ಜಿ20 ಶೃಂಗಸಭೆ ಮೂಲಕ ಭಾರತ ಸಾಧಿಸಿದ್ದೇನು? ವಿದೇಶಾಂಗ ಸಚಿವ ಜೈಶಂಕರ್ ಜೊತೆ ಸಂದರ್ಶನ!

ಜಿ20 ಶೃಂಗಸಭೆ ಅಧ್ಯಕ್ಷತೆ ವಹಿಸಿದ ಭಾರತ ಯಶಸ್ವಿಯಾಗಿ ಸಭೆ ಆಯೋಜಿಸಿ ವಿಶ್ವಕ್ಕೆ ಸಂದೇಶ ನೀಡಿದೆ. ಭಾರತ ವಿಶ್ವನಾಯಕನ ಸ್ಥಾನದಲ್ಲಿ ನಿಂತು ಜಾಗತಿಕ ಸಮಸ್ಯೆಗಳಿಗೆ ಪರಿಹಾರ ಸೂಚಿಸಿದೆ. ಜಿ20 ಶೃಂಗಸಭೆ, ಭಾರತದ ಪರಿಶ್ರಮ, ರಾಜತಾಂತ್ರಿಕತೆ ಸೇರಿದಂತೆ ಹಲವು ವಿಚಾರಗಳ ಕುರಿತು ವಿದೇಶಾಂಗ ಸಚಿವ ಜೈಶಂಕರ್ ಮಾತನಾಡಿದ್ದಾರೆ. ಏಷ್ಯಾನೆಟ್ ನ್ಯೂಸ್‌ಗಾಗಿ ನಿವೃತ್ತ ರಾಯಭಾರ ಅಧಿಕಾರಿ ಟಿಪಿ ಶ್ರೀನಿವಾಸನ್ ನಡೆಸಿದ ವಿಶೇಷ ಸಂದರ್ಶನ ವಿವರ ಇಲ್ಲಿದೆ.

TP Sreenivasan exclusive Interview with Foreign minister S Jaishankar after India G20 Success ckm

ತಿರುವನಂತಪುರಂ(ಸೆ.17)  ಜಿ20 ಶೃಂಗಸಭೆ ಮೂಲಕ ಭಾರತ ಜಗತ್ತಿಗೆ ತನ್ನ ಸಾಮರ್ಥ್ಯ ತೋರಿಸಿದೆ. ಇಷ್ಟೇ ಅಲ್ಲ ಪಾಶ್ಚಿಮಾತ್ಯ ದೇಶಗಳೇ ಅಜೆಂಡಾ ನಿರ್ಧರಿಸಬೇಕು ಅನ್ನೋ ಸಂಪ್ರದಾಯವನ್ನು ಭಾರತ ಮುರಿದು, ಜಾಗತಿಕ ಮಟ್ಟದಲ್ಲಿ ಭಾರತ ಅಜೆಂಡಾ ಸೆಟ್ ಮಾಡಿ ಹೊಸ ಅಧ್ಯಾಯ ಬರೆದಿದೆ ಎಂದು ವಿದೇಶಾಂಗ ಸಚಿವ ಡಾ.ಜೈಶಂಕರ್ ಹೇಳಿದ್ದಾರೆ. ಜಿ20 ಶೃಂಗಸಭೆ, ಭಾರತದ ವಿದೇಶಾಂಗ ನೀತಿ, ರಾಜತಾಂತ್ರಿಕತೆ ಕುರಿತು ಏಷ್ಯಾನೆಟ್ ನ್ಯೂಸ್ ನಡೆಸಿದ ವಿಶೇಷ ಸಂದರ್ಶನದ ವಿವರ ಇಲ್ಲಿದೆ. 

 ಜಿ20 ಅಧ್ಯಕ್ಷತೆ ವಹಿಸಿದ ಭಾರತ ಯಶಸ್ವಿಯಾಗಿ ಸಭೆ ಆಯೋಜಿಸಿ ವಿಶ್ವಕ್ಕೆ ಸಂದೇಶ ನೀಡಿದೆ. ನಾವು ಜಿ20 ಶೃಂಗಸಭೆ ಮೂಲಕ ನಮ್ಮ ರಾಜತಾಂತ್ರಿಕತೆಯನ್ನು ಮತ್ತಷ್ಟು ಬಲಪಡಿಸಿದ್ದೇವೆ. ಉಭಯ ದೇಶಗಳ ನಡುವಿನ ದ್ವಪಕ್ಷೀಯ ಸಂಬಂಧವನ್ನು ಗಟ್ಟಿಗೊಳಿಸಲಿದೆ. ಪ್ರಮುಖವಾಗಿ ರಾಜಕಾಂತ್ರಿಕತೆ, ವಿದೇಶಿ ನೀತಿಗಳು ಕೇವಲ ಸಭೆಯಲ್ಲಿ, ಒಂದು ಕೊಠಡಿಯಲ್ಲಿನ ಚರ್ಚೆಗೆ ಸೀಮಿತವಾಗದೆ ನಾವದನ್ನು ಸಾಮಾನ್ಯ ಜನರಿಗೆ ತಲುಪಿಸುವ ಪ್ರಯತ್ನ ಮಾಡಿದ್ದೇವೆ ಎಂದು ವಿದೇಶಾಂಗ ಸಚಿವ ಜೈಶಂಕರ್ ಹೇಳಿದ್ದಾರೆ.

ಶ್ರೀಲಂಕಾ ಪರಿಸ್ಥಿತಿ ಎದುರಿಸುವಾಗ ಜಾಗರೂಕತೆ ಅಗತ್ಯ, ಚೀನಾ ಕುತಂತ್ರ ಸೂಚನೆ ನೀಡಿದ ಮಾಜಿ ಭಾರತದ ರಾಯಭಾರಿ!

60 ನಗರದಲ್ಲಿ 200ಕ್ಕೂ ಹೆಚ್ಚು ಸಭೆಗಳನ್ನು ಯಶಸ್ವಿಯಾಗಿ ಆಯೋಜಿಸಿ ಜಾಗತಿಕ ಸಮಸ್ಯೆಗಳಿಂದ ಹಿಡಿದು ಸಾಮಾನ್ಯರ ಸಮಸ್ಯೆಗಳ ವರೆಗೆ ಚರ್ಚಿಸಿದ್ದೇವೆ. ವಿವಿಧ ನಗರಗಳಲ್ಲಿ ಜಿ20 ಸಭೆ ಆಯೋಜಿಸಿ, ವಿಶ್ವಕ್ಕೆ ಭಾರತದ ಪ್ರತಿ ಪ್ರದೇಶದ ಸಾಂಸ್ಕೃತಿಕ ಶ್ರೀಮಂತಿಕೆಯನ್ನು ತೋರಿಸಿದ್ದೇವೆ. ಪ್ರತಿ ಪ್ರದೇಶದ ಸಾಂಸ್ಕೃತಿ ವೈಭವನ್ನು ವಿಶ್ವನಾಯಕರಿಗೆ ಪರಿಚಯಿಸಿದ್ದೇವೆ. ಇದರ ಜೊತೆಗೆ ಅಲ್ಲಿನ ಜನರು ಜಿ20 ಸಮ್ಮೇಳನದ ಜೊತೆ ಸಾಗುವ ಮೂಲಕ ಸರ್ಕಾರ, ವಿದೇಶಿ ನೀತಿಗಳಲ್ಲಿ ಜನಸಾಮಾನ್ಯರ ಪಾಲ್ಗೊಳ್ಳುವಿಕೆ ಹೊಸ ಅಧ್ಯಾಯ ಬರೆದಿದೆ. ವಿದೇಶಿ ರಾಯಭಾರ ಕಚೇರಿ ಕರ್ತವ್ಯ, ವಿದೇಶಾಂಗ ಸಚಿವನಾಗಿ ನಾನು ಇದುವರೆಗೂ ಸಾಮಾನ್ಯ ಜನ ಈ ಮಟ್ಟಗಿನ ಸಹಕಾರ ಹಾಗೂ ಪಾಲ್ಗೊಳ್ಳುವಿಕೆ ನೋಡಿರಲಿಲ್ಲ ಎಂದು ಜೈಶಂಕರ್ ಹೇಳಿದ್ದಾರೆ.

ಈ ಜಿ20 ಮೂಲಕ ನಾವು ಜಗತ್ತಿಗೆ ಏನು ಎಂಬುದನ್ನು ಸಾಬೀತುಪಡಿಸಿದ್ದೇವೆ. ಸಮರ್ಥ ನಾಯಕತ್ವ, ಈ ದೇಶದಲ್ಲಿ ಮಿಳಿತಗೊಂಡಿರುವ ಧೈರ್ಯ ಹಾಗೂ ಉತ್ಸಾಕಹ ಮನೋಭಾವದಿಂದ ಜಿ20 ಸಂಪೂರ್ಣ ರೂಪುರೇಶೆಯನ್ನು ಭಾರತ ನಿರ್ಧರಿಸಿತ್ತು. ಈ ಮೂಲಕ ಪ್ರತಿ ಭಾರಿ ಪಾಶ್ಚಿಮಾತ್ಯ ದೇಶಗಳ ಕಪಿಮುಷ್ಠಿಯಲ್ಲಿದ್ದ ನಿರ್ಧಾರಗಳು ಈ ಬಾರಿ ಭಾರತ ತನ್ನ ಸ್ವಂತಿಕೆಯಿಂದಲೇ ನಿರ್ಧರಿಸಿತ್ತು. ಗ್ಲೋಬಲ್ ಸೌಥ್ ಅನ್ನೋ ಅಜೆಂಡಾ ಮೂಲಕ 120ಕ್ಕೂ ರಾಷ್ಟ್ರಗಳನ್ನು ಒಂದೆಡೆ ಸೇರಿಸಿ ನಾವು ಅಜೆಂಡಾ ಸೆಂಟ್ ಮಾಡಿದ್ದೇವೆ. ಇದು ಭಾರತದ ತಾಖತ್ತು. ಈ ಮೂಲಕ ಭಾರತದ ಜಿ20 ಅಧ್ಯಕ್ಷತೆ ಮೂಲ ಹೊಸ ಹೆಜ್ಜೆ ಇಡುತ್ತಿದೆ. ಜೊತೆಗೆ ಸರಿಯಾದ ದಿಕ್ಕಿನಲ್ಲಿ ಹೆಜ್ಜೆ ಇಡುತ್ತಿದೆ ಅನ್ನೋದು ಜನರಿಗೆ ಮನದಟ್ಟಾಗಿತ್ತು ಎಂದು ಜೈಶಂಕರ್ ಹೇಳಿದ್ದಾರೆ.

ದಿಲ್ಲಿ ಘೋಷಣೆ ಹಿಂದೆ 200 ಗಂಟೆ ಸಭೆ 300 ಚರ್ಚೆ: ಜಿ20 ಯಶಸ್ಸಿನ ಹಿಂದಿರುವ ರಾಜತಾಂತ್ರಿಕರಿವರು

ಭಾರತದಲ್ಲಿ ನಡೆದ ಜಿ20 ಸಮ್ಮೇಳದಲ್ಲಿ ಮೂಲಭೂತ ಸಮಸ್ಯೆಗಳ ಕುರಿತು ಚರ್ಚಿಸಲಾಗದೆ. ಇದು ಕೇವಲ ಜಾಗತಿಕ ತಾಪಮಾನ ಸೇರಿದಂತೆ ಕೆಲ ವಿಷಯಗಳಿಗೆ ಮಾತ್ರ ಸೀಮತವಾಗಿರಲಿಲ್ಲ. ಶಿಕ್ಷಣ, ಸಂಪನ್ಮೂಲ ಬಳಕೆ, ಆರೋಗ್ಯ, ಅಭಿವೃದ್ಧಿ ಸೇರಿದಂತೆ ಹಲವು ವಿಚಾರಗಳ ಕುರಿತು ಚರ್ಚಿಸಿದ್ದೇವೆ. ತಾಪಮಾನ ಬದಲಾವಣೆ ಕುರಿತು ಚರ್ಚಿಸಿದ್ದೇವೆ. ಈ ವೇಳೆ ಇದಕ್ಕೆ ಬೇಕಾದ ಆರ್ಥಿಕತೆ ಕುರಿತು ಚರ್ಚಿಸಿದ್ದೇವೆ. ಕೆಲ ದೇಶಗಳಲ್ಲಿ ಪೌಷ್ಠಿಕ ಆಹಾರ ಕೊರತೆ, ಶಿಕ್ಷಣ ವ್ಯವಸ್ಥೆ ಕುಸಿತ, ಹದಗೆಟ್ಟ ಆರೋಗ್ಯ ಪರಿಸ್ಥಿತಿ ಹಾಗೂ ವ್ಯವಸ್ಥೆಗಳಿವೆ. ಇದರ ನಡುವೆ ಜಾಗತಿಕವಾಗಿ ಪರಿಹಾರ ಕಂಡುಕೊಳ್ಳಲು ಭಾರತದ ಜಿ20 ಸಮ್ಮೇಳನ ಮುಖ್ಯವಾಗಿದೆ ಎಂದಿದ್ದಾರೆ.

ಜಿ20 ಸಭೆಗಳು ಅಥವಾ ಶೃಂಗಸಭೆಗಳು ಪಾಶ್ಚಿಮಾತ್ಯದ ಯುದ್ಧ ಸೇರಿದಂತೆ ಈ ರೀತಿಯ ವಿಷಕ್ಕೆ ಹೆಚ್ಚಿನ ಒತ್ತು ನೀಡುತ್ತದೆ. ಆದರೆ ಫಲಿತಾಂಶ ಶೂನ್ಯವಾಗಿರುತ್ತದೆ. ಅಮೆರಿಕದ ಮೇಲಿನ ಭಯೋತ್ವಾದಕರ ದಾಳಿ, ಕೋವಿಡ್ , ರಷ್ಯಾ-ಉಕ್ರೇನ್ ಯುದ್ಧ ಸೇರಿದಂತೆ ಪ್ರಮುಖ ಸಮಸ್ಯೆಗಳ ನಡುವೆ ಈ ಬಾರಿಯ ಜಿ20 ಶೃಂಗಸಭೆ ಉತ್ಸಾಹ ಕಳೆದುಕೊಂಡ ದೇಶಗಳಿಗೆ ಹೊಸ ಚೈತನ್ಯ ನೀಡಲು ಸಹಕಾರಿಯಾಗಿದೆ. 

ಪಾಶ್ಚಿಮಾತ್ಯ ದೇಶ ಒಂದೆಡೆಯಾದರೆ, ಮತ್ತೊಂದೆಡೆ ರಷ್ಯಾ. ಆದರೆ ಇದರ ನಡುವೆ ಹಲವು ದೇಶಗಳಿವೆ.  ಬಾಲಿಯಲ್ಲಿ ನಡೆದ ಜಿ20 ಶೃಂಗಸಭೆಯಲ್ಲಿ ಭಾರತ, ರಷ್ಯಾ ಸೇರಿದಂತೆ ಎಲ್ಲಾ ದೇಶಗಳು ಯುದ್ಧದ ಕುರಿತು ಒಪ್ಪಂದಕ್ಕೆ ಸಹಿ ಹಾಕಿದೆ. ಆದರೆ ಇದನ್ನೇ ಭಾರತದ ಜಿ20 ಶೃಂಗಸಭೆಯಲ್ಲಿ ಪುನರುಚ್ಚರಿಸುವುದು ಸೂಕ್ತವಲ್ಲ. ಇದು ಪರಿಸ್ಥಿತಿಗೆ ಅನುಗುಣವಾಗಿ ಬದಲಾಗಬೇಕು.  ನಾವು ರಷ್ಯಾ ಹಾಗೂ ಉಕ್ರೇನ್ ಯುದ್ಧದ ವಿಚಾರದಲ್ಲಿ ತೆಗೆದುಕೊಂಡ ನಿರ್ಣಯವನ್ನು ಎಲ್ಲಾ ಜಿ20 ದೇಶಗಳು ಒಪ್ಪಿಕೊಂಡಿದೆ. ಗ್ಲೋಬಲ್ ಸೌತ್ ಅನ್ನೋದು ಒಗ್ಗಟ್ಟು. ಈ ಒಗ್ಗಟ್ಟಿನ ಮೂಲಕ ಹಲವು ಸಮಸ್ಯೆಗಳನ್ನು ಬಗೆಹರಿಸಲು ಸಾಧ್ಯವಿದೆ. ಗ್ಲೋಬಲ್ ಸೌತ್ ಒಕ್ಕೂಟಕ್ಕೆ ನಾವು 125 ದೇಶಗಳನ್ನು ಆಹ್ವಾನಿಸಿದ್ದೇವು. ಇದಕ್ಕೆ ಎಲ್ಲಾ ದೇಶಗಳು ಸಮ್ಮತಿ ನೀಡಿ ಒಗ್ಗಟ್ಟಿನ ಭಾಗವಾಗಿದೆ. 

ಕೇರಳಕ್ಕೆ ಭೇಟಿ ನೀಡುವುದು ನನಗೆ ಖುಷಿಯ ವಿಚಾರ. ಪ್ರಮುಖವಾಗಿ ಇಂದು ವಿಶ್ವಕರ್ಮ ದಿನ. ದೇಶಾದ್ಯಂತ ವಿಶ್ವಕರ್ಮ ದಿನ ಆಚರಿಸಲಾಗುತ್ತಿದೆ. ಪ್ರಮುಖವಾಗಿ ಭಾರತಕ್ಕೆ ಕುಶಲಕರ್ಮಿಗಳ ಕೊಡುಗೆಯನ್ನು ಪರಿಗಣಿಸಿ ಅವರನ್ನು ಗೌರವಿಸುವ ಸಲುವಾಗಿ ಕೇಂದ್ರ ಸರ್ಕಾರ ಇಂದು ವಿಶ್ವಕರ್ಮ ದಿನವನ್ನು ಹಲವು ಕಾರ್ಯಕ್ರಮಗಳ ಮೂಲಕ ಆಚರಿಸುತ್ತಿದೆ. ಭಾರತದ ಸಾಂಸ್ಕತಿ ಹಾಗೂ ಪಾರಂಪರಿಕತೆಯನ್ನು ಎತ್ತಿಹಿಡಿಯುವಲ್ಲಿ ಅವರ ಕೊಡುಗೆ ಅಪಾರವಾಗಿದೆ. ಈ ಸಮುದಾಯವನ್ನು ಆರ್ಥಿಕವಾಗಿ, ಸಾಮಾಜಿಕವಾಗಿ, ಶೈಕ್ಷಣಿಕವಾಗಿ ಮೇಲೆತ್ತಲು ಕೇಂದ್ರ ಸರ್ಕಾರ ಹೊಸ ಯೋಜನೆಗಳನ್ನು ಜಾರಿಗೆ ತಂದಿದೆ. ಬಡ್ಡಿರಹಿತ ಸುಲಭ ಸಾಲ, ಜಾಗತಿಕ ಮಾರುಕಟ್ಟೆಗೆ ಕುಶಲಕರ್ಮಿಗಳನ್ನು ತೆರೆದುಕೊಳ್ಳುವಂತೆ ಮಾಡುವುದೇ ಈ ಯೋಜನೆಗಳ ಉದ್ದೇಶವಾಗಿದೆ ಎಂದು ಜೈಶಂಕರ್ ಹೇಳಿದ್ದಾರೆ.

Latest Videos
Follow Us:
Download App:
  • android
  • ios