Asianet Suvarna News Asianet Suvarna News

ದೇವಸ್ಥಾನದ ಗೋಪುರಕ್ಕೆ ವಿಮಾನ ಡಿಕ್ಕಿ, ಪೈಲೆಟ್ ಸಾವು, ಕೋ ಪೈಲೆಟ್ ಗಂಭೀರ!

ದಟ್ಟ ಮಂಜು ಕವಿದ ವಾತಾರಣದಿಂದ ಸರಿಯಾದ ದಿಕ್ಕಿನಲ್ಲಿ ಹಾರಾಟ ನಡೆಸಲು ಸಾಧ್ಯವಾಗದೇ ದೇವಸ್ಥಾನಕ್ಕೆ ಡಿಕ್ಕಿ ಹೊಡೆದ ಘಟನೆ ನಡೆದಿದೆ.
 

Trainee aircraft crash into Temple in Madhya Pradesh rewa district pilot killed Co pilot injured ckm
Author
First Published Jan 6, 2023, 6:12 PM IST

ಭೋಪಾಲ್(ಜ.06): ತರಬೇತಿ ವೇಳೆ ವಿಮಾನ ನೇರವಾಗಿ ದೇವಸ್ಥಾನದ ಗೋಪುರಕ್ಕೆ ಡಿಕ್ಕಿ ಹೊಡೆದ ಘಟನೆ ಮಧ್ಯಪ್ರದೇಶದ ರೇವಾ ಜಿಲ್ಲೆಯಲ್ಲಿ ನಡೆದಿದೆ. ಪೈಲೆಟ್ ಹಾಗೂ ಕೋ ಪೈಲೆಟ್ ಇಬ್ಬರೇ ಇದ್ದ ತರಬೇತಿ ವಿಮಾನ ರೇವಾ ಜಿಲ್ಲೆಯ ಹೊರವಲಯದಲ್ಲಿ ಯಶಸ್ವಿಯಾಗಿ ಹಾರಾಟ ನಡೆಸಿದೆ. ಆದರೆ ಮಂಜು ಕವಿದ ವಾತಾವರಣ ಕಾರಣ ಪೈಲೆಟ್‌ಗೆ ಸರಿಯಾದ ದಿಕ್ಕಿನಲ್ಲಿ ಸಾಗಲು ಸಾಧ್ಯವಾಗಿಲ್ಲ. ಇದರ ಪರಿಣಾಮ ವಿಮಾನ ನೇರವಾಗಿ ದೇವಸ್ಥಾನದ ಗೋಪುರಕ್ಕೆ ಡಿಕ್ಕಿ ಹೊಡೆದು ನೆಲಕ್ಕೆ ಅಪ್ಪಳಿಸಿದೆ. ಈ ಭೀಕರ ಅಪಘಾತದಲ್ಲಿ ಪೈಲೆಟ್ ಮೃತಪಟ್ಟಿದ್ದಾರೆ. ಇನ್ನು ತರಬೇತಿ ಪಡೆಯುತ್ತಿದ್ದ ಕೋ ಪೈಲೆಟ್ ಗಂಭೀರವಾಗಿ ಗಾಯಗೊಂಡಿದ್ದಾರೆ.

ಮಧ್ಯಪ್ರದೇಶ ರಾಜಧಾನಿ ಭೋಪಾಲ್‌ನಿಂದ 400 ಕಿಲೋಮೀಟರ್ ದೂರದಲ್ಲಿ ಈ ಘಟನೆ ನಡೆದಿದೆ. ನಿನ್ನೆ(ಜ.05)  ಎಂದಿನಂತೆ ತರಬೇತಿಯಲ್ಲಿ ತೊಡಗಿದ್ದ ವಿಮಾನ ರಾತ್ರಿ 11.1.30ಕ್ಕೆ ಅಪಘಾತಕ್ಕೀಡಾಗಿದೆ. ದೇವಸ್ಥಾನದ ಗೋಪುರಕ್ಕೆ ಡಿಕ್ಕಿ ಹೊಡೆದ ವಿಮಾನ ಚೊರಟ್ಟ ಏರೋ ಟ್ರೈನಿ ಕೇಂದ್ರದ ಕೆಲ ದೂರದಲ್ಲಿ ನೆಲಕ್ಕೆ ಅಪ್ಪಳಿಸಿದೆ. ಪೈಲೆಟ್ ವಿಮಲ್ ಕುಮಾರ್(50) ತೀವ್ರವಾಗಿ ಗಾಯಗೊಂಡು ಸ್ಥಳದಲ್ಲೇ ನಿಧನರಾಗಿದ್ದಾರೆ. ಇನ್ನು ಕೋ ಪೈಲೈಟ್ ಸೋನು ಯಾದವ್ ಗಾಯಗೊಂಡಿದ್ದಾರೆ. 23 ವರ್ಷದ ಸೋನು ಯಾದವ್ ಅವರನ್ನು ಸಂಜಯ್ ಗಾಂದಿ ಮೆಡಿಕಲ್ ಕಾಲೇಜು ಆಸ್ಪತ್ರೆಗೆ ದಾಖಲಿಸಲಾಗಿದೆ. 

ಬೀಚ್‌ನಲ್ಲಿ 2 ಹೆಲಿಕಾಪ್ಟರ್‌ ಮಧ್ಯೆ ಡಿಕ್ಕಿ: 4 ಮಂದಿ ದುರ್ಮರಣ

ಈ ವಿಮಾನ ಖಾಸಗಿ ಎವಿಯೇಶನ್ ಸಂಸ್ಥೆಗೆ ಸೇರಿದೆ. ರಾತ್ರಿ ವೇಳೆ ಮಂಜು ಕವಿದ ವಾತವರಣವಿತ್ತು. ಹೀಗಾಗಿ ಪೈಲೆಟ್‌ಗೆ ಸರಿಯಾದ ದಿಕ್ಕಿನಲ್ಲಿ ವಿಮಾನ ಹಾರಾಡಿಸಲು ಸಾಧ್ಯವಾಗಿಲ್ಲ. ಈ ಕಾರಣದಿಂದ ಅಪಘಾತಕ್ಕೀಡಾಗಿರುವ ಸಾಧ್ಯತೆ ಹೆಚ್ಚು ಎಂದು ಪ್ರಥಮ ಮಾಹಿತಿಯಲ್ಲಿ ಹೇಳಾಗಿದೆ. ಈ ಕುರಿತು ಪ್ರಕರಣ ದಾಖಲಾಗಿದ್ದು ತನಿಖೆ ನಡೆಯುತ್ತಿದೆ.

ದೇವಸ್ಥಾನದ ಗೋಪುರಕ್ಕೆ ಡಿಕ್ಕಿ ಹೊಡೆದ ವಿಮಾನವನ್ನು ನಿಯಂತ್ರಣಕ್ಕೆ ತೆಗೆದುಕೊಳ್ಳಲು ಪೈಲೆಟ್ ಪ್ರಯತ್ನಿಸಿದ್ದಾರೆ. ಆದರೆ ಸಾಧ್ಯವಾಗಿಲ್ಲ. ಸುರಕ್ಷಿತವಾಗಿ ಲ್ಯಾಂಡ್ ಮಾಡಲು ಪ್ರಯತ್ನಿಸಿದ ವೇಳೆ ವಿಮಾನ ವಿದ್ಯುತ್ ತಂತಿಗೆ ಬಿಡಿದು ನೆಲಕ್ಕೆ ಅಪ್ಪಳಿಸಿದೆ. ಸ್ಥಳೀಯರು ಸ್ಥಳಕ್ಕೆ ಆಗಮಿಸಿ ರಕ್ಷಣ ಕಾರ್ಯದಲ್ಲಿ ತೊಡಗಿದ್ದಾರೆ. ಈ ವೇಳೆ ಪೊಲೀಸರು ಹಾಗೂ ಆ್ಯಂಬುಲೆನ್ಸ್ ಆಗಮಿಸಿದೆ. ಬಳಿಕ ಇಬ್ಬರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಆದರೆ ಪೈಲೆಟ್ ವಿಮಲ್ ಕುಮಾರ್ ಬದುಕಿ ಉಳಿಯಲಿಲ್ಲ. ಇತ್ತ ಚಿಕಿತ್ಸೆ ಪಡೆಯುತ್ತಿರುವ ಸೋನು ಯಾದವ್ ಆರೋಗ್ಯ ಸ್ಥಿರವಾಗಿದೆ ಎಂದು ಮಧ್ಯಪ್ರದೇಶ ಗೃಹ ಸಟಿವ ನರೋತ್ತಮ್ ಮಿಶ್ರಾ ಹೇಳಿದ್ದಾರೆ.

ವಿಮಾನಯಾನ ಸಂಸ್ಥೆಗೆ ಮಾಹಿತಿ ನೀಡಲಾಗಿದೆ. ಈಗಾಗಲೇ ಏವಿಶೇಯನ್ ಅಧಿಕಾರಿಗಲು ತನಿಖೆ ನಡೆಸುತ್ತಿದ್ದಾರೆ. ರೇವಾ ಜಿಲ್ಲೆಗೆ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ. ಇತ್ತ ಡಿಕ್ಕಿಯಾದ ದೇವಸ್ಥಾನದ ಗೋಪುರು ಹಾನಿಯಾಗಿದೆ. ಅದೃಷ್ಟವಶಾತ್ ದೇವಸ್ಥಾನದಲ್ಲಿದ್ದ ಭಕ್ತರು, ಅರ್ಚರು, ಸಿಬ್ಬಂಧಿಗಳಿಗೆ ಯಾವುದೇ ಹಾನಿಯಾಗಿಲ್ಲ. 

CDS ಹೆಲಿಕಾಪ್ಟರ್ ದುರಂತಕ್ಕೆ ಒಂದು ವರ್ಷ, ಬಿಪಿನ್ ರಾವತ್ ಸೇರಿ ಅಗಲಿದ ಗಣ್ಯರಿಗೆ ನಮನ!

ಜಿಲ್ಲಾಧಿಕಾರಿ ಸ್ಥಳಕ್ಕೆ ಬೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ದೇವಸ್ಥಾನಕ್ಕೂ ಭೇಟಿ ನೀಡಿ ಹಾನಿಗೊಳದಾಗ ಗೋಪುರ ಸೇರಿದಂತೆ ದೇವಸ್ಥಾನದ ಆವರಣವನ್ನು ಪರಿಶೀಲನೆ ನಡೆಸಿದ್ದಾರೆ. ಇತ್ತ ಖಾಸಗಿ ತರಬೇತಿ ವಿಮಾನ ಸಂಸ್ಥೆ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿ ಮಾಹಿತಿ ಕಲೆಹಾಕಿದ್ದಾರೆ.

Follow Us:
Download App:
  • android
  • ios