ನಟಿ ಜಯಪ್ರದಾಗೆ ಬಂಧನ ಭೀತಿ: ಮಾರ್ಚ್‌ 6ರೊಳಗೆ ಬಂಧಿಸಿ ಕೋರ್ಟ್‌ಗೆ ಹಾಜರುಪಡಿಸಲು ಸೂಚನೆ

ಸಮಾಜವಾದಿ ಪಕ್ಷದ ಮಾಜಿ ಸಂಸದೆ ಹಾಗೂ ನಟಿ ಜಯಪ್ರದಾ ನಾಪತ್ತೆಯಾಗಿದ್ದಾರೆ ಎಂದು ಘೋಷಿಸಿರುವ ನ್ಯಾಯಾಲಯ ಜಯಪ್ರದಾ ಬಂಧನಕ್ಕೆ ಆದೇಶ ನೀಡಿದೆ. 

Trouble again for actress Samajwadi Party Ex MP Jayaprada UP court notice for arrest of former MP akb

ಲಕ್ನೋ: ಸಮಾಜವಾದಿ ಪಕ್ಷದ ಮಾಜಿ ಸಂಸದೆ ಹಾಗೂ ನಟಿ ಜಯಪ್ರದಾ ನಾಪತ್ತೆಯಾಗಿದ್ದಾರೆ ಎಂದು ಘೋಷಿಸಿರುವ ನ್ಯಾಯಾಲಯ ಜಯಪ್ರದಾ ಬಂಧನಕ್ಕೆ ಆದೇಶ ನೀಡಿದೆ. ನಟಿ ಜಯಪ್ರದಾ ವಿರುದ್ಧ 2019ರ ಲೋಕಸಭಾ ಚುನಾವಣೆ ವೇಳೆ ನೀತಿ ಸಂಹಿತೆ ಉಲ್ಲಂಘಿಸಿದ್ದಕ್ಕೆ ಸಂಬಂಧಿಸಿದಂತೆ 2 ಪ್ರಕರಣಗಳು ದಾಖಲಾಗಿದೆ. ಉತ್ತರಪ್ರದೇಶದ ರಾಂಪುರ ಲೋಕಸಭಾ ಕ್ಷೇತ್ರದ ಮಾಜಿ ಸಂಸದೆಯಾಗಿರುವ ಜಯಪ್ರದಾ ಅವರನ್ನು ಮಾರ್ಚ್ 6ರ ಒಳಗಾಗಿ ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸುವಂತೆ ಪೊಲೀಸರಿಗೆ ಉತ್ತರ ಪ್ರದೇಶದ ಕೋರ್ಟ್ ಆದೇಶಿಸಿದೆ. 

ಹಿರಿಯ ಪ್ರಾಸಿಕ್ಯೂಷನ್ ಅಧಿಕಾರಿ ಅಮರನಾಥ್ ತಿವಾರಿ ಪ್ರಕಾರ, 2019 ರ ಲೋಕಸಭೆ ಚುನಾವಣೆಯ ಸಂದರ್ಭದಲ್ಲಿ ಮಾದರಿ ನೀತಿ ಸಂಹಿತೆ ಉಲ್ಲಂಘಿಸಿದ ಆರೋಪದ ಮೇಲೆ ರಾಂಪುರದ ಮಾಜಿ ಸಂಸದೆ ಜಯಪ್ರದಾ ವಿರುದ್ಧ ಉತ್ತರಪ್ರದೇಶದ ಕೆಮಾರಿ ಮತ್ತು ಸ್ವರ್ ಪೊಲೀಸ್ ಠಾಣೆಗಳಲ್ಲಿ ಎರಡು ಪ್ರಕರಣಗಳನ್ನು ದಾಖಲಿಸಲಾಗಿದೆ.

2019ರ ಚುನಾವಣೆ ವೇಳ ಜಯಪ್ರದಾ ಅವರು ರಾಂಪುರ ಕ್ಷೇತ್ರದಿಂದ ಬಿಜೆಪಿ ಸಂಸದೆಯಾಗಿ ಸ್ಪರ್ಧಿಸಿದ್ದರು. ಆದರೆ ಸಮಾಜವಾದಿ ಪಕ್ಷದ ಅಭ್ಯರ್ಥಿ ಅಜಂ ಖಾನ್ ವಿರುದ್ಧ ಸೋತಿದ್ದರು. ಇದಕ್ಕೂ ಮೊದಲು ಸಮಾಜವಾದಿ ಪಾರ್ಟಿಯಿಂದ 2004 ಹಾಗೂ 2009ರಲ್ಲಿ ಸ್ಪರ್ಧಿಸಿ ಗೆದ್ದಿದ್ದರು. ನಂತರ ಅವರನ್ನು ಸಮಾಜವಾದಿ ಪಕ್ಷ ಅಮಾನತು ಮಾಡಿತ್ತು. 

ಬಾಲಿವುಡ್‌ನ ಟಾಪ್‌ ಹೀರೋಸ್ ಜೊತೆ ರೋಮ್ಯಾನ್ಸ್ ಮಾಡಿದ್ದ ನಟಿ, ಅಪ್ಸರೆಯಂತಿದ್ದ ಚೆಲುವೆ ಈಗ ಏಕಾಂಗಿ!

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಉತ್ತರಪ್ರದೇಶದ ವಿಶೇಷ ಎಂಎಲ್‌ಎ, ಎಂಪಿ ನ್ಯಾಯಾಲಯವೂ ಹಲವು ಬಾರಿ ಜಯಪ್ರದಾಗೆ ನೋಟಿಸ್ ನೀಡಿದ್ದರೂ ಜಯಪ್ರದಾ ಇಲ್ಲಿಯವರೆಗೆ ನ್ಯಾಯಾಲಯಕ್ಕೆ ಹಾಜರಾಗಿಲ್ಲ, ಈ ಹಿನ್ನೆಲೆಯಲ್ಲಿ 7 ಬಾರಿ ಆಕೆಯ ವಿರುದ್ಧ ಜಾಮೀನು ರಹಿತ ವಾರೆಂಟ್ ನೀಡಲಾಗಿದೆ. ಆದರೆ ಪೊಲೀಸರು ಮಾತ್ರ ಆಕೆಯನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸಲು ಸಾಧ್ಯವಾಗಿಲ್ಲ.

ಈ ವಿಚಾರಕ್ಕೆ ಸಂಬಂಧಿಸಿದಂತೆ ಪೊಲೀಸರು ನ್ಯಾಯಾಲಯಕ್ಕೆ ಪ್ರತಿಕ್ರಿಯೆ ನೀಡಿದ್ದು, ಜಯಾಪ್ರದಾ ಬಂಧನ ತಪ್ಪಿಸಲು ಪ್ರಯತ್ನಿಸುತ್ತಿದ್ದು, ಆಕೆಯ ಎಲ್ಲಾ ಮೊಬೈಲ್ ಫೋನ್ ಸ್ವಿಚ್‌ಆಫ್ ಬರುತ್ತಿದೆ ಎಂದು ನ್ಯಾಯಾಲಯಕ್ಕೆ ಮಾಹಿತಿ ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ಜಯಾಪ್ರದಾ ವಿರುದ್ಧ ಕಠಿಣ ಕ್ರಮಕ್ಕೆ ಮುಂದಾದ ನ್ಯಾಯಾಧೀಶ ಶೋಭೀತ್ ಬನ್ಸಾಲ್ ಆಕೆ ಭೂಗತರಾಗಿದ್ದಾರೆ ಎಂದು ಘೋಷಿಸಿದ್ದಾರೆ ಎಂದು ತಿವಾರಿ ಹೇಳಿದ್ದಾರೆ.

ಇನ್‌ಕಮ್‌ ಟ್ಯಾಕ್ಸ್‌ ಸಮಸ್ಯೆಗೆ ಪರಿಹಾರ ಹುಡುಕಲು ಹೋಗಿ ಮೋಸದ ಬಲೆಗೆ ಬಿದ್ರಾ ನಟಿ ಜಯಪ್ರದಾ..!?

ಕೋರ್ಟ್‌ ಆದೇಶದ ಹಿನ್ನೆಲೆಯಲ್ಲಿ ರಾಂಪುರ ಎಸ್‌ಪಿಯವರು ಸರ್ಕಲ್ ಇನ್ಸ್‌ಪೆಕ್ಟರ್ ನಾಯಕತ್ವದಲ್ಲಿ ತಂಡವೊಂದನ್ನು ರಚಿಸಿ  ಮಾರ್ಚ್‌ 6ರ ಒಳಗೆ ಜಯಪ್ರದಾರನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಲು ಸೂಚಿಸಲಾಗಿದೆ.

Latest Videos
Follow Us:
Download App:
  • android
  • ios