಹಮದಾಬಾದ್ (Mumbai-Ahmedabad) ನಡುವಿನ ಬುಲೆಟ್ ಟ್ರೇನ್ ಯೋಜನೆ ತೀರಾ ನಿಧಾನಗತಿಯಲ್ಲಿ ಸಾಗುತ್ತಿರುವ ನಡುವೆಯೇ ಮತ್ತೆರಡು ಬುಲೆಟ್ ಟ್ರೇನ್ ಪ್ರಾಜೆಕ್ಟ್‌ ಗಳಿಗೆ ಸರ್ಕಾರ ಕೈ ಹಾಕಿದೆ. ಮುಂದಿನ ಬಜೆಟ್ ನಲ್ಲಿ(Union budget 2022-23 ) ಎರಡು ಹೊಸ ಯೋಜನೆ ಘೋಷಣೆಯಾಗಲಿದ್ದು, ದೆದೆಹಲಿ-ವಾರಣಾಸಿ ( New Delhi to Varanasi) ಹಾಗೂ ಮುಂಬೈ-ನಾಗ್ಪುರ (Mumbai-Nagpur) ನಡುವೆ ಬುಲೆಟ್ ಟ್ರೇನ್ ಕಾರಿಡಾರ್ ಕಾಮಗಾರಿ ಆರಂಭವಾಗಲಿದೆ.

ದೇಶದ ರಾಜಧಾನಿ ನವದೆಹಲಿಯಿಂದ ಪ್ರಧಾನಿ ನರೇಂದ್ರ ಮೋದಿ (PM Narendra Modi) ಅವರ ಸಂಸದೀಯ ಕ್ಷೇತ್ರವಾಗಿರುವ ವಾರಣಾಸಿಯವರೆಗೂ ಬುಲೆಟ್ ಟ್ರೇನ್ ಪ್ರಾಜೆಕ್ಟ್ ಗೆ ಈಗಾಗಲೇ ರೈಲ್ವೇ ಇಲಾಖೆ ಡಿಪಿಆರ್ ಸಿದ್ಧ ಮಾಡಿದ್ದು, ಕಳೆದ ತಿಂಗಳು ಇದನ್ನು ಸರ್ಕಾರಕ್ಕೆ ಸಲ್ಲಿಸಿದೆ. ಮೂಲಗಳ ಪ್ರಕಾರ ಮುಂದಿನ ಬಜೆಟ್ ನಲ್ಲಿ ಈ ಯೋಜನೆಗೆ ಅನುಮೋದನೆ ಸಿಗುವ ಸಾಧ್ಯತೆ ಹೆಚ್ಚಿದೆ. ಅದರೊಂದಿಗೆ ಮುಂಬೈ-ನಾಗ್ಪುರ ನಡುವಿನ ಬುಲೆಟ್ ಟ್ರೇನ್ ಯೋಜನೆಯನ್ನೂ ಘೋಷಣೆ ಮಾಡುವ ಸಾಧ್ಯತೆ ಇದೆ. ಆದರೆ, ಮಹಾರಾಷ್ಟ್ರ ಸರ್ಕಾರ ಇದಕ್ಕೆ ಎಷ್ಟು ಪ್ರಮಾಣದಲ್ಲಿ ಹಣ ಹೂಡಿಕೆ ಮಾಡಲಿದೆ ಎನ್ನುವುದರಲ್ಲಿ ಸರ್ಕಾರ ಸ್ಪಷ್ಟತೆ ಬಯಸಿದೆ.

ರಾಷ್ಟ್ರೀಯ ಹೈ ಸ್ಪೀಡ್ ರೈಲ್ ಕಾರ್ಪೋರೇಷನ್ ಲಿಮಿಟೆಡ್ (National High Speed Rail Corp. Ltd) (ಎನ್ ಎಚ್ಆರ್ ಸಿಎಲ್) ಈಗಾಗಲೇ ದೆಹಲಿ-ವಾರಣಾಸಿ ಬುಲೆಟ್ ಟ್ರೇನ್ ಕಾರಿಡಾರ್ ಗೆ ವಿವರವಾದ ಪ್ರಾಜೆಕ್ಟ್‌ ರಿಪೋರ್ಟ್ (ಡಿಪಿಆರ್) ಅನ್ನು ಕಳೆದ ನವೆಂಬರ್ ನಲ್ಲಿ ಸಲ್ಲಿಕೆ ಮಾಡಿದೆ. ಇನ್ನು ಮುಂಬೈ-ನಾಗ್ಪುರ ನಡುವಿನ ಡಿಪಿಆರ್ ಕೂಡ ಅಂತಿಮ ಹಂತದಲ್ಲಿದೆ ಎಂದು ಎನ್ ಎಚ್ಆರ್ ಸಿಎಲ್  (NHSRCL)ವಕ್ತಾರರೊಬ್ಬರು ತಿಳಿಸಿದ್ದಾರೆ.

ದೇಶದ ಮೊದಲ ಬುಲೆಟ್‌ ರೈಲು 2 ಹಂತದಲ್ಲಿ ಜಾರಿ?
ಮುಂದಿನ ಹಣಕಾಸು ವರ್ಷದ ಮೊದಲ ಕ್ವಾರ್ಟರ್ ನಲ್ಲಿ  ರೈಲ್ವೇ ಇಲಾಖೆಗೆ ಇದನ್ನು ಸಲ್ಲಿಕೆ ಮಾಡಲಿದೆ. ಅಅದರೊಂದಿಗೆ ಇನ್ನೂ ಐದು ಬುಲೆಟ್ ಟ್ರೇನ್ ಗಳ ಡಿಪಿಆರ್ ಅನ್ನು ಎನ್ ಎಚ್ಆರ್ ಸಿಎಲ್ ಸಿದ್ಧ ಮಾಡುತ್ತದ್ದು 2023ರ ಹಣಕಾಸು ವರ್ಷದಲ್ಲಿ ಇದನ್ನು ಪೂರ್ಣ ಮಾಡಿ ಸರ್ಕಾರಕ್ಕೆ ಸಲ್ಲಿಕೆ ಮಾಡುವ ಸಾಧ್ಯತೆ ಇದೆ.

1.5 ಲಕ್ಷ ಕೋಟಿ ವೆಚ್ಚ!
ಅರಂಭಿಕ ಅಂದಾಜಿನ ಪ್ರಕಾರ ದೆಹಲಿ-ವಾರಣಾಸಿ ಬುಲೆಟ್ ಟ್ರೇನ್ ಪ್ರಾಜೆಕ್ಟ್ ಗೆ 1.5 ಲಕ್ಷ ಕೋಟಿ ರೂಪಾಯಿ ವೆಚ್ಚವಾಗಬಹುದು, ಮುಂಬೈ-ನಾಗ್ಪುರ ಕಾರಿಡಾರ್ ಗೆ ಅದಕ್ಕಿಂತ ಸ್ವಲ್ಪ ಹಣ ಕಡಿಮೆ ವೆಚ್ಚವಾಗಬಹುದು. ಎನ್‌ಎಚ್‌ಆರ್‌ಸಿಎಲ್ ವಕ್ತಾರರ ಪ್ರಕಾರ, ದೆಹಲಿ-ವಾರಣಾಸಿ ಕಾರಿಡಾರ್‌ನ ವಿವರವಾದ ಯೋಜನಾ ವರದಿಯು ನಿಗಮವು ನಿರೀಕ್ಷಿತ ರೈಡರ್‌ಶಿಪ್, ಸುತ್ತಮುತ್ತಲಿನ ಹಳ್ಳಿಗಳ ಮೇಲಿನ ಪರಿಣಾಮ, ಭೂಮಿಯ ಅವಶ್ಯಕತೆ, ಸಾಮಾಜಿಕ ಪರಿಣಾಮದ ಮೌಲ್ಯಮಾಪನ ಮತ್ತು ಪರಿಸರದ ಮೇಲೆ ಪರಿಣಾಮದ ಕುರಿತು ನಡೆಸಿದ ಬಹು ಅಧ್ಯಯನಗಳನ್ನು ಒಳಗೊಂಡಿದೆ.

ದೇಶದ ಮೊದಲ ಬುಲೆಟ್‌ ರೈಲಿನ ಚೊಚ್ಚಲ ಫೋಟೋ ಬಿಡುಗಡೆ!
ಪ್ರಸ್ತುತ ದೇಶದ ಮೊಟ್ಟಮೊದಲ ಬುಲೆಟ್ ಟ್ರೇನ್ ಪ್ರಾಜೆಕ್ಟರ್ ಮುಂಬೈ-ಅಹಮದಾಬಾದ್ ನಗರವನ್ನು ಸಂಪರ್ಕ ಮಾಡಲಿದ್ದು, ಎನ್ ಎಚ್ಆರ್ ಸಿಎಲ್ ನೇತೃತ್ವದಲ್ಲಿ ಕಾಮಗಾರಿ ನಡೆಯುತ್ತಿದೆ.  ಮಾರ್ಗದ ಜೋಡಣೆ ಮತ್ತು ಭೂಸ್ವಾಧೀನದ ಸವಾಲುಗಳನ್ನು ಎದುರಿಸುತ್ತಲೇ ಈ ಯೋಜನೆಯ ಕೆಲಸವು  ನಿಧಾನವಾಗಿ ಸಾಗುತ್ತಿದೆ. 500 ಕಿಲೋ ಮೀಟರ್ ಗಿಂತ ಅಲ್ವ ಅಧಿಕ ದೂರದ ಈ ಮಾರ್ಗಕ್ಕೆ ಆರಂಭದಲ್ಲಿ 1 ಲಕ್ಷ ಕೋಟಿ ರೂ. ಅಂದಾಜು ಮಾಡಲಾಗಿತ್ತು. ಜಪಾನ್ ನ  E5 ಶಿಂಕನ್‌ಸೆನ್ (E5 Shinkansen) ತಂತ್ರಜ್ಞಾನವನ್ನು ಬಳಸಿಕೊಂಡು ಗಂಟೆಗೆ 300 ಕಿಲೋಮೀಟರ್ ವೇಗದಲ್ಲಿ ರೈಲುಗಳು ಚಲಿಸಲಿವೆ.

Latest Videos
Follow Us:
Download App:
  • android
  • ios