ತಮಿಳುನಾಡು(ಆ.27):  ಈ ವರ್ಷ ಎಲ್ಲಾ ವಿದ್ಯಾರ್ಥಿಗಳು ಪರೀಕ್ಷೆ ಬರೆಯಲು ಇನ್ನಿಲ್ಲದ ಕಷ್ಟಪಟ್ಟಿದ್ದಾರೆ. ಕಾರಣ ಕೊರೋನಾ ವೈರಸ್. ಆದರೆ ಕೆಲ ವಿದ್ಯಾರ್ಥಿಗಳು ಶಿಕ್ಷಣ ಆರಂಭಿಸಿದ ದಿನದಿಂದ ಹರಸಾಹಸ ಪಡುತ್ತಿದ್ದಾರೆ. ಈ ರೀತಿ ಯಾವುದೇ ಮೂಲ ಸೌಕರ್ಯವಿಲ್ಲದೆ ಸಾಧನೆಗೈದ ವಿದ್ಯಾರ್ಥಿಗಳ ಪೈಕಿ ಸಿ ಶ್ರೀದೇವಿ ಎಲ್ಲರಿಗೂ ಸ್ಪೂರ್ತಿಯಾಗಿದ್ದಾಳೆ.

ಅಧಿಕಾರಿಗಳು, ಶಾಸಕರು ಫೇಲ್; ಒಡವೆ ಮಾರಿ ಗ್ರಾಮಸ್ಥರೇ ನಿರ್ಮಿಸಿದ್ರು ರಸ್ತೆ!.

ತಮಿಳುನಾಡಿನ ತ್ರಿಪ್ರೂರು ಜಿಲ್ಲೆಯಲ್ಲಿರುವ ಅಣ್ಣಾಮೈಲೇ ಹುಲಿ ಸಂರಕ್ಷಿತ ಅರಣ್ಯ ಪ್ರದೇಶದಲ್ಲಿರುವ ಬುಡಕಟ್ಟು ಜನಾಂಗದ ಸಿ ಶ್ರೀದೇವಿ SSLC ಪರೀಕ್ಷೆಗಾಗಿ 150 ಕಿ.ಮೀ ಪ್ರಯಾಣ ಮಾಡಿದ್ದಾಳೆ. ಇದಕ್ಕಾಗಿ 2 ರಾಜ್ಯಗಳ್ನು ದಾಟಿ ಪರೀಕ್ಷೆ ಬರೆದಿದ್ದಾಳೆ. ಇಷ್ಟೇ ಅಲ್ಲ ಶೇಕಡಾ 95 ಅಂಕ ಪಡೆದು ರಾಜ್ಯಕ್ಕೆ ಕೀರ್ತಿ ತಂದಿದ್ದಾಳೆ.
 
ತಮಿಳುನಾಡಿನ ಅಣ್ಣಾಮಲೈ ಹುಲಿ ಸಂರಕ್ಷಿತ ಅರಣ್ಯ ವಲಯದಿಂದ ಶ್ರೀದೇವಿ ಪರೀಕ್ಷೆಗಾಗಿ ಕೇರಳದ ಚಾಲಕುಡಿಗೆ ತೆರಳಿದ್ದಾಳೆ. ಈ ರೀತಿ ಸಾಹಸ ಮಾಡಿ ಪರೀಕ್ಷೆ ಬರೆದು ರಾಜ್ಯಕ್ಕೆ ಕೀರ್ತಿ ತಂದ ಶ್ರೀದೇವಿ ಇದೀಗ ಉನ್ನತ ಶಿಕ್ಷಣ ಮಾಡುವು ಗುರಿ ಇಟ್ಟುಕೊಂಡಿದ್ದಾಳೆ. ಈ ಬಾಲಕಿ ತಂದೆ ಕೂಡ ಮಗಳ ವಿದ್ಯಾಭ್ಯಾಸಕ್ಕೆ ಎಲ್ಲಾ ಸಹಕಾರ ನೀಡುವುದಾಗಿ ಹೇಳಿದ್ದಾರೆ. 

ಈ ಅರಣ್ಯವಲಯದಲ್ಲಿನ ಬುಡುಕಟ್ಟು ಜನಾಂಗ ಬಹುತೇಕ ಮಕ್ಕಳು ಸನಿಹದಲ್ಲಿ ಶಾಲೆ, ಉತ್ತಮ ರಸ್ತೆ, ಮೂಲ ಸೌಕರ್ಯವಿಲ್ಲದ ಕಾರಣ ಹೆಚ್ಚಿನವರು ವಿದ್ಯಾಭ್ಯಾಸ ಅರ್ಧಕ್ಕೆ ಮೊಟಕುಗೊಳಿಸಿದ್ದಾರೆ. ಆದರೆ ಶ್ರೀದೇವಿ ತಾನು ಈ ಅರಣ್ಯವಲಯದ ಬುಡುಕಟ್ಟು ಜನಾಂಗದ ಇತರ ಹೆಣ್ಣುಮಕ್ಕಳಿಗೆ ಮಾದರಿಯಾಗಬೇಕು ಎಂದು ಈ ರೀತಿ ಕಷ್ಟ ಪಟ್ಟು ವಿದ್ಯಾಭ್ಯಾಸ ಮುಂದುವರಿಸಿದ್ದಾಳೆ.