ಕಾಶ್ಮೀರಿ ಪಂಡಿತ ಸಮುದಾಯ ಸದಾ ಸಂತ್ರಸ್ತರ ನಾಟಕವಾಡಿದೆ ಎಂದು ಕಿಡಿಕಾರಿರುವ ಲಷ್ಕರ್‌ ಎ ತೊಯ್ಬಾದ ಸೋದರ ಸಂಘಟನೆ ‘ದ ರೆಸಿಸ್ಟೆನ್ಸ್‌ ಫೋರ್ಸ್‌’ (ಟಿಆರ್‌ಎಫ್‌) ಎಂಬ ಉಗ್ರ ಸಂಘಟನೆ, ಪ್ರಧಾನಿ ಪ್ಯಾಕೇಜ್‌ನಡಿ ಸರ್ಕಾರಿ ಉದ್ಯೋಗ ಪಡೆದಿರುವ 6 ಕಾಶ್ಮೀರಿ ಪಂಡಿತರಿಗೆ ಜೀವ ಬೆದರಿಕೆ ಹಾಕಿದೆ.

ಶ್ರೀನಗರ: ಕಾಶ್ಮೀರಿ ಪಂಡಿತ ಸಮುದಾಯ ಸದಾ ಸಂತ್ರಸ್ತರ ನಾಟಕವಾಡಿದೆ ಎಂದು ಕಿಡಿಕಾರಿರುವ ಲಷ್ಕರ್‌ ಎ ತೊಯ್ಬಾದ ಸೋದರ ಸಂಘಟನೆ ‘ದ ರೆಸಿಸ್ಟೆನ್ಸ್‌ ಫೋರ್ಸ್‌’ (ಟಿಆರ್‌ಎಫ್‌) ಎಂಬ ಉಗ್ರ ಸಂಘಟನೆ, ಪ್ರಧಾನಿ ಪ್ಯಾಕೇಜ್‌ನಡಿ ಸರ್ಕಾರಿ ಉದ್ಯೋಗ ಪಡೆದಿರುವ 6 ಕಾಶ್ಮೀರಿ ಪಂಡಿತರಿಗೆ ಜೀವ ಬೆದರಿಕೆ ಹಾಕಿದೆ. ಜೊತೆಗೆ ‘ದೇಶದ್ರೋಹಿಗಳ ನೆತ್ತರು ಹರಿಸೋದು ಖಚಿತ’ ಎಂದು ಎಚ್ಚರಿಸಿದೆ. ಈ ಕುರಿತು ಬೆದರಿಕೆ ಪತ್ರ ಪ್ರಕಟಿಸಿರುವ ಸಂಘಟನೆ, ಅದರಲ್ಲಿ 6 ಸರ್ಕಾರಿ ಉದ್ಯೋಗಿಗಳ ಹೆಸರನ್ನು ಪ್ರಕಟಿಸಿದೆ.

‘ಈ ಪಟ್ಟಿಯು ಪ್ರಧಾನಿ ಪ್ಯಾಕೇಜ್‌ ದೂತರಾಗಿರುವ ವಲಸಿಗ ಪಂಡಿತರ ಪರ ಸಹಾನುಭೂತಿ ಹೊಂದಿರುವವರ ಕಣ್ಣು ತೆರೆಸಬೇಕು. ಈ ವಲಸಿಗ ಕಾಶ್ಮೀರಿ ಪಂಡಿತರು 1990ರ ದಶಕದಲ್ಲಿ ಗುಪ್ತಚರ ಬ್ಯೂರೋದ ಪರವಾಗಿ ಕಾರ್ಯನಿರ್ವಹಿಸಿದ್ದರು. ಇದೀಗ ಕೇಂದ್ರ ಸರ್ಕಾರದ ದೂತರಂತೆ, ಸಂಘ ಪರಿವಾರದ ಅಜೆಂಡಾ ಜಾರಿಗಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.ಈ ಪ್ರಧಾನಿ ಪ್ಯಾಕೇಜ್‌ನ ದೂತರು ಉದ್ಯೋಗ ಪಡೆಯುವ ವೇಳೆ ಮಾಡಿಕೊಂಡ ಒಪ್ಪಂದದಲ್ಲಿ ದೆಹಲಿ ಪರ ಮತ್ತು ತಾವು ಕಾರ್ಯನಿರ್ವಹಿಸುವ ಎಲ್ಲಾ ಇಲಾಖೆಗಳನ್ನು ಭಾರತೀಯಕರಣಗೊಳಿಸುವುದಕ್ಕೆ ಸಮ್ಮತಿಸಿದ್ದಾರೆ. ಎಲ್ಲಾ ಇಲಾಖೆಗಳಿಗೂ ಇಂಥ ದೆಹಲಿ ದೂತರನ್ನು ನೇಮಕ ಮಾಡಲಾಗಿದೆ. ಇಂಥವರ ಪಟ್ಟಿದೊಡ್ಡದಿದೆ ಮತ್ತು ಶೀಘ್ರವೇ ಇಂಥ ದ್ರೋಹಿಗಳ ನೆತ್ತರನ್ನು ಚೆಲ್ಲಲಾಗುವುದು’ ಎಂದು ಉಗ್ರರು ಎಚ್ಚರಿಸಿದ್ದಾರೆ.

ಕಾಶ್ಮೀರದಲ್ಲಿ ಮತ್ತೆ ಮಾರಣಹೋಮದ ಮುನ್ಸೂಚನೆ, 56 ಪಂಡಿತರ ಲಿಸ್ಟ್‌ ಬಿಡುಗಡೆ ಮಾಡಿದ ಉಗ್ರವಾದಿಗಳು!

ಚುನಾವಣಾ ಆಯೋಗ ಬಿಜೆಪಿಯ ಶಾಖೆ; ಕೇಸರಿ ಪಕ್ಷದ ಸಂಕೇತ ಮೇರೆಗೆ ಚುನಾವಣೆಗಳು ನಡೆಯುತ್ತೆ: ಮೆಹಬೂಬಾ ಮುಫ್ತಿ