12650 ರೈಲು ಹೈಜಾಕ್ ಮಾಡಲಾಗಿದೆ ಎಂದು ಟ್ವೀಟ್ ಪ್ರಯಾಣಿಕರಲ್ಲಿ ಆತಂಕ ಸೃಷ್ಟಿಸಿದ ರೈಲು ಹೈಜಾಕ್ ಗೊಂದಲಕ್ಕೆ ತೆರೆ ಎಳೆದೆ ಭಾರತೀಯ ರೈಲ್ವೇ ಇಲಾಖೆ

ನವದೆಹಲಿ(ಜು.10): ಕರ್ನಾಟಕ ಸಂಪರ್ಕ ಕ್ರಾಂತಿ ಎಕ್ಸ್‌ಪ್ರೆಸ್ ರೈಲು ಹೈಜಾಕ್ ಆಗಿದೆ. ತಕ್ಷಣ ನೆರವು ನೀಡಿ ಎಂದು ಪ್ರಯಾಣಕನ ಟ್ವೀಟ್‌ಗೆ ಭಾರತೀಯ ರೈಲ್ವೇ ಇಲಾಖೆ ಒಂದು ಕ್ಷಣ ಬೆಚ್ಚಿ ಬಿದ್ದಿತ್ತು. ತಕ್ಷಣವೇ ಕಾರ್ಯಪ್ರವೃತ್ತರಾದ ರೈಲ್ವೇ ಇಲಾಖೆಗೆ ಸಮಾಧಾನದ ವಿಚಾರ ತಿಳಿದಿದೆ. ಕಾರಣ ದೆಹಲಿ ಬೆಂಗಳೂರು ನಡುವಿನ ರೈಲನ್ನು ಮಾರ್ಗ ಬದಲಾಯಿಸಲಾಗಿತ್ತು ಅಷ್ಟೇ. ಹೀಗಾಗಿ ಪ್ರಯಾಣಿಕರಲ್ಲಿ ಆತಂಕ ಹಾಗೂ ಗೊಂದಲಕ್ಕೆ ರೈಲ್ವೇ ಇಲಾಖೆ ತೆರೆ ಎಳೆದಿದೆ.

ಹಜ್ರತ್ ನಿಜಾಮುದ್ದೀನ್ - ಯಶವಂತಪುರ ನಡುವಿನ ಕರ್ನಾಟಕ ಸಂಪರ್ಕ ಕ್ರಾಂತಿ ಎಕ್ಸ್‌‌ಪ್ರೆಸ್ ರೈಲಿನ ಪ್ರಯಾಣಿಕನೋರ್ವ ಈ ರೈಲು ಹೈಜಾಕ್ ಮಾಡಲಾಗಿದೆ. ದಯವಿಟ್ಟು ತಕ್ಷಣವೆ ಸಹಾಯ ಮಾಡಿ ಎಂದು ಟ್ವೀಟ್ ಮಾಡಿದ್ದಾನೆ. ತಕ್ಷಣವೇ ಕಾರ್ಯಪ್ರವೃತ್ತರಾದ ರೈಲ್ವೇ ಇಲಾಖೆ ಅಧಿಕಾರಿಗಳನ್ನು ಸಂಪರ್ಕಿಸಿದೆ. ಈ ವೇಳೆ ಹಜ್ರತ್ ನಿಜಾಮುದ್ದೀನ್ - ಯಶವಂತಪುರ ರೈಲಿನ ಮಾರ್ಗ ಬದಲಾಯಿಸಲಾಗಿದೆ. ಯಾವುದೇ ಹೈಜಾಕ್ ಆಗಿಲ್ಲ. ಪ್ರಯಾಣಿಕರು ಆತಂಕ ಪಡುವ ಅಗತ್ಯವಿಲ್ಲ ಎಂದು ಟ್ವೀಟ್ ಮೂಲಕ ಸ್ಪಷ್ಟನೆ ನೀಡಿದೆ.

ಭಾರತದ ಅತ್ಯಂತ ಐಷಾರಾಮಿ ರೈಲುಗಳು ಮತ್ತು ಅದರ ದರಗಳು

ರೈಲು ಮಾರ್ಗ ಬದಲಾವಣೆ ಕಾರಣ ರೈಲುನ್ನು ಹೈಜಾಕ್ ಮಾಡಲಾಗಿದೆ. ಈ ರೈಲು ಪೂರ್ವನಿಗದಿತ ಮಾರ್ಗದಲ್ಲಿ ಸಂಚರಿಸುತ್ತಿಲ್ಲ ಎಂದು ಭಯಭೀತಗೊಂಡಿದ್ದಾರೆ. ಇದರ ಬೆನ್ನಲ್ಲೇ ಪ್ರಯಾಣಿಕನೋರ್ವ ಟ್ವೀಟ್ ಮೂಲಕ ಭಾರತೀಯ ರೈಲ್ವೇ ಸಚಿವಾಲಯಕ್ಕೆ ಮಾಹಿತಿ ನೀಡಿದ್ದಾನೆ. ರೈಲ್ವೇ ಸೇವಾ ಕೇಂದ್ರ ತಕ್ಷಣವೇ ಈ ಕುರಿತು ಪರೀಶೀಲಸಲು ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. 

Scroll to load tweet…

ರೈಲ್ವೇ ಸಚಿವಾಲಯ ಯಾವುದೇ ಸಮಸ್ಯೆ ತಕ್ಷಣವೇ ಸ್ಪಂದಿಸುತ್ತದೆ. ಹಲವು ಬಾರಿ ಪ್ರಯಾಣಿಕರು ತಮ್ಮ ಆತಂಕ, ಸಮಸ್ಸೆಯನ್ನು ಟ್ವೀಟ್ ಮೂಲಕ ತೋಡಿಕೊಂಡಿದ್ದಾರೆ. ಮರುಕ್ಷಣದಲ್ಲೇ ರೈಲ್ವೇ ಸಚಿವಾಲಯ ಸ್ಪಂದಿಸಿ ಸಮಸ್ಯೆ ಬಗೆಹರಿಸಿದ ಅದೆಷ್ಟೋ ಉದಾಹರಣೆಗಳಿವೆ.

ಸಂಪರ್ಕಕ್ಕೆ ಸಿಗದ ಬಾಲಕ, ತಂದೆ ಟ್ವೀಟ್‌ಗೆ ಸ್ಪಂದಿಸಿದ ರೈಲ್ವೆ
ಮೊದಲ ಬಾರಿಗೆ ಏಕಾಂಗಿಯಾಗಿ ರೈಲು ಪ್ರಯಾಣ ಮಾಡಿರುವ ಬಾಲಕನೊಬ್ಬ ಇಳಿಯಬೇಕಾದ ನಿಲ್ದಾಣದಲ್ಲಿ ಇಳಿಯದ ಕಾರಣ ಸಂಪರ್ಕಕ್ಕೆ ಸಿಗದೆ ಗಾಬರಿಗೊಂಡ ಆತನ ತಂದೆ ರೈಲ್ವೆ ಸಚಿವರಿಗೆ ಸಹಾಯ ಕೋರಿ ಟ್ವೀಟ್‌ ಮಾಡಿದ್ದರು. ಟ್ವೀಟ್‌ಗೆ ತಕ್ಷಣ ಸ್ಪಂದಿಸಿರುವ ರೈಲ್ವೆ ಸಚಿವಾಲಯ 34 ನಿಮಿಷಗಳ ಒಳಗಾಗಿ ಪುತ್ರನಿಂದ ತಂದೆಗೆ ಕರೆ ಮಾಡಿಸಿದೆ. ಮಂಗಳೂರಿನ ಕಿಶನ್‌ರಾವ್‌ ಎಂಬುವವರ ಪುತ್ರ 16 ವರ್ಷದ ಶಂತನು, ಏ.19ರಂದು ಮಂಗಳೂರಿನಿಂದ ಕೇರಳದ ಪಿರವಂಗೆ ಹೊರಟಿದ್ದ. ಆದರೆ ಅಲ್ಲಿ ಇಳಿಯದೇ ಕೊಟ್ಟಾಯಂಗೆ ಹೋಗಿ ಇಳಿದುಕೊಂಡಿದ್ದ. ಪಿರವಂನಲ್ಲಿ ಬಾಲಕನನ್ನು ಕರೆದೊಯ್ಯಲು ಬಂದಿದ್ದ ಸಂಬಂಧಿಕರು ಶಂತನು ಬಾರದ ಬಗ್ಗೆ ತಂದೆಗೆ ತಿಳಿಸಿದ್ದಾರೆ. ಆತಂಕದಿಂದ ತಂದೆ ಕಿಶನ್‌ರಾವ್‌ ರೈಲ್ವೆ ಸಚಿವಾಲಯಕ್ಕೆ ಟ್ವೀಟ್‌ ಮಾಡಿದ್ದು, ಕೊಟ್ಟಾಯಂನ ಅಧಿಕಾರಿಗಳು ಬಾಲಕನನ್ನು ಪತ್ತೆ ಹಚ್ಚಿ ಅರ್ಧಗಂಟೆಯಲ್ಲೇ ತಂದೆಯೊಂದಿಗೆ ಮಾತನಾಡಿಸಿ, ವಾಪಸ್‌ ರೈಲು ಹತ್ತಿಸಿ ಕಳಿಸಿದ್ದಾರೆ. ರೈಲ್ವೆ ಸಚಿವಾಲಯದ ತುರ್ತು ಸ್ಪಂದನೆಗೆ ಬಾಲಕನ ತಂದೆ ಶ್ಲಾಘನೆ ವ್ಯಕ್ತಪಡಿಸಿದ್ದಾರೆ.

ಇನ್ಮುಂದೆ ವಿಮಾನ, ರೈಲಲ್ಲೂ ಸಿಗಲಿದೆ ನಂದಿನಿ ಉತ್ಪನ್ನ

ಕಳೆದಿದ್ದ ಪ್ರಶಸ್ತಿ ಫಲಕ ಹಿಂತಿರುಗಿಸಿದ ರೈಲ್ವೆ!
ರೈಲು ನಿಲ್ದಾಣದಲ್ಲಿ ಬಿಟ್ಟು ಹೋದ ಪ್ರಶಸ್ತಿ ಫಲಕವನ್ನು ಹಿಂಡೆಯಲು ವಾಟ್ಸಪ್‌ನಲ್ಲಿ ಕಳುಹಿಸಿದ ಸಂದೇಶಕ್ಕೆ ಸ್ಪಂದಿಸಿದ ರೈಲ್ವೆ ಇಲಾಖೆ ಪ್ರಶಸ್ತಿ ಫಲಕವನ್ನು ಸುರಕ್ಷಿತವಾಗಿ ಹಿಂತಿರುಗಿಸಿದ ಘಟನೆ ಮೆಚ್ಚುಗೆಗೆ ಪಾತ್ರವಾಗಿದೆ.

ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ ಸರ್ಕಾರಿ ಪಿಯು ಕಾಲೇಜಿನ ಕನ್ನಡ ಉಪನ್ಯಾಸಕಿ ಡಾ.ಲಕ್ಷ್ಮೇ ಜಿ.ಪ್ರಸಾದ್‌ ಎರಡು ದಿನಗಳ ಹಿಂದೆ ಮಂಗಳೂರಿಗೆ ಆಗಮಿಸಿದ್ದರು. ಅವರಿಗೆ ಕುತ್ತಾರು ಬಳಿ ನಡೆದ ಕಾರ್ಯಕ್ರಮವೊಂದರಲ್ಲಿ ಪ್ರಶಸ್ತಿ ಫಲಕ ನೀಡಿ ಸನ್ಮಾನಿಸಲಾಗಿತ್ತು. ಕಾರ್ಯಕ್ರಮ ಮುಗಿಸಿಕೊಂಡು ಅವರು ಭಾನುವಾರ ರಾತ್ರಿ ಮಂಗಳೂರು ಸೆಂಟ್ರಲ್‌ ರೈಲು ನಿಲ್ದಾಣಕ್ಕೆ ಆಗಮಿಸಿದ್ದರು. ಬೆಂಗಳೂರಿಗೆ ತೆರಳಲು ರಾತ್ರಿ ರೈಲು ಏರಿದ್ದರು. ರೈಲು ಸುಬ್ರಹ್ಮಣ್ಯ ಮಾರ್ಗ ನಿಲ್ದಾಣ ತಲುಪುವ ವೇಳೆ ಪ್ರಶಸ್ತಿ ಫಲಕ ಜೊತೆಗಿರುವ ಲಗೇಜಿನಲ್ಲಿ ಇಲ್ಲದಿರುವುದು ಅವರ ಗಮನಕ್ಕೆ ಬಂದಿತ್ತು. ರೈಲ್ವೆಯ ವಾಟ್ಸಪ್‌ ಸಂಖ್ಯೆ ಪಡೆದು ಕನ್ನಡದಲ್ಲಿ ಪ್ರಶಸ್ತಿ ಫಲಕ ಕಳೆದುಹೋಗಿರುವ ಬಗ್ಗೆ ಸಂದೇಶ ಕಳುಹಿಸಿದ್ದರು.