* ದೇವರಿಗೆ ಅರ್ಪಿಸಿದ ಹೂವಿಂದ ತಯಾರಿಸಿದ ಅಗರಬತ್ತಿ ಬಿಡುಗಡೆ ಮಾಡಿದ ಟಿಟಿಡಿ* ಬೆಂಗಳೂರು ಮೂಲದ ದರ್ಶನ್ ಇಂಟರ್‌ನ್ಯಾಷನಲ್ ಕಂಪನಿಯಿಂದ ಉತ್ಪಾದನೆ
ತಿರುಪತಿ(ಸೆ.14): ದೇವರಿಗೆ ಅರ್ಪಿಸಿದ ಹೂಗಳಿಂದ ತಯಾರಿಸಿದ ಅಗರಬತ್ತಿಗಳನ್ನು ತಿರುಮಲ ತಿರುಪತಿ ದೇವಸ್ಥಾನಮ್ (ಟಿಟಿಡಿ) ಸೋಮವಾರ ಬಿಡುಗಡೆ ಮಾಡಿದೆ.
ಬೆಂಗಳೂರು ಮೂಲದ ಕಂಪೆನಿ ಈ ಅಗರಬ ತ್ತಿಗಳನ್ನು ತಯಾರಿಸುತ್ತಿದೆ. ತಿರುಪತಿ ದೇವಸ್ಥಾನದ ಏಳು ಬೆಟ್ಟಗಳನ್ನು ಪ್ರತಿನಿಧಿಸುವಂತೆ, ಅಭಯಹಸ್ತ, ತಂದನಾನ, ದಿವ್ಯಪಾದ, ಆಕ್ರಿಷ್ಟಿ, ಸೃಷ್ಟಿ, ತೃಷ್ಟಿಮತ್ತು ದೃಷ್ಟಿಎನ್ನುವ 7 ಬ್ರಾಂಡ್‌ಗಳಲ್ಲಿ ಈ ಅಗರಬತ್ತಿಗಳನ್ನು ಉತ್ಪಾದಿಸಲಾಗುತ್ತಿದೆ.
ಬೆಂಗಳೂರು ಮೂಲದ ದರ್ಶನ್ ಇಂಟರ್‌ನ್ಯಾಷನಲ್ ಕಂಪೆನಿ ಈ ಅಗರಬತ್ತಿಗಳನ್ನು ತಯಾರಿಸುತ್ತದೆ. ‘ಅಗರಬತ್ತಿಗಳಿಗೆ ಕಚ್ಚಾವಸ್ತುವಾಗಿ ದೇವರಿಗೆ ಅರ್ಪಿಸಿದ ಹೂಗಳು, ದೇವಸ್ಥಾನದಲ್ಲಿ ನಡೆದ ಇತರ ಕಾರ್ಯಕ್ರಮಗಳ ಅಲಂಕಾರಕ್ಕೆ ಬಳಸಿದ ಹೂಗಳನ್ನು ಬಳಸಲಾಗುತ್ತದೆ. ಹೂಗಳು ಬಳಕೆಯಾದ 1 ದಿನದ ನಂತರ ಅವುಗಳನ್ನು ಅಗರಬತ್ತಿ ತಯಾರಿಕೆಗೆ ಬಳಸಲಾಗುತ್ತದೆ.
ಈ ಅಗರಬತ್ತಿಗಳನ್ನು ಲಾಡು ಮಾರಾಟ ಕೌಂಟರ್ ಬಳಿ ಮಾರಾಟ ಮಾಡಲಾಗುತ್ತದೆ’ ಎಂದು ಟಿಟಿಡಿಯ ಅಧ್ಯಕ್ಷ ವೈ.ವಿ.ಸುಬ್ಬಾ ರೆಡ್ಡಿ ಹೇಳಿದರು.
