ರಷ್ಯಾ ಜೊತೆಗಿನ ಭಾರತದ ವ್ಯಾಪಾರ ಒಪ್ಪಂದಗಳು ಮತ್ತು ವ್ಯವಹಾರಗಳು ಟ್ರಂಪ್‌ಗೆ ಸಿಟ್ಟು ತರಿಸಿವೆ.
ದೆಹಲಿ (ಜುಲೈ.31): ಭಾರತದ ಉತ್ಪನ್ನಗಳ ಮೇಲೆ ಹೆಚ್ಚುವರಿಯಾಗಿ ಶೇ.25 ರಷ್ಟು ತೆರಿಗೆ ವಿಧಿಸುವುದಾಗಿ ಘೋಷಿಸಿದ ನಂತರ, ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತೊಮ್ಮೆ ಅಪಹಾಸ್ಯ ಮಾಡಿದ್ದಾರೆ. ಭಾರತ ರಷ್ಯಾಕ್ಕೆ ಹತ್ತಿರವಾಗುವುದರಲ್ಲಿ ಅಮೆರಿಕಕ್ಕೆ ಯಾವುದೇ ಸಮಸ್ಯೆ ಇಲ್ಲ ಮತ್ತು ಎರಡೂ ದೇಶಗಳು ತಮ್ಮ ಮುರಿದ ಆರ್ಥಿಕತೆಯೊಂದಿಗೆ ಮತ್ತೆ ಕುಸಿಯಬಹುದು ಎಂದು ಟ್ರಂಪ್ ಲೇವಡಿ ಮಾಡಿದ್ದಾರೆ. ಭಾರತೀಯ ಉತ್ಪನ್ನಗಳ ಆಮದಿನ ಮೇಲೆ ಹೆಚ್ಚುವರಿಯಾಗಿ ಶೇ.25 ರಷ್ಟು ತೆರಿಗೆ ವಿಧಿಸುವುದಾಗಿ ಘೋಷಿಸಿದ ಒಂದು ದಿನದ ನಂತರ ಟ್ರಂಪ್ ಅವರ ಹೇಳಿಕೆ ಬಂದಿದೆ. ಟ್ರಂಪ್ ಅವರ ಸಾಮಾಜಿಕ ಮಾಧ್ಯಮ ವೇದಿಕೆ ಟ್ರುತ್ ಸೋಶಿಯಲ್‌ನಲ್ಲಿ ಹಂಚಿಕೊಂಡ ಪೋಸ್ಟ್ ಮೂಲಕ ಹೇಳಿದ್ದಾರೆ.
'ಭಾರತ ರಷ್ಯಾ ಜೊತೆ ಏನು ಮಾಡುತ್ತದೆ ಎಂಬುದು ಅಮೆರಿಕಕ್ಕೆ ಸಮಸ್ಯೆಯಲ್ಲ. ರಷ್ಯಾ ಮತ್ತು ಭಾರತ ತಮ್ಮ ಕುಸಿದ ಆರ್ಥಿಕತೆಗಳೊಂದಿಗೆ ಇನ್ನಷ್ಟು ಮುಳುಗಲಿದೆ. ಅಮೆರಿಕ ಭಾರತದೊಂದಿಗೆ ಬಹಳ ಕಡಿಮೆ ವ್ಯಾಪಾರ ಮಾಡುತ್ತದೆ. ಆದರೆ ಭಾರತವು ಅಮೆರಿಕದ ಉತ್ಪನ್ನಗಳ ಮೇಲೆ ಅತಿ ಹೆಚ್ಚು ಸುಂಕಗಳನ್ನು ವಿಧಿಸುತ್ತದೆ. ಭಾರತವು ವಿಶ್ವದಲ್ಲೇ ಅತಿ ಹೆಚ್ಚು ಸುಂಕಗಳನ್ನು ಹೊಂದಿದೆ. ಅದೇ ರೀತಿ, ಅಮೆರಿಕವು ರಷ್ಯಾದೊಂದಿಗೆ ಹೆಚ್ಚು ವ್ಯಾಪಾರ ಮಾಡುವುದಿಲ್ಲ ಎಂದು ಟ್ರಂಪ್ ಹೇಳಿದ್ದಾರೆ.
ನಿನ್ನೆ ಭಾರತೀಯ ಆರ್ಥಿಕತೆಗೆ ಹಿನ್ನಡೆಯಾಗುವಂತೆ ಅಮೆರಿಕ ನಿರ್ಣಾಯಕ ಘೋಷಣೆ ಮಾಡಿತ್ತು. ಭಾರತೀಯ ಉತ್ಪನ್ನಗಳ ಆಮದಿನ ಮೇಲೆ ಶೇ.25 ತೆರಿಗೆ ಮತ್ತು ರಷ್ಯಾದಿಂದ ತೈಲ ಮತ್ತು ಶಸ್ತ್ರಾಸ್ತ್ರಗಳನ್ನು ಖರೀದಿಸಿದ್ದಕ್ಕೆ ಅನಿರ್ದಿಷ್ಟ ದಂಡವನ್ನು ಅಮೆರಿಕ ವಿಧಿಸಿದೆ. ಆಗಸ್ಟ್ 1 ರಿಂದ ಹೆಚ್ಚುವರಿ ತೆರಿಗೆ ವಿಧಿಸುವುದಾಗಿ ಟ್ರಂಪ್ ಈ ಹಿಂದೆಯೇ ಘೋಷಿಸಿದ್ದರು. ಭಾರತದ ಜೊತೆ ವ್ಯಾಪಾರ ಒಪ್ಪಂದ ಮಾಡಿಕೊಳ್ಳಲು ಸಾಧ್ಯವಾಗದ ನಂತರ ಹೆಚ್ಚುವರಿ ತೆರಿಗೆ ಘೋಷಣೆ ಮಾಡಲಾಗಿದೆ.
ರಷ್ಯಾ ಜೊತೆಗಿನ ವ್ಯಾಪಾರ ಒಪ್ಪಂದಗಳು ಮತ್ತು ವ್ಯವಹಾರಗಳು ಟ್ರಂಪ್‌ಗೆ ಸಿಟ್ಟು ತರಿಸಿವೆ. ಅಮೆರಿಕದ ಶೇ.25 ಹೆಚ್ಚುವರಿ ತೆರಿಗೆಯ ಪರಿಣಾಮವನ್ನು ಪರಿಶೀಲಿಸಲಾಗುತ್ತಿದೆ ಮತ್ತು ಅಮೆರಿಕದ ಜೊತೆಗಿನ ವ್ಯಾಪಾರ ಒಪ್ಪಂದದ ಮಾತುಕತೆಗಳು ಮುಂದುವರಿಯುತ್ತಿವೆ ಎಂದು ಭಾರತ ತಿಳಿಸಿದೆ. ಅದೇ ಸಮಯದಲ್ಲಿ, ಟ್ರಂಪ್ ಘೋಷಣೆಯನ್ನು ಭಾರತದಲ್ಲಿ ಅಸ್ತ್ರವನ್ನಾಗಿ ಮಾಡಿಕೊಳ್ಳಲು ವಿರೋಧ ಪಕ್ಷಗಳು ಯತ್ನಿಸುತ್ತಿವೆ
