ಎಲ್ಲ ಬಗೆಯ ರೈಲುಗಳ ಪ್ರಯಾಣ ದರವನ್ನು ಭಾರತೀಯ ರೈಲ್ವೆ ಇಲಾಖೆ ಇದೇ ವಾರ ಹೆಚ್ಚಳ ಮಾಡಲಿದೆ ಎಂದು ಮೂಲಗಳು ತಿಳಿಸಿವೆ.
ನವದೆಹಲಿ [ಡಿ24: ಈರುಳ್ಳಿ, ಬೆಳ್ಳುಳ್ಳಿ ಬೆಲೆ ಏರಿಕೆಯಾಗಿದೆ ಎಂದು ಕೊರಗುತ್ತಿರುವ ನಾಗರಿಕರಿಗೆ ಈ ವಾರ ಇನ್ನೊಂದು ದರ ಏರಿಕೆಯ ಸುದ್ದಿ ಸಿಗುವ ಸಾಧ್ಯತೆಗಳು ದಟ್ಟವಾಗಿವೆ. ಎಲ್ಲ ಬಗೆಯ ರೈಲುಗಳ ಪ್ರಯಾಣ ದರವನ್ನು ಭಾರತೀಯ ರೈಲ್ವೆ ಇಲಾಖೆ ಇದೇ ವಾರ ಹೆಚ್ಚಳ ಮಾಡಲಿದೆ ಎಂದು ಮೂಲಗಳು ತಿಳಿಸಿವೆ.
ಪ್ರತಿ ಕಿ.ಮೀ.ಗೆ 5 ಪೈಸೆಯಿಂದ 40 ಪೈಸೆಯವರೆಗೂ ಪ್ರಯಾಣ ದರ ಏರಿಕೆಯಾಗಲಿದೆ. ಹವಾನಿಯಂತ್ರಿತ ದರ್ಜೆಯಿಂದ ಹಿಡಿದು, ಅನ್‌ರಿಸವ್‌್ರ್ಡ ಹಾಗೂ ಸಬರ್ಬನ್ ರೈಲುಗಳು, ಮಾಸಿಕ, ತ್ರೈಮಾಸಿಕ ಸೀಸನ್ ಟಿಕೆಟ್ (ಪಾಸ್)ಗಳ ದರದಲ್ಲೂ ಹೆಚ್ಚಳವಾಗಲಿದೆ ಎಂದು ರೈಲ್ವೆ ಇಲಾಖೆಯ ಮೂಲಗಳು ಮಾಹಿತಿ ನೀಡಿವೆ.
ಇನ್ಮುಂದೆ ಹುಬ್ಬಳ್ಳಿ-ಬೆಂಗಳೂರು ರೈಲು ಪ್ರಯಾಣಕ್ಕೆ ಐದೇ ತಾಸು..
ಹೊಸ ದರ ಪಟ್ಟಿಯನ್ನು ರೈಲ್ವೆ ಮಂಡಳಿ ಈಗಾಗಲೇ ಸಿದ್ಧಪಡಿಸಿದ್ದು, ಅದಕ್ಕೆ ಪ್ರಧಾನಮಂತ್ರಿ ಕಾರ್ಯಾಲಯದ ಒಪ್ಪಿಗೆಯೂ ದೊರೆತಿದೆ. ಜಾರ್ಖಂಡ್ ವಿಧಾನಸಭೆ ಚುನಾವಣೆ ಮುಗಿಯುವವರೆಗೂ ದರ ಏರಿಕೆ ಮಾಡದಂತೆ ಕೇಂದ್ರ ಸರ್ಕಾರದಿಂದ ಸೂಚನೆ ಬಂದಿತ್ತು. ಇದೀಗ ಚುನಾವಣೆ ಫಲಿತಾಂಶ ಪ್ರಕಟಗೊಂಡಿರುವ ಹಿನ್ನೆಲೆಯಲ್ಲಿ ಯಾವುದೇ ಸಮಯದಲ್ಲಿ ರೈಲು ಪ್ರಯಾಣ ದರ ಪರಿಷ್ಕರಣೆಯಾಗಬಹುದು ಎಂದು ಮೂಲಗಳು ಹೇಳಿವೆ.
