Asianet Suvarna News Asianet Suvarna News

ಹಿಮಾಚಲದ ಕಾಂಗ್ರೆಸ್‌ ಸರ್ಕಾರ ಕಾಪಾಡಿದ ಟ್ರಬಲ್ ಶೂಟರ್ ಡಿಕೆಶಿ!

ಬಿಕ್ಕಟ್ಟು ನಿರ್ವಹಣೆಗಾಗಿ ಹೈಕಮಾಂಡ್‌ ಆದೇಶದ ಮೇರೆಗೆ ಶಿಮ್ಲಾಕ್ಕೆ ಆಗಮಿಸಿ ಪಟಾಪಟ್‌ ಕಾರ್ಯತಂತ್ರ ರೂಪಿಸಿದ್ದ ಟ್ರಬಲ್‌ ಶೂಟರ್‌ ಖ್ಯಾತಿಯ ಕರ್ನಾಟಕದ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಅವರ ರಣತಂತ್ರ ಫಲಿಸಿದ್ದು ಅವರು ಮತ್ತೊಮ್ಮೆ ಪಕ್ಷದ ಪಾಲಿಗೆ ಆಪತ್ಭಾಂದವನಾಗಿ ಹೊರಹೊಮ್ಮಿದ್ದಾರೆ. ಆದರೆ ಅನರ್ಹತೆ ಪ್ರಶ್ನಿಸಿ 6 ಶಾಸಕರು ಕೋರ್ಟ್‌ಗೆ ಹೋಗುವ ಸಾಧ್ಯತೆ ಇದೆ.

trouble shooter Deputy Chief Minister of Karnataka D.K. Shivakumar saved the Himachal Pradesh Congress government akb
Author
First Published Mar 1, 2024, 6:50 AM IST

ಶಿಮ್ಲಾ: ಇತ್ತೀಚಿನ ರಾಜ್ಯಸಭಾ ಚುನಾವಣೆ ವೇಳೆ ಬಂಡೆದ್ದು ಬಿಜೆಪಿ ಅಭ್ಯರ್ಥಿಗೆ ಮತಹಾಕಿದ್ದ 6 ಕಾಂಗ್ರೆಸ್‌ ಶಾಸಕರನ್ನು ಹಿಮಾಚಲ ಪ್ರದೇಶದ ವಿಧಾನಸಭೆಯ ಸ್ಪೀಕರ್‌ ಗುರುವಾರ ಅನರ್ಹ ಮಾಡಿದ್ದಾರೆ. ಇದರೊಂದಿಗೆ ರಾಜ್ಯ ವಿಧಾನಸಭೆಯಲ್ಲಿ ಬಹುಮತ ಕಳೆದುಕೊಂಡಿದ್ದ ಕಾಂಗ್ರೆಸ್‌, ಮರಳಿ ಬಹುಮತ ಪಡೆದಿದೆ. ಹೀಗಾಗಿ ತಕ್ಷಣಕ್ಕೆ ಪತನದ ಭೀತಿಯಿಂದ ಮುಖ್ಯಮಂತ್ರಿ ಸುಖವಿಂದರ್‌ ಸಿಂಗ್‌ ಸುಖು ನೇತೃತ್ವದ ಕಾಂಗ್ರೆಸ್‌ ಸರ್ಕಾರ ಬಚಾವ್‌ ಆಗಿದೆ.

ಇದರೊಂದಿಗೆ ಬಿಕ್ಕಟ್ಟು ನಿರ್ವಹಣೆಗಾಗಿ ಹೈಕಮಾಂಡ್‌ ಆದೇಶದ ಮೇರೆಗೆ ಶಿಮ್ಲಾಕ್ಕೆ ಆಗಮಿಸಿ ಪಟಾಪಟ್‌ ಕಾರ್ಯತಂತ್ರ ರೂಪಿಸಿದ್ದ ಟ್ರಬಲ್‌ ಶೂಟರ್‌ ಖ್ಯಾತಿಯ ಕರ್ನಾಟಕದ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಅವರ ರಣತಂತ್ರ ಫಲಿಸಿದ್ದು ಅವರು ಮತ್ತೊಮ್ಮೆ ಪಕ್ಷದ ಪಾಲಿಗೆ ಆಪತ್ಭಾಂದವನಾಗಿ ಹೊರಹೊಮ್ಮಿದ್ದಾರೆ. ಆದರೆ ಅನರ್ಹತೆ ಪ್ರಶ್ನಿಸಿ 6 ಶಾಸಕರು ಕೋರ್ಟ್‌ಗೆ ಹೋಗುವ ಸಾಧ್ಯತೆ ಇದೆ.

ಸರ್ಕಾರ ಬೀಳುವ ಭೀತಿಯ ನಡುವೆ 15 ಬಿಜೆಪಿ ಶಾಸಕರನ್ನು ಸದನದಿಂದ ಉಚ್ಚಾಟಿಸಿದ ಸ್ಪೀಕರ್

6 ಶಾಸಕರು ಅನರ್ಹ:

ರಾಜ್ಯಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ವಿಪ್‌ ಜಾರಿ ಆಗಿದ್ದರೂ 6 ಶಾಸಕರು ಬಿಜೆಪಿಗೆ ಮತ ಹಾಕಿದ್ದರು ಮತ್ತು ಬಜೆಟ್‌ ಮೇಲಿನ ಮತದಾನದ ವೇಳೆ ಗೈರಾಗಿದ್ದರು. ಹೀಗಾಗಿ ಪಕ್ಷದ ವಿಪ್‌ ಉಲ್ಲಂಘಿಸಿದ ಕಾರಣ ನೀಡಿ ಕಾಂಗ್ರೆಸ್‌ನ 6 ಶಾಸಕರಾದ ರಾಜಿಂದರ್‌ ರಾಣಾ, ಸುಧೀರ್ ಶರ್ಮಾ, ಇಂದರ್‌ ದತ್‌ ಲಖನ್‌ಪಾಲ್‌, ದೇವಿಂದರ್‌ ಕುಮಾರ್‌ ಭುಟ್ಟೋ, ರವಿ ಠಾಕೂರ್‌ ಮತ್ತು ಚೇತನ್ಯಾ ಶರ್ಮಾ ಅವರನ್ನು ಸ್ಪೀಕರ್ ಪಠಾನಿಯಾ ಅನರ್ಹ ಮಾಡಿ ಆದೇಶ ಹೊರಡಿಸಿದ್ದಾರೆ.

ಇದರೊಂದಿಗೆ ವಿಧಾನಸಭೆಯಲ್ಲಿ ಕಾಂಗ್ರೆಸ್‌ನ ಸದಸ್ಯ ಬಲ 34ಕ್ಕೆ ಇಳಿದಿದೆ. ಆದರೆ 6 ಶಾಸಕರ ಅನರ್ಹತೆ ಕಾರಣ ಸದನದ ಒಟ್ಟಾರೆ ಸದಸ್ಯ ಬಲ 68ರಿಂದ 62ಕ್ಕೆ ಇಳಿದಿದ್ದು, ಕಾಂಗ್ರೆಸ್‌ಗೆ ವರದಾನವಾಗಿದೆ. ಬಹುಮತಕ್ಕೆ 32 ಸೀಟು ಈಗ ಸಾಕು. ಹೀಗಾಗಿ ವಿಧಾನಸಭೆಯಲ್ಲಿ 34 ಸದಸ್ಯರೊಂದಿಗೆ ಕಾಂಗ್ರೆಸ್‌ ಮರಳಿ ಬಹುಮತ ಹೊಂದಿದಂತಾಗಿದೆ.

ಇದಕ್ಕೂ ಮೊದಲೂ 68 ಸದಸ್ಯಬಲದ ವಿಧಾನಸಭೆಯಲ್ಲಿ ಕಾಂಗ್ರೆಸ್‌ 40 ಶಾಸಕರು ಇದ್ದರು. ಮೂವರು ಪಕ್ಷೇತರ ಬೆಂಬಲ ಇತ್ತು. ಬಿಜೆಪಿ 25 ಸದಸ್ಯರನ್ನು ಹೊಂದಿತ್ತು. ಆದರೆ ರಾಜ್ಯಸಭಾ ಚುನಾವಣೆ ವೇಳೆ ಕಾಂಗ್ರೆಸ್‌ನ 6 ಮತ್ತು 3 ಪಕ್ಷೇತರರು ಬಿಜೆಪಿ ಬೆಂಬಲಿಸಿದ್ದ ಕಾರಣ, ಬಹುಮತಕ್ಕೆ ಅಗತ್ಯವಾದ 35 ಸ್ಥಾನಬಲ ಇಲ್ಲದೇ ಸರ್ಕಾರ ಪತನದ ಭೀತಿ ಎದುರಿಸುವಂತಾಗಿತ್ತು.

ಬೆಳಗ್ಗೆ ಡಿಕೆಶಿ ಸಭೆ, ನಂತರ ಅನರ್ಹತೆ:

ಈ ನಡುವೆ ಮುಖ್ಯಮಂತ್ರಿ ಸುಖು ಗುರುವಾರ ಬೆಳಗ್ಗೆ ಪಕ್ಷದ ಶಾಸಕರೊಂದಿಗೆ ಉಪಹಾರ ಕೂಟ ನಡೆಸಿ ಒಗ್ಗಟ್ಟಿನ ಪ್ರದರ್ಶನ ಮಾಡಿದರು. ಈ ಸಭೆಯಲ್ಲಿ ಡಿ.ಕೆ.ಶಿವಕುಮಾರ್‌ ಕೂಡಾ ಹಾಜರಿದ್ದು, ಸರ್ಕಾರಕ್ಕೆ ಯಾವುದೇ ತೊಂದರೆ ಇಲ್ಲ ಎಂಬ ಭರವಸೆ ನೀಡಿದ್ದರು. ಬಳಿಕ ಶಾಸಕರ ಅನರ್ಹತೆ ಪ್ರಕಟವಾಯಿತು.

ಕಾಂಗ್ರೆಸ್‌ ಶಾಸಕರ ಅಡ್ಡಮತದಾನ, ಹಿಮಾಚಲ ಪ್ರದೇಶ ರಾಜ್ಯಸಭೆ ಚುನಾವಣೆಯಲ್ಲಿ ಅಭಿಷೇಕ್‌ ಮನು ಸಿಂಘ್ವಿಗೆ ಸೋಲು!

ಸರ್ಕಾರ ಕಾಪಾಡಿದ ಡಿಕೆಶಿ

ಕಾಂಗ್ರೆಸ್‌ ಆಡಳಿತದ ರಾಜ್ಯಗಳು ಅಪಾಯಕ್ಕೆ ಸಿಕ್ಕಾಗಲೆಲ್ಲಾ ಅದನ್ನು ಕಾಪಾಡುವ ಖ್ಯಾತಿ ಹೊಂದಿರುವ ‘ಟ್ರಬಲ್‌ ಶೂಟರ್‌ ಖ್ಯಾತಿಯ ಡಿ.ಕೆ.ಶಿವಕುಮಾರ್‌ ಹಿಮಾಚಲದಲ್ಲೂ ತಮ್ಮ ಸಾಮರ್ಥ್ಯ ಸಾಬೀತುಪಡಿಸಿದ್ದಾರೆ. ರಾಜ್ಯಸಭಾ ಚುನಾವಣೆ ಬಳಿ ಪಕ್ಷ ಸಂಕಷ್ಟಕ್ಕೆ ಸಿಕ್ಕಿಹಾಕಿಕೊಂಡಾಗ ರಾತ್ರೋರಾತ್ರಿ ಡಿಕೆಶಿಗೆ ಬುಲಾವ್‌ ನೀಡಲಾಗಿತ್ತು. ಹೀಗೆ ಅಲ್ಲಿಗೆ ತೆರಳಿದ ಡಿಕೆಶಿ ಮೊದಲಿಗೆ, ಹೊಸದಾಗಿ ಬಂಡೆದ್ದು ರಾಜೀನಾಮೆ ನೀಡಿದ್ದ ಸಚಿವ ವಿಕ್ರಮಾದಿತ್ಯ ಸಿಂಗ್‌ ಅವರ ಮನವೊಲಿಸಿ ರಾಜೀನಾಮೆ ಹಿಂಪಡೆಸುವಲ್ಲಿ ಯಶಸ್ವಿಯಾಗಿದ್ದರು. ಈ ಮೂಲಕ ಸರ್ಕಾರಕ್ಕೆ ಮೊದಲ ಗಂಡಾಂತರ ತಪ್ಪಿಸಿದರು. ಜೊತೆಗೆ ಇದೀಗ 6 ಶಾಸಕರನ್ನು ಅನರ್ಹ ಮಾಡುವ ಮೂಲಕ ಸದನದ ಬಲವನ್ನೇ ಕುಗ್ಗಿಸಿ ಸರ್ಕಾರಕ್ಕೆ ಬಹುಮತ ನೀಡಿದ್ದಾರೆ.

 

Follow Us:
Download App:
  • android
  • ios