ಟಿಕೆಟ್ ಕೇಳಿದ್ದಕ್ಕೆ ಚಲಿಸೋ ರೈಲಿಂದ ಟಿಟಿಇಯನ್ನು ಸಾವಿಗೆ ತಳ್ಳಿದ ಪ್ರಯಾಣಿಕ
ಟಿಕೆಟ್ ಇಲ್ಲದೆ ಪ್ರಯಾಣಿಸುತ್ತಿದ್ದ ಪ್ರಯಾಣಿಕನೊಬ್ಬ ಟಿಟಿಇಯನ್ನು ಚಲಿಸುತ್ತಿರುವ ರೈಲಿನಿಂದ ತಳ್ಳಿದ್ದಾನೆ. ಘಟನೆಯಲ್ಲಿ ತಳ್ಳಲ್ಪಟ್ಟ ಪ್ರಯಾಣದ ಟಿಕೆಟ್ ಪರೀಕ್ಷಕ (ಟಿಟಿಇ) ಸಾವಿಗೀಡಾಗಿದ್ದಾರೆ.
ಆಘಾತಕಾರಿ ಘಟನೆಯೊಂದರಲ್ಲಿ, ಮಧ್ಯ ಕೇರಳ ಜಿಲ್ಲೆಯಲ್ಲಿ ಮಂಗಳವಾರ ಟಿಕೆಟ್ ಇಲ್ಲದೆ ಪ್ರಯಾಣಿಸುತ್ತಿದ್ದ ಪ್ರಯಾಣಿಕನೊಬ್ಬ ಟಿಟಿಇಯನ್ನು ಚಲಿಸುತ್ತಿರುವ ರೈಲಿನಿಂದ ತಳ್ಳಿದ್ದಾನೆ. ಘಟನೆಯಲ್ಲಿ ತಳ್ಳಲ್ಪಟ್ಟ ಪ್ರಯಾಣದ ಟಿಕೆಟ್ ಪರೀಕ್ಷಕ (ಟಿಟಿಇ) ಸಾವಿಗೀಡಾಗಿದ್ದಾರೆ.
ತ್ರಿಶೂರ್ ವೈದ್ಯಕೀಯ ಕಾಲೇಜು ಪೊಲೀಸ್ ಠಾಣೆ ವ್ಯಾಪ್ತಿಯ ವೇಲಪ್ಪಯ್ಯ ಪ್ರದೇಶದಲ್ಲಿ ಮಂಗಳವಾರ ಸಂಜೆ ಈ ಘಟನೆ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಕೊಲೆಯಾದವರನ್ನು ಎರ್ನಾಕುಲಂ ನಿವಾಸಿ ಕೆ ವಿನೋದ್ ಎಂದು ಗುರುತಿಸಲಾಗಿದೆ.
ಪೊಲೀಸರ ಪ್ರಕಾರ, ವಿನೋದ್ ತಮ್ಮ ಕರ್ತವ್ಯವನ್ನು ನಿರ್ವಹಿಸುತ್ತಿದ್ದಾಗ, ಟಿಕೆಟ್ ಇಲ್ಲದೆ ಪ್ರಯಾಣಿಸುತ್ತಿದ್ದವನನ್ನು ಪ್ರಶ್ನಿಸಿದಾಗ ಆತ ಟಿಟಿಇಯನ್ನು ತಳ್ಳಿದ್ದಾನೆ. ಎರ್ನಾಕುಲಂನಿಂದ ಪಾಟ್ನಾಗೆ ತೆರಳುತ್ತಿದ್ದ ರೈಲಿನಲ್ಲಿ ಈ ಘಟನೆ ನಡೆದಿದೆ.
ಅನಂತ್ ಅಂಬಾನಿಯ ವಿವಾಹಪೂರ್ವ ಕಾರ್ಯಕ್ರಮದಲ್ಲೇ ಮೆಟಾ ಜೊತೆ ಬೃಹತ್ ಡೀಲ್ ಕುದುರಿಸಿದ ರಿಲಯನ್ಸ್..
ಘಟನೆಗೆ ಸಂಬಂಧಿಸಿದಂತೆ ಪೊಲೀಸರು ಕ್ಷಿಪ್ರವಾಗಿ ಪ್ರತಿಕ್ರಿಯಿಸಿದ್ದು, ಆರೋಪಿ ಪ್ರಯಾಣಿಕನನ್ನು ಪಾಲಕ್ಕಾಡ್‌ನಲ್ಲಿ ಬಂಧಿಸಲಾಗಿದೆ. ಟಿಕೆಟ್ ಇಲ್ಲದಿರುವ ಬಗ್ಗೆ ಪ್ರಶ್ನಿಸಿದ ನಂತರ ವಲಸೆ ಕಾರ್ಮಿಕ ಪ್ರಯಾಣಿಕ, ವಿನೋದ್ ಅವರನ್ನು ಚಲಿಸುವ ರೈಲಿನಿಂದ ತಳ್ಳಿದ್ದಾನೆ ಎಂದು ರೈಲ್ವೆ ಅಧಿಕಾರಿಗಳು ತಿಳಿಸಿದ್ದಾರೆ. ವಿರುದ್ಧ ದಿಕ್ಕಿನಲ್ಲಿ ಸಾಗುತ್ತಿದ್ದ ಇನ್ನೊಂದು ರೈಲು ಅರ ದೇಹದ ಮೇಲೆ ಹರಿದಿರುವ ಶಂಕೆ ವ್ಯಕ್ತವಾಗಿದೆ.
ಎರ್ನಾಕುಲಂ-ಪಾಟ್ನಾ ಎಕ್ಸ್‌ಪ್ರೆಸ್ ತ್ರಿಶೂರ್ ನಿಲ್ದಾಣದಿಂದ ಹೊರಟ ನಂತರ ಈ ಘಟನೆ ನಡೆದಿದೆ. 40ರ ಹರೆಯದ ವಿನೋದ್ ಅವರು ಪ್ರಾಮಾಣಿಕ ಅಧಿಕಾರಿಯಾಗಿದ್ದು, ಕೆಲವು ಸಿನಿಮಾಗಳಲ್ಲಿ ಸಣ್ಣಪುಟ್ಟ ಪಾತ್ರಗಳನ್ನೂ ನಿರ್ವಹಿಸಿದ್ದಾರೆ ಎಂದು ಅವರ ಸಹೋದ್ಯೋಗಿಗಳು ನೆನಪಿಸಿಕೊಂಡಿದ್ದಾರೆ.