Asianet Suvarna News Asianet Suvarna News

ಬೆಂಗಳೂರಲ್ಲೊಬ್ಬ ಪಾಗಲ್ ಪ್ರೇಮಿ; ಪ್ರೇಯಸಿಗೆ ಮೆಸೇಜ್ ಮಾಡಿದ ಯುವಕನ ಕೈಗಳನ್ನೇ ಕತ್ತರಿಸಿದ ಕಿರಾತಕ!

ನಾನು ಪ್ರೀತಿ ಮಾಡುವ ಹುಡುಗಿಗೆ ನೀನೇಕೆ ಮೆಸೇಜ್ ಮಾಡ್ತೀಯಾ ಎಂದು ಮೆಸೇಜ್ ಕಳಿಸಿದ ಯುವಕನ ಕೈಗಳನ್ನೇ ಕತ್ತರಿಸಿ ವಿಕೃತಿ ಮೆರೆದ ಘಟನೆ ಬೆಂಗಳೂರಿನಲ್ಲಿ ನಡೆದಿದೆ.

Bengaluru triangle love story Basavanagudi Shashank attack to messaging young man sat
Author
First Published May 1, 2024, 3:13 PM IST

ಬೆಂಗಳೂರು (ಮೇ 01): ತಾನು ಪ್ರೀತಿ ಮಾಡುತ್ತಿದ್ದ ಹುಡುಗಿಗೆ ನೀನು ಯಾಕೋ ಮೆಸೇಜ್ ಮಾಡಿದ್ದೀಯ? ಮೆಸೇಜ್ ಮಾಡಲು ನಿನಗೆ ಕೈ ಬೆರಳುಗಳೇ ಇರಬಾರದು ಎಂದು ಕುಡಿದ ಮತ್ತಿನಲ್ಲಿ ಮೆಸೇಜ್ ಮಾಡಿದ ಯುವಕನ ಎರಡೂ ಕೈಗಳ ಬೆರಳುಗಳನ್ನು ಮಚ್ಚಿನಿಂದ ತುಂಡರಿಸಿದ ಹೇಯ ಕೃತ್ಯ ಬೆಂಗಳೂರಿನಲ್ಲಿ ನಡೆದಿದೆ.

ಬೆಂಗಳೂರಿನಲ್ಲಿ ಪ್ರೀತಿ, ಪ್ರೇಮ, ಪ್ರಣಯಕ್ಕೇನೂ ಕಡಿಮೆಯಿಲ್ಲ ಬಿಡಿ. ಒಂದು ಪದವಿ ಮುಗಿಸಿಕೊಂಡು ಕೆಲಸವನ್ನರಿಸಿಕೊಂಡು ಬರುವ ಸಾವಿರಾರು ಯುವಕರು ಇಲ್ಲಿ ಜೀವನ ಕಟ್ಟಿಕೊಳ್ಳುತ್ತಾರೆ. ಆದರೆ, ಕೆಲವರು ಕೆಲಸದ ಜೊತೆಗೆ ಪ್ರೀತಿ-ಪ್ರೇಮ ಅಂತೆಲ್ಲಾ ಮಾಡಿ ಬೆರಳೆಣಿಕೆ ಮಂದಿ ಸಕ್ಸಸ್ ಆದರೆ ಬಹುತೇಕರು ವಿವಿಧ ಕಾರಣಕ್ಕೆ ಫೇಲ್ಯೂರ್ ಆಗುತ್ತಾರೆ. ಆದರೆ, ಪ್ರೀತಿ ಮಾಡುವವರ ನಡುವೆ ಇನ್ನೊಬ್ಬರ ಎಂಟ್ರಿ ಕೊಟ್ಟರೆ ಮಾತ್ರ ಎಲ್ಲಿಲ್ಲದ ಕೋಪ ಬರುವುದಂತೂ ಗ್ಯಾರಂಟಿ. ಇಲ್ಲಿಯೂ ಕೂಡ ಡಯಾಗ್ನಾಸ್ಟಿಕ್ ಸೆಂಟರ್‌ನಲ್ಲಿ ಕೆಲಸ ಮಾಡಿಕೊಂಡಿದ್ದ ಯುವತಿಯ ವಿಚಾರಕ್ಕೆ ಈಗ ಹಲ್ಲೆ ಮಾಡಿರುವ ಘಟನೆ ಶಂಕರಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

ನೇಹಾ ಕೊಲೆ ಆರೋಪಿ ಫಯಾಜ್ ಸಿಐಡಿ ಕಸ್ಟಡಿ ಅಂತ್ಯ: ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ ಸಿಐಡಿ

ಪ್ರಿಯತಮೆ ಜೊತೆ ಗೆಳತನ‌ ಬೆಳೆಸಿದ್ದಕ್ಕೆ ಯುವಕನ ಮೇಲೆ ಅಟ್ಟಹಾಸ ಮೆರೆದಿರುವ ಘಟನೆ ಬಸವನಗುಡಿ ಬುಲ್ ಟೆಂಬಲ್ ರಸ್ತೆಯಲ್ಲಿರುವ ಪುಲ್ವಾಡಿ ಫ್ಲವರ್ ಶಾಪ್ ನಲ್ಲಿ ನಡೆದಿದೆ. ಏಪ್ರಿಲ್ 28 ರಂದು ರಾತ್ರಿ 8.30ಕ್ಕೆ ಘಟನೆ ನಡೆದಿದ್ದು, ಪಾಗಲ್‌ ಪ್ರೇಮಿ ಲಾಂಗು, ಮಚ್ಚಿನಿಂದ ಹಲ್ಲೆ ಮಾಡಿದ್ದಾನೆ. ಈ ವೇಳೆ ಬಲಗೈನ ಹೆಬ್ಬೆರಳು ಹಾಗೂ ಎಡಗೈನ ಮುಂಗೈಯನ್ನು ಕತ್ತರಿಸಿದ್ದಾರೆ. ಹೀಗೆ ಹಲ್ಲೆ ಮಾಡಿದ ಯುವಕರನ್ನು ಶಶಾಂಕ್ ಹಾಗೂ ಹಾಗೂ ಚಂದನ್ ಎಂದು ಗುರುತಿಸಲಾಗಿದೆ. ಇವರಿಂದ ಹಲ್ಲೆಗೊಳಗಾದ ಯುವಕನನ್ನು ಬಿ.ಕಾಂ.ಪದವೀಧರ ಹರ್ಷಿತ್ ಎಂಬಾತನಾಗಿದ್ದಾನೆ.

ಬಿ.ಕಾಂ ಮುಗಿಸಿದ್ದ ಹರ್ಷಿತ್ ಯಾವುದೇ ಕೆಲಸಕ್ಕೆ ಹೋಗುತ್ತಿರಲಿಲ್ಲ. ಆದರೆ, ತಂದೆಯ ಫ್ಲವರ್ ಡೆಕೊರೇಷನ್ ಅಂಗಡಿಯಲ್ಲೆ ಕೆಲಸ ಮಾಡಿಕೊಂಡಿದ್ದನು. ಆದರೆ, ಇದೇ ಕಟ್ಟಡದಲ್ಲಿ ಒಂದು ಡಯೋಗ್ನಾಸ್ಟಿಕ್ ಸೆಂಟರ್‌ನಲ್ಲಿ ಓರ್ವ ಯುವತಿ ಕೂಡ ಕೆಲಸ ಮಾಡಿಕೊಂಡಿದ್ದಳು. ಈ ಯುವತಿ ಹಲ್ಲೆ ಮಾಡಿದ ಶಶಾಂಕನ ಪ್ರೇಯಸಿಯಾಗಿದ್ದಳು. ಡಯಾಗ್ನೋಸ್ಟಿಕ್‌ ಸೆಂಟರ್‌ನಿಂದ ಚಿಲ್ಲರೆ ಕೇಳಲು ಹೋಗಿ‌-ಬರುತ್ತಿದ್ದ ಯುವತಿ ಮತ್ತು ಹರ್ಷಿತ್ ಮಧ್ಯೆ ಗೆಳೆತನ ಬೆಳೆದಿದೆ. ಈ ಗೆಳೆತನ ಮೊಬೈಲ್ ನಂಬರ್ ಎಕ್ಸ್ ಚೆಂಜ್ ಮಾಡಿಕೊಮಡು ಚಾಟ್ ಮಾಡುವ ಹಂತಕ್ಕೆ ಬಂದಿದೆ. 

ಇನ್ನು ಹರ್ಷಿತ್ ಕೂಡ ಯುವತಿಯೊಂದಿಗೆ ಚಾಟಿಂಗ್ ಮಾಡಿದ್ದಾನೆ. ಆರೋಪಿ ಶಶಾಂಕನನ್ನು ಪ್ರೀತಿ ಮಾಡುತ್ತಿದ್ದ ಯುವತಿ ತನ್ನನ್ನು ಅವೈಡ್ ಮಾಡುತ್ತಿದ್ದಾಳೆ ಎಂದು ಅನುಮಾನ ಬಂದಿದೆ. ಹೀಗಾಗಿ, ಯುವತಿಯ ಮೊಬೈಲ್ ಅನ್ನು ಪರಿಶೀಲನೆ ಮಾಡಿದ್ದಾನೆ. ಆಗ ಹರ್ಷಿತ್‌ನ ಎಂಬ ಹೆಸರಿನ ಯುವಕನಿಂದ ಹಲವು ಮೆಸೇಜ್ ಚಾಟ್ ಮಾಡಿರುವುದು ಕಂಡುಬಂದಿದೆ. ಇದರಿಂದ ತೀವ್ರ ಕೋಪಗೊಂಡ ಶಶಾಂಕ್ ಮೆಸೇಜ್ ಮಾಡಿದ ಹರ್ಷಿತ್‌ಗೆ ಪಾಠ ಕಲಿಸಬೇಕು ಎಂದುಕೊಂಡಿದ್ದನು. ಇದಕ್ಕೆ ತನ್ನ ಸ್ನೇಹಿತ ಚಂದನ್‌ನೊಂದಿಗೆ ಕುಳಿತು ಹಲ್ಲೆ ಮಾಡಲಿ ಸ್ಕೆಚ್ ಹಾಕಿದ್ದಾನೆ. 

ಪ್ರಜ್ವಲ್ ರೇವಣ್ಣನ ಅಶ್ಲೀಲ ವಿಡಿಯೋ ನಾನೂ ನೋಡಿದ್ದೇನೆ, ತಾಯಿ ವಯಸ್ಸಿನವರೊಂದಿಗೆ ಅಸಹ್ಯ ನೋಡೋಕಾಗ್ಲಿಲ್ಲ; ಡಿ.ಕೆ. ಸುರೇಶ್

ನಂತರ, ಇಬ್ಬರೂ ಸೇರಿ ಮದ್ಯ ಸೇವನೆ ಮಾಡಿ, ಹರ್ಷಿತ್ ಕೆಲಸ ಮಾಡುತ್ತಿದ್ದ ಅಂಗಡಿಗೆ ತೆರಳಿದ್ದಾನೆ. ಅಲ್ಲಿ ಅಂಗಡಿಯೊಳಗೆ ನುಗ್ಗಿ ಲಾಂಗು, ಮಚ್ಚಿನಿಂದ ಹಲ್ಲೆ ಮಾಡಿದ್ದಾರೆ. ನನ್ನ ಹುಡುಗಿಗೆ ಮೆಸೇಜ್ ಮಾಡಿದ ನಿನ್ನ ಇರಬಾರದು ಎಂದು ಎಡಗೈಯನ್ನು ಕತ್ತರಿಸಿದ್ದಾನೆ. ನಂತರ, ಬಲೈಗ ಹೆಬ್ಬೆರಳನ್ನು ತುಂಡರಿಸಿದ್ದಾನೆ. ಇಬ್ಬರು ಸೇರಿ ಹಲ್ಲೆ ಮಾಡುವುದರಿಂದ ತಪ್ಪಿಸಿಕೊಂಡ ಹರ್ಷಿತ್ ಕಟ್ಟಡದೊಳಗಿದ್ದ ಫ್ಲವರ್‌ ಸ್ಟಾಲ್‌ನಿಂದ ಹೊರಬಂದು ಓಡಿ ತಪ್ಪಿಸಿಕೊಂಡಿದ್ದಾನೆ. ನಂತರ, ಸ್ಥಳೀಯರು ಆತನನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ.

Latest Videos
Follow Us:
Download App:
  • android
  • ios