ಕರ್ನಾಟಕದಲ್ಲಿ ಬಿಜೆಪಿ ಶಾಸಕರು ವಿಧಾನಸಭೆಯಲ್ಲೇ ಬ್ಲೂಫಿಲಂ ನೋಡಿದ್ದು ದೊಡ್ಡ ಸುದ್ದಿಯಾಗಿತ್ತು. ಈಗ ಅದೇ ರೀತಿಯ ಪ್ರಕರಣ ತ್ರಿಪುರದಲ್ಲಿ ವರದಿಯಾಗಿದೆ. ತ್ರಿಪುರದ ಬಾಗ್‌ಬಾಸಾ ಕ್ಷೇತ್ರದ ಶಾಸಕ ಜಾದಾಬ್‌ ಲಾಲ್‌ ನಾಥ್‌, ವಿಧಾನಸಭೆ ಅಧಿವೇಶನದ ವೇಳೆಯಲ್ಲಿಯೇ ಬ್ಲೂಫಿಲಂ ನೋಡಿ ಸಿಕ್ಕಿಬಿದ್ದಿದ್ದಾರೆ.

ನವದೆಹಲಿ (ಮಾ.30): ತ್ರಿಪುರದಲ್ಲಿ ವಿಧಾನಸಭೆ ಅಧಿವೇಶನ ನಡೆಯುವ ಸಮಯದಲ್ಲಿಯೇ ಬಿಜೆಪಿಯ ಶಾಸಕ ಬ್ಲೂಫಿಲಂ ನೋಡಿ ಸಿಕ್ಕಿಬಿದ್ದಿದ್ದಾರೆ. ಅವರ ವಿಡಿಯೋ ಕೂಡ ಸೋಶಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದೆ. ತ್ರಿಪುರದ ಬಾಗ್‌ಬಸಾ ಕ್ಷೇತದ ಶಾಸಕರಾಗಿರುವ ಜಾದಾಬ್‌ ಲಾಲ್‌ ನಾಥ್‌ ತಮ್ಮ ಮೊಬೈಲ್‌ ಫೋನ್‌ನಲ್ಲಿ ಅಶ್ಲೀಲ ಚಿತ್ರ ನೋಡುತ್ತಿರುವುದನ್ನು ಕ್ಯಾಮೆರಾ ಸೆರೆ ಮಾಡಿದೆ. ವಿಧಾನಸಭೆಯ ಅಧಿವೇಶನ ನಡೆಯುತ್ತಿದ್ದ ಸಮಯದಲ್ಲಿಯೇ ತಮ್ಮ ಮೊಬೈಲ್‌ ತೆರೆದು ಇರಿಸಿಕೊಂಡಿದ್ದ ಜಾದಾಬ್‌ ಲಾಲ್‌ ನಾಥ್‌, ಅದರಲ್ಲಿ ಪೋರ್ನ್‌ ವಿಡಿಯೋ ಕ್ಲಿಪ್‌ಗಳನ್ನು ನೋಡುತ್ತಿದ್ದರು. ಈ ವಿಡಿಯೋವೀಗ ಸೋಶಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದೆ. ರಾಜ್ಯ ವಿಧಾನಸಭೆಯಲ್ಲಿ ರಾಜ್ಯ ಬಜೆಟ್‌ಗೆ ಸಂಬಂಧಿಸಿದ ವಿಷಯಗಳ ಕುರಿತು ಚರ್ಚೆ ನಡೆಯುತ್ತಿರುವ ಸಮಯದಲ್ಲಿ ಜಾದಬ್‌ ಲಾಲ್‌ ಈ ಅಶ್ಲೀಲ ಕೃತ್ಯ ಮಾಡಿದ್ದಾರೆ ಎನ್ನಲಾಗಿದೆ. ಶಾಸಕರ ಹಿಂದೆ ಕುಳಿತಿರುವ ಯಾರೋ ಒಬ್ಬರು ಈ ವಿಡಿಯೋವನ್ನು ಸೆರೆಹಿಡಿದ್ದಾರೆ. ಸ್ಪೀಕರ್‌ ಹಾಗೂ ಇತರ ಶಾಸಕರು ಮಾತನಾಡುತ್ತಿರುವ ಸಂದರ್ಭದಲ್ಲಿ ಜಾದಾಬ್‌ ಲಾಲ್‌ ನಾಥ್‌ ತಮ್ಮ ಫೋನ್‌ನಲ್ಲಿ ಅಶ್ಲೀಲ ವಿಡಿಯೋ ವೀಕ್ಷಣೆ ಮಾಡುತ್ತಿದ್ದರು ಅನ್ನೋದನ್ನ ವಿಡಿಯೋ ತೋರಿಸಿದೆ.

ಈ ಕುರಿತಾಗಿ ಬಿಜೆಪಿ ಪಕ್ಷ ಶಾಸಕನಿಂದ ವಿವರಣೆ ಕರೆದಿದ್ದು, ರಾಜ್ಯ ಬಿಜೆಪಿ ಕಚೇರಿಗೆ ಆಗಮಿಸುವಂತೆ ತಿಳಿಸಿದೆ. ಈ ನಡುವೆ ಜಾದಾಬ್‌ ಲಾಲ್‌ ನಾಥ್‌ ತಮ್ಮ ಮೇಲಿನ ಆರೋಪ ಹಾಗೂ ವಿಡಿಯೋಗಳಿಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಅಧಿವೇಶನ ಮುಗಿದ ಬೆನ್ನಲ್ಲಿಯೇ ಅವರು ಅಧಿವೇಶನದ ಹಾಲ್‌ನಿಂದ ಬಿರುಸಾಗಿ ನಿರ್ಗಮಿಸಿದರು ಎಂದು ಮೂಲಗಳು ತಿಳಿಸಿವೆ.

2012ರಲ್ಲಿ ಕರ್ನಾಟಕದಲ್ಲೂ ಇದೇ ರೀತಿಯ ಘಟನೆ ನಡೆದಿತ್ತು. ಬಿಜೆಪಿ ಸರ್ಕಾರ ಅಧಿಕಾರದಲ್ಲಿದ್ದ ಸಮಯದಲ್ಲಿ ವಿಧಾನಸಭೆಯಲ್ಲಿ ಕಲಾಪ ನಡೆಯುತ್ತಿದ್ದಾರೆ. ಇಬ್ಬರು ಸಚಿವರು ಮೊಬೈಲ್‌ನಲ್ಲಿ ಬ್ಲ್ಯೂಫಿಲಂ ವೀಕ್ಷಣೆ ಮಾಡಿದ್ದು ಟಿವಿ ಕ್ಯಾಮೆರಾಗಳಲ್ಲಿ ಸೆರೆಯಾಗಿತ್ತು. ನಂತರ, ಅವರು "ಶೈಕ್ಷಣಿಕ ಉದ್ದೇಶಗಳಿಗಾಗಿ ಮತ್ತು ರೇವ್ ಪಾರ್ಟಿಗಳ ಬಗ್ಗೆ ಇನ್ನಷ್ಟು ತಿಳಿದುಕೊಳ್ಳಲು" ವೀಡಿಯೊವನ್ನು ವೀಕ್ಷಣೆ ಮಾಡುತ್ತಿದ್ದೆವು ಎಂದು ಜಾರಿಕೊಳ್ಳಲು ಪ್ರಯತ್ನಿಸಿದ್ದರು.

Scroll to load tweet…

ನಂದೇ ವಿಡಿಯೋ ಇರ್ಬಹುದಾ? ರೈಲು ನಿಲ್ದಾಣದಲ್ಲಿ ಅಶ್ಲೀಲ ಚಿತ್ರ ಪ್ರಸಾರ ಬಳಿಕ ಪೋರ್ನ್ ಸ್ಟಾರ್ ರಿಯಾಕ್ಷನ್ ವೈರಲ್

ಅಂದು ವಿಧಾನಸಭೆಯಲ್ಲಿ ಅಶ್ಲೀಲ ಕ್ಲಿಪ್‌ಗಳನ್ನು ವೀಕ್ಷಿಸಿದ್ದ ಸಚಿವ ಲಕ್ಷ್ಮಣ ಸವದಿ, ಇದನ್ನು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವ ಸಿಸಿ ಪಾಟೀಲ್‌ ಅವರೊಂದಿಗೆ ಹಂಚಿಕೊಂಡಿದ್ದರು. ಈ ಸುದ್ದಿ ವೈರಲ್‌ ಆದ ಬಳಿಕ 2019ರಲ್ಲಿ ಕರ್ನಾಟಕ ಮಹಿಳಾ ಕಾಂಗ್ರೆಸ್‌, ಅಂದಿನ ಉಪಮುಖ್ಯಮಂತ್ರಿಯಾಗಿದ್ದ ಲಕ್ಷ್ಮಣ್‌ ಸವದಿ ಅವರನ್ನು ವಜಾ ಮಾಡುವಂತೆ ಪ್ರಧಾನಿ ನರೇಂದ್ರ ಮೋದಿ ಹಾಗೂ ಅಮಿತ್‌ ಶಾ ಅವರನ್ನು ಒತ್ತಾಯಿಸಿತ್ತು.

ರೈಲು ನಿಲ್ದಾಣದಲ್ಲಿ 3 ನಿಮಿಷ ಪೋರ್ನ್‌ ಪ್ಲೇ... ಮಕ್ಕಳ ಕರೆದುಕೊಂಡು ಓಡಿದ ಜನ

ಇತ್ತೀಚೆಗೆ ಬಿಹಾರದ ಪಾಟ್ನಾ ಜಂಕ್ಷನ್‌ ರೈಲ್ವೇ ಸ್ಟೇಷನ್‌ ಕೂಡ ಇದೇ ಕಾರಣಕ್ಕೆ ಸುದ್ದಿಯಾಗಿತ್ತು. ರೈಲ್ವೇ ನಿಲ್ದಾಣದಲ್ಲಿ ಜಾಹೀರಾತು ಪ್ರಸಾರ ಮಾಡಲು ಇರುವ ಟಿವಿಯಲ್ಲಿ ಮೂರು ನಿಮಿಷಗಳ ಕಾಲ ಅಶ್ಲೀಲ ವಿಡಿಯೋ ಪ್ರಸಾರವಾಗಿತ್ತು. ಇದರ ಬೆನ್ನಲ್ಲಿಯೇ ರೈಲ್ವೇ ಇಲಾಖೆ, ಜಾಹೀರಾತು ಪ್ರಸಾರ ಮಾಡುವ ಕಂಪನಿಯೊಂದಿಗಿನ ಒಪ್ಪಂದವನ್ನು ರದ್ದು ಮಾಡಿತ್ತು.