Asianet Suvarna News Asianet Suvarna News

ಪೇಜಾವರ ಶ್ರೀಗಳ ಅಗಲಿಕೆ ನೋವು ತಂದಿದೆ: ಸಿದ್ದಲಿಂಗ ಸ್ವಾಮೀಜಿ

ಉಡುಪಿ ಪೇಜಾವರ ಶ್ರೀಗಳ ಅಗಲಿಕೆ ನೋವು ತಂದಿದೆ ಎಂದ ತುಮಕೂರು ಎಂದು ಸಿದ್ದಗಂಗಾ ಮಠದ ಸಿದ್ದಲಿಂಗ ಸ್ವಾಮೀಜಿ|ರಾಮಜನ್ಮಭೂಮಿ ವಿಚಾರದಲ್ಲಿ ಶ್ರೀಗಳು ಮುಂಚೂಣಿಯಲ್ಲಿದ್ದರು| ಅವರು ಇದ್ದಾಗಲೇ ರಾಮಜನ್ಮಭೂಮಿ ತೀರ್ಮಾನವಾಗಿದ್ದು ಸಂತಸ ತಂದಿತ್ತು| ಬಹುತೇಕರಿಗೆ ರಾಮಮಂದಿರ ನಿರ್ಮಾಣಕ್ಕೆ ಅವರಿಂದಲ್ಲೇ ಶಂಕುಸ್ಥಾಪನೆ ಮಾಡಿಸಬೇಕೆಂಬ ಆಪೇಕ್ಷೆಯಿತ್ತು| ಪ್ರಕೃತಿ ನಿಯಮದ್ದಂತೆ ನಮ್ಮನ್ನು ಬಿಟ್ಟು ಹೋಗಿದ್ದಾರೆ|

Tumakuru Siddalinga Swamiji Talks Over Pejawara Shri Dead
Author
Bengaluru, First Published Dec 29, 2019, 11:10 AM IST

ತುಮಕೂರು(ಡಿ.29): ಉಡುಪಿ ಪೇಜಾವರ ಶ್ರೀಗಳ ಅಗಲಿಕೆ ನೋವು ತಂದಿದೆ. ವೈದ್ಯರ ಪ್ರಯತ್ನದ ನಡುವೆ ಅವರು ನಮ್ಮನ್ನು ಅಗಲಿದ್ದಾರೆ, ಇದು ದುಖಃದ ಸಂಗತಿಯಾಗಿದೆ. ನಾಡು ರಾಷ್ಟ್ರಕ್ಕೆ ಅದ್ಭುತವಾದ ಸೇವೆ ಸಲ್ಲಿಸಿ ಸಂಘಟನೆ ಸಂಸ್ಕಾರದ ಸೇವೆ ಮಾಡಿಕೊಂಡಿದ್ದ ಅವರ ಅಗಲಿಕೆ ನೋವು ತಂದಿದೆ ಎಂದು ಸಿದ್ದಗಂಗಾ ಮಠದ ಸಿದ್ದಲಿಂಗ ಸ್ವಾಮೀಜಿ ಅವರು ಹೇಳಿದ್ದಾರೆ. 

ವಿಶ್ವಸಂತ ಪೇಜಾವರ ವಿಶ್ವೇಶ ತೀರ್ಥ ಸ್ವಾಮೀಜಿ ಅಸ್ತಂಗತ

ಭಾನುವಾರ ನಗರದಲ್ಲಿ ಮಾಧ್ಯಮದವರ ಜತೆ ಮಾತನಾಡಿದ ಅವರು, ರಾಮಜನ್ಮಭೂಮಿ ವಿಚಾರದಲ್ಲಿ ಶ್ರೀಗಳು ಮುಂಚೂಣಿಯಲ್ಲಿದ್ದರು. ಅವರು ಇದ್ದಾಗಲೇ ರಾಮಜನ್ಮಭೂಮಿ ತೀರ್ಮಾನವಾಗಿದ್ದು ಸಂತಸ ತಂದಿತ್ತು. ಬಹುತೇಕರಿಗೆ ರಾಮಮಂದಿರ ನಿರ್ಮಾಣಕ್ಕೆ ಅವರಿಂದಲ್ಲೇ ಶಂಕುಸ್ಥಾಪನೆ ಮಾಡಿಸಬೇಕೆಂಬ ಆಪೇಕ್ಷೆಯಿತ್ತು. ಆದರೆ ಪ್ರಕೃತಿ ನಿಯಮದ್ದಂತೆ ನಮ್ಮನ್ನು ಬಿಟ್ಟು ಹೋಗಿದ್ದಾರೆ ಎಂದು ಹೇಳಿದ್ದಾರೆ. 

ಬೆಂಗಳೂರಿನ ವಿದ್ಯಾಪೀಠದಲ್ಲಿ ಪೇಜಾವರ ಶ್ರೀಗಳ ಅಂತ್ಯಸಂಸ್ಕಾರ

ಪೇಜಾವರ ಶ್ರೀಗಳು ದೊಡ್ಡ ಸಂತರಾಗಿ ಆಧ್ಯಾತ್ಮದ ಸಾಧನೆ ಮಾಡಿದ್ದಾರೆ. ಅವರ ಸಾಮಾಜಿಕ ಕಳಕಳ, ಸೇವಾ ಕೈಂಕರ್ಯ ನಮಗೆಲ್ಲಾ ಆದರ್ಶವಾಗಿವೆ. ಮಠದ ಕಿರಿಯ ಶ್ರೀಗಳಿಗೆ ಪೇಜಾವರ ಅಗಲಿಕೆ ದುಖಃ ತಡೆದುಕೊಳ್ಳುವ ಶಕ್ತಿ ಭಗವಂತ ನೀಡಲಿ. ಪೇಜಾವರ ಶ್ರೀಗಳು ಸಿದ್ದಗಂಗಾ ಮಠದ ಬಗ್ಗೆ ಹಾಗೂ ಶಿವಕುಮಾರ ಮಹಾಸ್ವಾಮೀಜಿಗಳ ಬಗ್ಗೆ ಅಪಾರವಾದ ಕಳಕಳಿ ಭಕ್ತಿ ಹೊಂದಿದ್ದರು. ಶಿವಕುಮಾರ ಸ್ವಾಮಿಗಳು ಸ್ವಾಮಿಗಳಿಗೆ ಮಹಾಸ್ವಾಮಿಗಳು ಅಂತ ಹೇಳುತ್ತಿದ್ದರು ಎಂದು ಅವರ ನೆನಪನ್ನು ಮೆಲುಕು ಹಾಕಿದ್ದಾರೆ. 
 

Follow Us:
Download App:
  • android
  • ios