ಫಿಜಿ ಪ್ರವಾಸದಲ್ಲಿ ದುಬಾರಿ ಬಟ್ಟೆಗಳನ್ನು ಧರಿಸಿದ್ದಕ್ಕಾಗಿ ಬಾಗೇಶ್ವರ ಬಾಬಾ ಟ್ರೋಲ್‌ಗೆ ಒಳಗಾಗಿದ್ದಾರೆ.

28 ವರ್ಷದ ಭಾರತೀಯ ಆಧ್ಯಾತ್ಮಿಕ ಗುರು ಆಚಾರ್ಯ ಧೀರೇಂದ್ರ ಕೃಷ್ಣ ಶಾಸ್ತ್ರಿ, ಅಲಿಯಾಸ್‌ ಬಾಗೇಶ್ವರ ಧಾಮ್ ಸರ್ಕಾರ್ ಅಲಿಯಾಸ್‌ ಬಾಗೇಶ್ವರ ಬಾಬಾ, ಭಾರತದಲ್ಲಿ ಅತ್ಯಂತ ವೈರಲ್ ಆಗಿರುವ ಬಾಬಾಗಳಲ್ಲಿ ಒಬ್ಬರು. ಅವರು ಇತ್ತೀಚೆಗೆ ಫಿಜಿಗೆ ಪ್ರವಾಸ ಹೋಗಿದ್ದು, ಈ ವೇಳೆ ಅವರು ಐಷಾರಾಮಿ ಗುಸ್ಸಿ ಬ್ರಾಂಡ್‌ನ ಕನ್ನಡಕ ಹಾಗೂ 60 ಸಾವಿರ ಮೌಲ್ಯದ ಜಾಕೆಟ್ ಧರಿಸಿದ್ದರೆಂದು ವರದಿಯಾಗಿತ್ತು. ಇದಾದ ನಂತರ ಸಾಮಾಜಿಕ ಜಾಲತಾಣದಲ್ಲಿ ಅವರನ್ನು ಭಾರಿ ಪ್ರಮಾಣದಲ್ಲಿ ಟ್ರೋಲ್ ಮಾಡಲಾಗುತ್ತಿದೆ. ಟ್ವಿಟ್ಟರ್ ಸೇರಿದಂತೆ ಭಾರತದ ಇತರ ಸಾಮಾಜಿಕ ಜಾಲತಾಣಗಳ ತುಂಬೆಲ್ಲಾ ಅವರನ್ನು ಕೆಲವರು ಅವರ ಐಷಾರಾಮಿ ಲೈಫ್‌ಸ್ಟೈಲ್‌ ಕಾರಣಕ್ಕೆ ಟ್ರೋಲ್‌ ಮಾಡಲಾಗುತ್ತಿದೆ. ಈ ಟ್ರೋಲ್‌ಗೆ ಬಾಬಾ ಏನು ತಲೆಕೆಡಿಸಿಕೊಂಡಿಲ್ಲ, ಜೊತೆಗೆ ಅವರು ಈ ಟ್ರೋಲ್‌ಗೆ ತಮ್ಮದೇ ರೀತಿಯಲ್ಲಿ ತಿರುಗೇಟನ್ನು ಕೂಡ ನೀಡಿದ್ದಾರೆ.

ಇತ್ತೀಚೆಗೆ ಅವರು ತಮ್ಮ ಫಿಜಿ ಪ್ರವಾಸದ ಫೋಟೋಗಳನ್ನು ಟ್ವಿಟ್ಟರ್‌ ಸೇರಿದಂತೆ ಇತರ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದರು. ಫಿಜಿಯಿಂದ ಪೆಸಿಫಿಕ್ ಮಹಾಸಾಗರಕ್ಕೆ ಪೂಜ್ಯ ಸರ್ಕಾರ್ ಅವರ ಪ್ರಯಾಣ ಸಾಗರದ ತಮಾಷೆಯನ್ನು ವೀಕ್ಷಿಸುತ್ತಾ ಮತ್ತು ಅದರ ಮೇಲೆ ಹಡಗನ್ನು ಸಾಗಿಸುತ್ತಾ, ಸರ್ಕಾರ್ ಇಂದು ಅದನ್ನು ಓಡಿಸಿದರು, ಪ್ರತಿದಿನ ಹೊಸ ಆಯಾಮಗಳನ್ನು ಕಲಿಯುವುದು ಪೂಜ್ಯ ಸರ್ಕಾರ್ ಅವರ ಹವ್ಯಾಸ ಎಂದು ಬರೆದು ಟ್ವಿಟ್ಟರ್‌ನಲ್ಲಿ ಅವರು ಸಾಗರದಲ್ಲಿ ಅವರು ಹಡಗನ್ನು ಚಲಾಯಿಸುತ್ತಿರುವ ಹಾಗೂ ಕುಳಿತು ಸಾಗರವನ್ನು ವೀಕ್ಷಿಸುತ್ತಿರುವ ಕೆಲ ಫೋಟೋಗಳೊಂದಿಗೆ ಅವರು ಪೋಸ್ಟ್ ಮಾಡಿದ್ದಾರೆ.

Scroll to load tweet…

ಆದರೆ ಆಸೆ ಮೋಹ, ಮಾಯೆ ಇವೆಲ್ಲವನ್ನು ತ್ಯಜಿಸಿ ಸನ್ಯಾಸಿಯಾಗಿರುವ ವ್ಯಕ್ತಿಯೊಬ್ಬನ ಈ ಐಷಾರಾಮಿ ಲೈಫ್‌ಸ್ಟೈಲ್ ಯಾಕೋ ಜನರಿಗೆ ಇಷ್ಟವಾಗಿಲ್ಲ, ಇದೇ ಕಾರಣಕ್ಕೆ ಬಾಬಾ ಸಖತ್ ಟ್ರೋಲ್ ಆಗಿದ್ದಾರೆ. ಬಾಗೇಶ್ವರ್‌ ಧಾಮದ ಬಾಬಾ ಗುಸ್ಸಿ ಧರಿಸುತ್ತಾರೆ, ಆದರೆ ಅವರ ಭಕ್ತರು ಇನ್ನೂ ಪಾಲಿಕಾ ಬಜಾರ್‌ನಿಂದ 50 ಕನ್ನಡಕಗಳನ್ನು ಖರೀದಿಸುತ್ತಾರೆ ಎಂದು ಒಬ್ಬ ಬಳಕೆದಾರರು ಗೇಲಿ ಮಾಡಿದ್ದಾರೆ. ಹಾಗೆಯೇ ಇನ್ನೊಬ್ಬರು, ಬಾಬಾ ನಿಜವಾಗಿಯೂ ಭಾರತೀಯರನ್ನು ಮೂರ್ಖರನ್ನಾಗಿಸುವುದು ವಿಶ್ವದ ಸುಲಭವಾದ ಕೆಲಸ ಎಂದು ಭಾವಿಸಿದ್ದಾರೆ.. ಗುಸ್ಸಿ ಬ್ಯಾಗ್ ಶೋಕಿ ಅವರ ಆಧ್ಯಾತ್ಮಿಕ ಪರಿಕರಗಳ ಭಾಗವಾಗಿದೆ ಎಂದು ಮತ್ತೊಬ್ಬರು ವ್ಯಂಗ್ಯವಾಡಿದ್ದಾರೆ. ಮತ್ತೊಬ್ಬ ಬಳಕೆದಾರರು ಈ ಹಂತಕ್ಕೆ ಬೆಳೆಯಲು ಧೀರೇಂದ್ರ ಗಾರ್ಗ್ ಅವರ ಕಠಿಣ ಪರಿಶ್ರಮ ಯಾರಿಗೂ ಕಾಣಿಸುವುದಿಲ್ಲ ಬಾಬಾ ಬಾಗೇಶ್ವರ್ ಅವರ ಯಶಸ್ಸನ್ನು ಎಲ್ಲರೂ ನೋಡುತ್ತಾರೆ. ರಾತ್ರೋರಾತ್ರಿ ಯಾವುದೇ ಪವಾಡ ನಡೆದಿಲ್ಲ ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ.

Scroll to load tweet…

ಇಂದು ಭಾರತದಲ್ಲಿ ಧರ್ಮವು ಅತ್ಯಂತ ಲಾಭದಾಯಕ ವ್ಯವಹಾರವಾಗಿದೆ ಎಂದು ಮತ್ತೊಬ್ಬ ಬಳಕೆದಾರರು ಬರೆದಿದ್ದಾರೆ. ಹಾಗೆಯೇ ಮತ್ತೊಬ್ಬ ನೆಟ್ಟಿಜನ್ ಡೋಂಗಿ ನೌಟಂಕಿಬಾಜ್ ನಕಲಿ ಜನರನ್ನು ಮರುಳು ಮಾಡುವ ಮೂಲಕ ಐಷಾರಾಮಿ ಜೀವನವನ್ನು ನಡೆಸುತ್ತಿದ್ದಾರೆ ಎಂದು ಟೀಕಿಸಿದ್ದಾರೆ. ಹಾಗೆಯೇ ಇನ್ನೊಬ್ಬರು ನನಗೂ ಅಂತಹ ಪ್ರೀತಿ ಮತ್ತು ವಾತ್ಸಲ್ಯ ಬೇಕು, ನಂಬಿಕೆಯ ಹೆಸರಿನಲ್ಲಿ ಜನರನ್ನು ಹೇಗೆ ಮೂರ್ಖರನ್ನಾಗಿ ಮಾಡಲಾಗುತ್ತದೆ ಮತ್ತು ಗುಸ್ಸಿಯೊಂದಿಗೆ ಕ್ರೂಸ್ ಪ್ರವಾಸವನ್ನು ಹೇಗೆ ಏರ್ಪಡಿಸಲಾಗುತ್ತದೆ ಎಂದು ಯಾರೂ ನನಗೆ ಹೇಳಿಲ್ಲ ಎಂದು ಮತ್ತೊಬ್ಬರು ವ್ಯಂಗ್ಯವಾಡಿದ್ದಾರೆ.

Scroll to load tweet…

ಆದರೆ ಈ ಎಲ್ಲಾ ಆರೋಪಗಳಿಗೆ ಬಾಬಾ ಬಾಗೇಶ್ವರ್ ಬಾಬಾ ತಮ್ಮದೇ ರೀತಿಯಲ್ಲಿ ತಿರುಗೇಟು ನೀಡಿದ್ದಾರೆ ಎಂದು ವರದಿಯಾಗಿದೆ. 10 ರೂಪಾಯಿಯ ವ್ಯಕ್ತಿ 2 ಲಕ್ಷ ಮೌಲ್ಯದ ಜಾಕೆಟ್ ಧರಿಸಬಹುದಾದರೆ, ಸಂತನೊಬ್ಬ ₹60,000 ಮೌಲ್ಯದ ಜಾಕೆಟ್ ಧರಿಸಿದರೆ ಜನರಿಗೆ ಏಕೆ ನೋವು ಎಂದು ಅವರು ಪ್ರಶ್ನೆ ಮಾಡಿದ್ದಾರೆ. ಅಲ್ಲದೇ ನಾನು ಅದನ್ನು ಖರೀದಿಸಲಿಲ್ಲ... ನನ್ನ ಶಿಷ್ಯರು ಅದನ್ನು ನನಗೆ ಕೊಟ್ಟರು ಎಂದು ಅವರು ಹೇಳಿದ್ದಾರೆ. ಹಾಗೆಯೇ ನಿಮಗೆ ತುಂಬಾ ನೋವಾಗಿದ್ದರೆ ನಾನು ನಾಳೆ ₹1.2 ಲಕ್ಷ ಮೌಲ್ಯದ ಜಾಕೆಟ್ ಧರಿಸುತ್ತೇನೆ ಎಂದು ಹೇಳುವ ಮೂಲಕ ಬಾಬಾ ಟೀಕಾಕಾರರಿಗೆ ತಿರುಗೇಟು ನೀಡಿದ್ದಾರೆ.