ತಿರುಪತಿ[ಜ.04]: ತಿರುಪತಿಗೆ ವೆಂಕಟೇಶ್ವರನ ದರ್ಶನಕ್ಕೆ ಹೋಗುವ ಭಕ್ತರಿಗೆ ಸಿಹಿ ಸುದ್ದಿ. ವೆಂಕಟೇಶ್ವರರನ ದರ್ಶನಕ್ಕೆ ಹೋಗುವ ಪ್ರತಿ ಭಕ್ತರಿಗೆ ಶೀಘ್ರದಲ್ಲೇ ಒಂದು ಉಚಿತ ಲಡ್ಡು ಪ್ರಸಾದ ಲಭಿಸಲಿದೆ. ಇದೇ ಜನವರಿ 6ರಂದು ಆಚರಿಸಲಾಗುವ ವೈಕುಂಠ ಏಕಾದಶಿಯಿಂದ ಅಥವಾ ಜನವರಿ 15ರಂಚು ಆಚರಿಸಲಾಗುವ ಮಕರ ಸಂಕ್ರಮಣದಿಂದ ಲಡ್ಡು ಉಚಿತವಾಗಿ ಲಭಿಸುವ ಸಾಧ್ಯತೆ ಇದೆ.

ಈವರೆಗೆ ಕಾಲ್ನಡಿಗೆಯಲ್ಲಿ ತಿರುಮಲ ಬೆಟ್ಟಏರುವ ಭಕ್ತರಿಗೆ ಮಾತ್ರ ಒಂದು ಉಚಿತ ಲಡ್ಡು ನೀಡಲಾಗುತ್ತಿತ್ತು. ಈಗ ಕಾಲ್ನಡಿಗೆಯಲ್ಲಾಗಲಿ ಅಥವಾ ವಾಹನದಲ್ಲಾಗಲಿ- ಎರಡರ ಮೂಲಕವೂ ತಿಮ್ಮಪ್ಪನ ದರ್ಶನ ಪಡೆಯುವ ಭಕ್ತರಿಗೆ ಉಚಿತ ಲಡ್ಡು ನೀಡುವ ಕಾರ್ಯಕ್ರಮ ಆರಂಭವಾದರೆ ಪ್ರತಿ ದಿನ 80 ಸಾವಿರದಿಂದ 1 ಲಕ್ಷ ಉಚಿತ ಲಡ್ಡುಗಳನ್ನು ತಿರುಪತಿ ತಿರುಮಲ ದೇವಸ್ಥಾನ ಸಮಿತಿ (ಟಿಡಿಡಿ) ವಿತರಿಸಲಿದೆ. ಈ ನಡೆಯಿಂದ ಲಡ್ಡು ಮಾರಾಟದ ಕಾಳದಂಧೆಗೆ ಕಡಿವಾಣ ಬೀಳಲಿದೆ ಎಂದು ಟಿಟಿಡಿ ವಿಶ್ವಾಸ ವ್ಯಕ್ತಪಡಿಸಿದೆ.

ಡಿಕೆಶಿ ನಾಡಲ್ಲಿ 25 ಎಕರೆಯಲ್ಲಿ ತಿರು​ಪತಿ ಮಾದ​ರಿ​ ದೇಗುಲ : ರಾಜ್ಯ ಸರ್ಕಾರದಿಂದ ಅಸ್ತು

ಇದಲ್ಲದೆ, ಈವರೆಗೂ ಟಿಡಿಡಿ ಅಧಿಕಾರಿಗಳ ಶಿಫಾರಸು ಪತ್ರ ತರುವ ಭಕ್ತರಿಗೆ ಹೆಚ್ಚುವರಿ ಲಡ್ಡು ನೀಡಲಾಗುತ್ತಿತ್ತು. ಆದರೆ ಈಗ ‘ಒಂದು ಉಚಿತ ಲಡ್ಡು’ ಯೋಜನೆ ಆರಂಭವಾದ ಬಳಿಕ ಶಿಫಾರಸಿನ ಮೇರೆಗೆ ನೀಡಲಾಗುವ ಹೆಚ್ಚುವರಿ ಲಡ್ಡು ಪ್ರಸಾದಕ್ಕೆ ಕಡಿವಾಣ ಬೀಳಲಿದೆ. ಇದರ ಬದಲು, ಯಾವುದೇ ಶಿಫಾರಸು ಪತ್ರದ ಅಗತ್ಯವಿಲ್ಲದೇ ಪ್ರತಿ ಲಡ್ಡುಗೆ 50 ರು. ವಿಧಿಸಿ ಹೆಚ್ಚುವರಿ ಲಡ್ಡು ಕೊಡುವ ಚಿಂತನೆಯಲ್ಲೂ ಟಿಟಿಡಿ ಇದೆ. ಈಗ ಟಿಟಿಡಿ ಪ್ರತಿ ದಿನ 3 ಲಕ್ಷ ಲಡ್ಡು ಮಾರಾಟ ಮಾಡುತ್ತದೆ ಎಂದು ದೇಗುಲದ ವೆಬ್‌ಸೈಟ್‌ನಲ್ಲಿ ತಿಳಿಸಲಾಗಿದೆ. ಲಡ್ಡು ವಿತರಣೆಯನ್ನು 1715ನೇ ಇಸವಿಯ ಆಗಸ್ಟ್‌ 2ರಿಂದ ಆರಂಭಿಸಲಾಗಿತ್ತು.

ಜೀಸ್‌ ಲಡ್ಡು ಎಂದವರ ಮೇಲೆ ಕೇಸು:

‘ತಿರುಪತಿ ಲಡ್ಡು ಜೀಸಸ್‌ ಲಡ್ಡು’ ಎಂದು ವಾಟ್ಸಪ್‌ನಲ್ಲಿ ಅಪಪ್ರಚಾರ ಮಾಡಲಾಗುತ್ತಿದ್ದು, ಇದರ ವಿರುದ್ಧ ತಿರುಮಲ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಸಂದೇಶ ಕಳಿಸುವವರನ್ನು ಬಂಧಿಸಲು ಬಲೆ ಬೀಸಿದ್ದಾರೆ.

ತಿಮ್ಮಪ್ಪನ ಮೇಲಿನ ಭಕ್ತಿ ಖಚಿತ: ತಿರುಪತಿ ಲಡ್ಡು ಇನ್ಮುಂದೆ ಉಚಿತ!