ಬೆಂಗಾವಲು ವಾಹನ ವೇಗವಾಗಿ ಸಾಗುತ್ತಿರುವ ವೇಳೆ ಕಾರಿನಿಂದ ಗರಿ ಗರಿ ನೋಟುಗಳು ಗಾಳಿಯಲ್ಲಿ ಹಾರಿ ಹೋಗಿದೆ. ರಸ್ತೆಯಲ್ಲೇ ವಾಹನ ನಿಲ್ಲಿಸಿ ನೋಟುಗಳ ಸಂಗ್ರಹಕ್ಕೆ ಸವಾರರು ಹಾಗೂ ಸ್ಥಳೀಯರು ಮುಂದಾಗಿದ್ದಾರೆ. ಇದರಿಂದ ಬಾರಿ ಟ್ರಾಫಿ ಜಾಮ್ ಸಂಭವಿಸಿದೆ. 

ನೋಯ್ಡಾ(ನ.27) ರಸ್ತೆಯಲ್ಲಿ ವೇಗವವಾಗಿ ಬೆಂಗಾವಲು ವಾಹನ ಸಾಗಿದೆ. ಈ ಕಾರಿನ ವಿಂಡೋದಲ್ಲಿ ಕುಳಿತ ಕೆಲವರು ನೋಟುಗಳನ್ನು ರಸ್ತೆಗೆ ಎಸೆದಿದ್ದಾರೆ. ಅಪಾರ ಪ್ರಮಾಣದ ನೋಟುಗಳು ರಸ್ತೆ ಮೇಲೆ ಬಿದ್ದಿದೆ. ಇದರಿಂದ ಇದೇ ರಸ್ತೆಯಲ್ಲಿ ಸಂಚರಿಸುತ್ತಿದ್ದ ಇತರ ವಾಹನ ಸವಾರರು ವಾಹನಗಳ ನಿಲ್ಲಿಸಿ ನೋಟು ಸಂಗ್ರಹಿಸಲು ಮುಂದಾಗಿದ್ದಾರೆ. ಇತ್ತ ಸ್ಥಳೀಯರು ನೋಟುಗಳ ಸಂಗ್ರಹಿಸಲು ಪೈಪೋಟಿ ನಡೆಸಿದ್ದಾರೆ. ಇದರ ಪರಿಣಾಮ ಹೆದ್ದಾರಿ ಸಂಪೂರ್ಣ ಟ್ರಾಫಿಕ್ ಜಾಮ್ ಆದ ಘಟನೆ ದೆಹಲಿಯ ನೋಯ್ಡಾ ಬಳಿ ನಡೆದಿದೆ. ಈ ವಿಡಿಯೋ ವೈರಲ್ ಆಗುತ್ತಿದ್ದಂತೆ ಎಚ್ಚೆತ್ತ ಟ್ರಾಫಿಕ್ ಪೊಲೀಸರು ತನಿಖೆಗೆ ಆದೇಶಿಸಿದ್ದಾರೆ.

ನೋಯ್ಡಾದ ಹೆದ್ದಾರಿಯಲ್ಲಿ ಖಾಸಗಿ ವ್ಯಕ್ತಿಗಳ ಬೆಂಗಾವಲು ವಾಹನಗಳು ವೇಗವವಾಗಿ ಸಾಗಿದೆ. ಹತ್ತಕ್ಕೂ ಹೆಚ್ಚಿನ ಬೆಂಗಾವಲು ವಾಹನದ ವಿಂಡೋಗಳಲ್ಲಿ ಹಲವರು ಕುಳಿತು ತೆರಳಿದ್ದಾರೆ. ಕಾರಿನ ಕಿಟಕಿಯಲ್ಲಿ ಕುಳಿತು ಪ್ರಯಾಣಿಸುವುದು ಟ್ರಾಫಿಕ್ ನಿಯಮ ಉಲ್ಲಂಘನೆಯಾಗಿದೆ. ಇನ್ನು ಬೆಂಗಾವಲು ವಾಹನದ ಕಿಟಕಿಯಲ್ಲಿ ಕುಳಿತವರು ನೋಟುಗಳನ್ನು ರಸ್ತೆಗೆ ಎಸೆದಿದ್ದಾರೆ. 

ಮದ್ವೇಲಿ ವರನಿಗೆ ನೋಟುಗಳದ್ದೇ ಹಾರ, ಖರ್ಚು ಮಾಡಿದ್ದು ಬರೋಬ್ಬರಿ 20 ಲಕ್ಷ ರೂ.!

ಈ ಕುರಿತ ವಿಡಿಯೋ ಸಾಮಾಜಿಕ ಜಾಲತಾಣಧಲ್ಲಿ ವೈರಲ್ ಆಗಿದೆ. ವಿಡಿಯೋದಲ್ಲಿ ನಿಯಮ ಬಾಹಿರವಾಗಿ ಕಾರಿನಲ್ಲಿ ಕುಳಿತು ನೋಟುಗಳನ್ನು ಹೊರಗೆಸೆಯುತ್ತಿರುವುದು ಸ್ಪಷ್ಟವಾಗಿದೆ. ಈ ಕರಿತು ಆಕ್ರೋಶಗಳು ವ್ಯಕ್ತವಾಗುತ್ತಿದ್ದಂತೆ ನೋಯ್ಡಾ ಟ್ರಾಫಿಕ್ ಪೊಲೀಸರು ತನಿಖೆಗೆ ಆದೇಶಿಸಿದ್ದಾರೆ. ಅತೀ ವೇಗದ ಚಾಲನೆ, ಕಾರಿನ ಕಿಟಕಿಯಲ್ಲಿಕುಳಿತು ಪ್ರಯಾಣ, ನೋಟುಗಳನ್ನು ರಸ್ತೆಗೆ ಎಸೆದು ವಿಕೃತಿ ಸೇರಿದಂತೆ ಹಲವು ಪ್ರಕರಣಗಳನ್ನು ದಾಖಲಿಸಿರುವ ಪೊಲೀಸರು ತನಿಖೆ ಆರಂಭಿಸಿದ್ದಾರೆ.

Scroll to load tweet…

ರಸ್ತೆಯಲ್ಲಿ ಹಣ ಚೆಲ್ಲವುದು ಇದು ಮೊದಲನೇ ಪ್ರಕರಣವಲ್ಲ. ಹಲವು ಬಾರಿ ಈ ರೀತಿಯಘಟನೆಗಳು ನಡೆದಿದೆ. ಆದರೆ ಈ ಬಾರಿ ಹಣದ ಜೊತೆಗೆ ಟ್ರಾಫಿಕ್ ನಿಯಮವನ್ನು ಉಲ್ಲಂಘಿಸಿದ್ದಾರೆ. ಹೀಗಾಗಿ ಹಲವು ಪ್ರಕರಣಗಳನ್ನು ದಾಖಲಿಸಲಾಗಿದೆ. ನೋಟುಗಳನ್ನು ರಸ್ತೆಗೆ ಎಸೆಯುವುದು ಕೂಡ ಅಪರಾಧವಾಗಿದೆ. 

ಈ ವಿಡಿಯೋ ವೈರಲ್ ಆಗುತ್ತಿದ್ದಂತೆ ನೋಯ್ಡಾ ಟ್ರಾಫಿಕ್ ಪೊಲೀಸರು ಪ್ರತಿಕ್ರಿಯೆ ನೀಡಿದ್ದರೆ. ಈ ವಿಡಿಯೋಗ ಎಕ್ಸ್(ಟ್ವಿಟರ್)ನಲ್ಲಿ ಪ್ರತಿಕ್ಕಿಯೆ ನೀಡಿರುವ ಪೊಲೀಸರು, ಘಟನೆ ಕುರಿತು ತನಿಖೆಗೆ ಸೂಚನೆ ನೀಡಲಾಗಿದೆ ಎಂದಿದ್ದಾರೆ.